Site icon Vistara News

Sensex | ಸೆನ್ಸೆಕ್ಸ್‌ 287 ಅಂಕ ಪತನ, ನಿಫ್ಟಿ 74 ಅಂಕ ಇಳಿಕೆ

Stock Market

Stock Market: Markets closed lower, Nifty below 22,450, Sensex down 730 points dragged by realty and IT

ಮುಂಬಯಿ: ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ ಇಂದು ಲಾಭ ನಗಧೀಕರಣದ ಕಾರಣದಿಂದ ಮಾರಾಟದ ಒತ್ತಡಕ್ಕೆ ಒಳಗಾಯಿತು. ಬೆಳಿಗ್ಗೆ ನಿಫ್ಟಿ 78 ಅಂಕಗಳ ಉತ್ತಮ ಹೆಚ್ಚಳದೊಂದಿಗೆ 17808 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 171 ಅಂಶಗಳ (Sensex) ಏರಿಕೆಯೊಂದಿಗೆ 60002 ರಲ್ಲಿ ಆರಂಭವಾಯಿತು. ಅದೇ ರೀತಿ ಬ್ಯಾಂಕ್ ನಿಫ್ಟಿ ಸಹ 200 ಅಂಕಗಳ ಹೆಚ್ಚಳದೊಂದಿಗೆ 41530 ರಲ್ಲಿ ಪ್ರಾರಂಭವಾಯಿತು.
ನಿಫ್ಟಿ ಆರಂಭದ 5 ನಿಮಿಷದಲ್ಲೆ ಭಾರಿ ಕುಸಿತ ದಾಖಲಿಸಿತು ಮತ್ತು ನಿನ್ನೆಯ ಕನಿಷ್ಠ ಅಂಶಗಳಿಗಿಂತ ಕೆಳಗೆ ವಹಿವಾಟು ನಡೆಸಲು ಆರಂಭವಾದ ನಂತರ ಇನ್ನೂ ಮಾರಾಟ ಒತ್ತಡಕ್ಕೆ ಒಳಗಾಗಿ ಇನ್ನೂ ಇಳಿಕೆ ದಾಖಲಿಸಿತು ಮತ್ತು ವಹಿವಾಟಿನ ಅವಧಿಯ ಕೊನೆಯ ಒಂದು ಗಂಟೆಯಲ್ಲಿ ಮಾರಾಟ ಒತ್ತಡ ಅಧಿಕವಾಗಿತ್ತು.
ದಿನದ ಅಂತ್ಯಕ್ಕೆ 74 ಅಂಕಗಳ ಇಳಿಕೆಯೊಂದಿಗೆ 17656 ಅಂಕಗಳಿಗೆ ನಿಫ್ಟಿ ಮತ್ತು ಸೆನ್ಸೆಕ್ಸ್ 287 ಅಂಶಗಳ ಇಳಿಕೆಯೊಂದಿಗೆ 59543 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 182 ಅಂಶಗಳ ಇಳಿಕೆಯೊಂದಿಗೆ 41122 ರಲ್ಲಿ ಅಂತ್ಯವಾಯಿತು.

ಇಂದು ಸಾರ್ವಜನಿಕ ವಲಯದ ಬ್ಯಾಂಕಿಂಗ್ ಷೇರುಗಳು ಇಂದು ಉತ್ತಮ ಏರಿಕೆ ಪ್ರದರ್ಶಿಸಿದವು.
ಸಣ್ಣ ಕಂಪನಿಗಳ ವಲಯದ ಸೂಚ್ಯಂಕ್ 0.13 ರಷ್ಟು ಇಳಿಕೆ ಕಂಡರೆ ಇದಕ್ಕೆ ತದ್ವಿರುದ್ದವಾಗಿ ಮಧ್ಯಮ ಕಂಪನಿಗಳ ಸೂಚ್ಯಂಕವು 0.47 ರಷ್ಟು ಏರಿಕೆ ದಾಖಲಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು ಪುನಃ 247 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ದೇಶಿ ಸಾಂಸ್ಥಿಕ ಹೂಡಿಕೆದಾರರು 872 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಆಟೋಮೋಬೈಲ್ ಮತ್ತು ಆರೋಗ್ಯ ಕ್ಷೇತ್ರದ ಕಂಪನಿಗಳ ಸೂಚ್ಯಂಕ
ಏರಿಕೆ ಕಂಡರೆ, ಎಫ್ಎಂಸಿಜಿ, ಇಂಧನ, ಮಾಧ್ಯಮ ವಲಯದ ಸೂಚ್ಯಂಕಗಳು ಇಳಿಕೆ ಕಂಡವು.

Exit mobile version