Site icon Vistara News

Saving scheme : ಹಿರಿಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿ ನೀಡುವ ಉಳಿತಾಯ ಯೋಜನೆ ಯಾವುದು?

cash

ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಬಹುತೇಕ ಉಳಿತಾಯ ಯೋಜನೆ ಮತ್ತು ಖಾತೆಗಳಲ್ಲಿ ಇತರರಿಗಿಂತ ಸ್ವಲ್ಪ ಹೆಚ್ಚು ಬಡ್ಡಿ ದರ ಸಿಗುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ (senior citizen savings scheme) ಮತ್ತು ಫಿಕ್ಸೆಡ್‌ ಡೆಪಾಸಿಟ್‌ ಸ್ಕೀಮ್‌ಗಳಲ್ಲಿ ದೊರೆಯುವ ಬಡ್ಡಿ ಆದಾಯದ ಹೋಲಿಕೆ ಮಾಡಬಹುದು. ಇದರಿಂದ ನಿಮಗೆ ಯಾವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ಬರಲು ಅನುಕೂಲವಾಗುತ್ತದೆ.

ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆಯ (senior citizen savings scheme -SCSS) ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸುತ್ತದೆ. ಇದಕ್ಕೆ ಸರ್ಕಾರದ ಬೆಂಬಲ ಇದೆ. ಇದರಲ್ಲಿ ಇಡುವ 5 ಲಕ್ಷ ರೂ. ತನಕದ ಠೇವಣಿಗೆ‌ deposit insurance and credit guarantee corporation ವಿಮೆಯೂ ಸಿಗುತ್ತದೆ. ಫಿಕ್ಸೆಡ್‌ ಡಿಪಾಸಿಟ್ ಬಡ್ಡಿ ದರಗಳು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇರುತ್ತದೆ. SCSS ಮತ್ತು ಇತರ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಪಿಎನ್‌ಬಿ, ಎಕ್ಸಿಸ್‌ ಮತ್ತು ಯಸ್‌ ಬ್ಯಾಂಕ್‌ನಲ್ಲಿ 5 ವರ್ಷ ಅವಧಿಯ ನಿಶ್ಚಿತ ಠೇವಣಿಗಳಿಗೆ ಬಡ್ಡಿ ದರ ವಿವರ ಇಲ್ಲಿದೆ.

SCSS ಬಡ್ಡಿ ದರ: ಬಡ್ಡಿ ದರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 2023ರ ಜೂನ್‌ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು 8.0%ರಿಂದ 8.2% ಕ್ಕೆ ಏರಿಸಿದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ 1,000 ರೂ. ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಬಹುದು. 5 ವರ್ಷಗಳ ಈ ಯೋಜನೆಯನ್ನು ಮತ್ತೆ ಮೂರು ವರ್ಷ ವಿಸ್ತರಿಸಬಹುದು. ಅಂಚೆ ಕಚೇರಿಯನ್ನು ಸಂಪರ್ಕಿಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ ಸಿಗುವ ಬಡ್ಡಿ 50,000 ರೂ. ಮೀರಿದರೆ ಆಗ ತೆರಿಗೆ ಅನ್ವಯವಾಗುತ್ತದೆ. ಫಾರ್ಮ್‌ 15 ಜಿ/15 ಎಚ್‌ ಸಲ್ಲಿಸದಿದ್ದರೆ ಟಿಡಿಎಸ್‌ ಕಡಿತವಾಗುತ್ತದೆ.

ಎಸ್‌ ಬಿಐ ಹಿರಿಯ ನಾಗರಿಕರ ಎಫ್‌ಡಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) 2-3 ವರ್ಷ ಅವಧಿಯ ಫಿಕ್ಸೆಡ್‌ ಡಿಪಾಸಿಟ್‌ಗಳಿಗೆ 7.50% ಬಡ್ಡಿ ನೀಡುತ್ತದೆ. SBI We-care ಡೆಪಾಸಿಟ್‌ ಸ್ಕೀಮ್‌ನಲ್ಲಿ 5-10 ವರ್ಷಗಳ ಅವಧಿಗೆ 7.50% ಬಡ್ಡಿ ಸಿಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಸೀನಿಯರ್‌ ಸಿಟಿಜನ್‌ ಎಫ್‌ಡಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 5-10 ವರ್ಷದ ವರ್ಷದ ಎಫ್‌ಡಿಗೆ 7.75% ಬಡ್ಡಿ ಆದಾಯ ನೀಡುತ್ತದೆ. 4 ವರ್ಷ 7 ತಿಂಗಳಿನ ಎಫ್‌ಡಿಗೆ 7.75% ಬಡ್ಡಿ ಸಿಗುತ್ತದೆ.

ಐಸಿಐಸಿಐ ಬ್ಯಾಂಕ್‌ ಹಿರಿಯ ನಾಗರಿಕರ ಎಫ್‌ಡಿ: ಐಸಿಐಸಿಐ ಬ್ಯಾಂಕ್‌ 5 ವರ್ಷ ಅವಧಿಯ ಫಿಕ್ಸೆಡ್‌ ಡೆಪಾಸಿಟ್‌ಗೆ 7.60% ಬಡ್ಡಿ ನೀಡುತ್ತದೆ.

ಎಕ್ಸಿಸ್‌ ಬ್ಯಾಂಕ್‌ ಹಿರಿಯ ನಾಗರಿಕರ ಎಫ್‌ಡಿ: ಎಕ್ಸಿಸ್‌ ಬ್ಯಾಂಕ್‌ ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಯ ಡಿಪಾಸಿಟ್‌ಗೆ 7.75%-8.00% ಬಡ್ಡಿ ನೀಡುತ್ತದೆ.

ಯಸ್‌ ಬ್ಯಾಂಕ್‌ ಹಿರಿಯ ನಾಗರಿಕರ ಎಫ್‌ಡಿ: ಯಸ್‌ ಬ್ಯಾಂಕ್‌ ಹಿರಿಯ ನಾಗರಿಕರಿಗೆ 15 ತಿಂಗಳಿನಿಂದ 5 ವರ್ಷ ಅವಧಿಯ ಠೇವಣಿಗೆ 7.75%-8.25% ಬಡ್ಡಿ ನೀಡುತ್ತದೆ.

ಇದನ್ನೂ ಓದಿ:FD interest rates : ಐಒಬಿಯಲ್ಲಿ ಎಫ್‌ಡಿಗೆ 7.25%, ಹಿರಿಯ ನಾಗರಿಕರಿಗೆ 7.75% ಬಡ್ಡಿ ದರ

Exit mobile version