ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರದಲ್ಲಿ 0.05% ಕಡಿತಗೊಳಿಸಿದೆ. ಇದರ ಪರಿಣಾಮ ಪರಿಷ್ಕೃತ ಬಡ್ಡಿ ದರ 2.70%ಕ್ಕೆ ತಗ್ಗಿದೆ. 10 ಕೋಟಿ ರೂ.ಗಿಂತ ಕಡಿಮೆ ಬ್ಯಾಲೆನ್ಸ್ ಮೊತ್ತಕ್ಕೆ ಇದು ಅನ್ವಯಿಸುತ್ತದೆ. ಬ್ಯಾಂಕ್ ಈ ಹಿಂದೆ 2.75% ಬಡ್ಡಿ ನೀಡುತ್ತಿತ್ತು. ಹೀಗಿದ್ದರೂ, ಎಸ್‌ಬಿಐ 10 ಕೋಟಿ ರೂ.ಗಿಂತ ಮೇಲಿನ ಠೇವಣಿಗೆ ಬಡ್ಡಿ ದರವನ್ನು 2.75%ರಿಂದ 3%ಕ್ಕೆ ಏರಿಸಿದೆ.
ಪ್ರಮುಖ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸಿವೆ. ಇದೇ ವೇಳೆ ಎಸ್‌ಬಿಐ ಉಳಿತಾಯ ಖಾತೆ ಬಡ್ಡಿ ದರವನ್ನು ಕಡಿತಗೊಳಿಸಿದೆ.
ಮತ್ತೊಂದು ಕಡೆ ಬ್ಯಾಂಕ್ ಆಫ್ ಬರೋಡಾ ಫಾರಿನ್ ಕರೆನ್ಸಿ ನಾನ್ ರೆಸಿಡೆಂಟ್ ಡಿಪಾಸಿಟ್ (FCNR) ಠೇವಣಿಗಳ ಮೇಲಿನ ಬಡ್ಡಿದರವನ್ನು 1.35% ಏರಿಸಿದೆ. ಅಕ್ಟೋಬರ್ 15ರಿಂದ ಪರಿಷ್ಕೃತ ದರ ಜಾರಿಯಾಗಿದೆ.