Site icon Vistara News

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

SBI Debit Cards

SBI Debit Cards

ನವದೆಹಲಿ: ನೀವು ಎಸ್‌ಬಿಐ (State Bank of India)ಯ ಡೆಬಿಟ್‌ ಕಾರ್ಡ್‌ ಹೊಂದಿದ್ದೀರಾ? ಹಾಗಾದರೆ ನಿಮಗಿದು ಬ್ಯಾಡ್‌ ನ್ಯೂಸ್‌. ಯಾಕೆಂದರೆ ಎಸ್‌ಬಿಐ ಕೆಲವು ವರ್ಗದ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ (SBI Debit Cards). ಹೊಸ ದರಗಳು ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಯಾವೆಲ್ಲ ಕಾರ್ಡ್‌ಗಳಿಗೆ ಅನ್ವಯ?

ಡೆಬಿಟ್ ಕಾರ್ಡ್‌ಗಳಾದ ಕ್ಲಾಸಿಕ್ / ಸಿಲ್ವರ್ / ಗ್ಲೋಬಲ್, ಯುವ / ಗೋಲ್ಡ್, ಪ್ಲಾಟಿನಂ ಮತ್ತು ಪ್ರೈಡ್ / ಪ್ರೀಮಿಯಂ ಬಿಸಿನೆಸ್ ವಿಭಾಗಗಳಿಗೆ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ವಿವಿಧ ವಿಭಾಗಗಳಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂ. ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ಸಹ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಡೆಬಿಟ್ ಕಾರ್ಡ್‌ಗಳ ವಿತರಣೆ ಮತ್ತು ಬದಲಾವಣೆಯೂ ಸೇರಿವೆ. ಗ್ರಾಹಕರು ಡೆಬಿಟ್ ಕಾರ್ಡ್ ಬದಲಾಯಿಸಲು (300 ರೂ. ಮತ್ತು ಜಿಎಸ್‌ಟಿ), ನಕಲಿ ಪಿನ್ / ಪಿನ್ ರಿಜನರೇಷನ್‌ (50 ರೂ. ಪ್ಲಸ್ ಜಿಎಸ್‌ಟಿ)ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟುಗಳಂತಹ ಸೇವೆಗಳ ಫೀಸ್‌ ಬಗ್ಗೆಯೂ ಎಸ್‌ಬಿಐ ಉಲ್ಲೇಖಿಸಿದೆ. ಎಲ್ಲ ಶುಲ್ಕಗಳು ಶೇ. 18 ರಷ್ಟು ಜಿಎಸ್‌ಟಿಯನ್ನು ಒಳಗೊಂಡಿದೆ.

ಇದನ್ನೂ ಓದಿ: LIC News: ಎಲ್‌ಐಸಿ ಈಗ ನಂಬರ್‌ ಒನ್‌ ಜಾಗತಿಕ ವಿಮೆ ಬ್ರಾಂಡ್!‌

ಕ್ರೆಡಿಟ್‌ ಕಾರ್ಡ್‌ನಲ್ಲಿಯೂ ಬದಲಾವಣೆ

ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ಕನಿಷ್ಠ ದಿನದ ಬಿಲ್ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಘೋಷಿಸಿದೆ. ಕೆಲವು ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ. ಇದುವರೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದರ ಪಾವತಿ ಮಾಡುವವರಿಗೆ ರಿವಾರ್ಡ್ ಪಾಯಿಂಟ್ಸ್‌ ಸಿಗುತ್ತಿತ್ತು. ಇದುವರೆಗೆ ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳು 2024ರ ಏಪ್ರಿಲ್ 15ರ ನಂತರ ಮುಕ್ತಾಯಗೊಳ್ಳಲಿವೆ. ಅಂದರೆ ರಿವಾರ್ಡ್ ಪಾಯಿಂಟ್ಸ್‌ ಪಡೆದಿದ್ದರೆ ಈ ಅವಧಿಯೊಳಗೆ ಬಳಸಿಕೊಳ್ಳಬೇಕು. ಎಸ್‌ಬಿಐ ದೇಶದ ಎರಡನೇ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕನಾಗಿದ್ದು, 18 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version