ನವ ದೆಹಲಿ: ಭಾರತವು ವೇಗವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಚೀನಾ ಮಾದರಿಯ ಉತ್ಪಾದನೆ ಆಧರಿತ ಎಕಾನಮಿ ಆಗುವುದರ ಬದಲಿಗೆ, ಸೇವೆಗಳ ರಫ್ತಿಗೆ ಆದ್ಯತೆ ನೀಡುವುದು ಸೂಕ್ತ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ (Raghuram Rajan) ತಿಳಿಸಿದ್ದಾರೆ.
ಜಾಗತೀಕರಣ ಮತ್ತು ಹವಾಮಾನ ಬದಲಾವಣೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ರಾಜನ್, ಸೇವಾ ಕ್ಷೇತ್ರದ ಉದಾರೀಕರಣದ ಪರಿಣಾಮವಾಗಿ ಬೆಳವಣಿಗೆಗೆ ಹೇರಳವಾದ ಅವಕಾಶಗಳು ಸೃಷ್ಟಿಯಾಗಿವೆ. ಕೈಗಾರಿಕಾ ವಲಯದ ಅಸಮಾನತೆಯನ್ನು ಹೋಗಲಾಡಿಸಲು ಇದು ಸಹಾಯಕ ಎಂದು ವಿವರಿಸಿದರು.
ಸೇವಾ ಕ್ಷೇತ್ರದ ಉದಾರೀಕರಣ ಪ್ರಗತಿಶೀಲ ಆರ್ಥಿಕತೆಗಳ ಅಭ್ಯುದಯಕ್ಕೆ ಒಳ್ಳೆಯದು. ಏಕೆಂದರೆ ಸೇವೆಗಳು ತಂತ್ರಜ್ಞಾನ ಆಧರಿತ ಹಾಗೂ ಪರಿಸರಕ್ಕೆ ಇದರಿಂದ ಹಾನಿ ಕಡಿಮೆ ಎಂದರು.
ಕೇಂದ್ರ ಸರ್ಕಾರ ಪಿಎಲ್‌ಐ ಯೋಜನೆಗಳ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಮುಖ ಉತ್ಪಾದನಾ ತಾಣವನ್ನಾಗಿಸಲು ಯತ್ನಿಸುತ್ತಿದೆ. ಚೀನಾದಿಂದ ಹಲವಾರು ಕಾರ್ಪೊರೇಟ್ ಕಂಪನಿಗಳು ಬೇರೆಡೆಗೆ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಳಾಂತರಗೊಳಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಚರ್ಚೆಯಾಗುತ್ತಿದೆ.