Site icon Vistara News

Services sector | ಅಕ್ಟೋಬರ್‌ನಲ್ಲಿ ಸೇವಾ ವಲಯದ ಚೇತರಿಕೆ: ಸಮೀಕ್ಷೆ

service

ನವ ದೆಹಲಿ: ಭಾರತದ ಸೇವಾ ವಲಯ ಕಳೆದ ಅಕ್ಟೋಬರ್‌ನಲ್ಲಿ ಚೇತರಿಸಿದೆ ಎಂದು ಖಾಸಗಿ ಸಮೀಕ್ಷೆ ತಿಳಿಸಿದೆ. ಎಸ್&ಪಿ ಗ್ಲೋಬಲ್‌ ಇಂಡಿಯಾ ಸರ್ವೀಸ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌, (Services sector) ಕಳೆದ ಅಕ್ಟೋಬರ್‌ನಲ್ಲಿ 54.3ರಿಂದ 55.1ಕ್ಕೆ ಚೇತರಿಸಿತ್ತು.

ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿ ವೃದ್ಧಿಸಿದೆ. ಕಳೆದ ಎಂಟು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಚೇತರಿಕೆಯಾಗುವ ನಿರೀಕ್ಷೆ ಇದೆ. ಸೇವಾ ವಲಯದ ಈ ಗಣನೀಯ ಚೇತರಿಕೆ ದೇಶದ ಆರ್ಥಿಕತೆಗೂ ಪ್ರಯೋಜನಕಾರಿಯಾಗಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಆಹಾರ, ಇಂಧನ ಮತ್ತು ರಿಟೇಲ್‌ ದರಗಳ ಏರಿಕೆಯ ಪರಿಣಾಮ ಹಲವಾರು ಕಂಪನಿಗಳ ವೆಚ್ಚದಲ್ಲಿ ಹೆಚ್ಚಳವಾಗಿದೆ. ಉತ್ಪಾದನೆಯ ಖರ್ಚು ವೃದ್ಧಿಸಿದೆ ಎಂದು ತಿಳಿಸಿದೆ.

Exit mobile version