Site icon Vistara News

Gold price | ಬೆಳ್ಳಿಯ ದರದಲ್ಲಿ ಒಂದೇ ದಿನ ದಿಢೀರ್ 5,300 ರೂ. ದಿಢೀರ್‌ ಕುಸಿತ‌ ! ಕಾರಣವೇನು?

silver

ಮುಂಬಯಿ: ಬೆಳ್ಳಿಯ ದರದಲ್ಲಿ ಒಂದೇ ದಿನ ದಿಢೀರ್‌ 5,300 ರೂ. ಕುಸಿದಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿಯ ದರ ಸೋಮವಾರ 56,700 ರೂ.ಗೆ ಇಳಿಕೆಯಾಗಿದೆ. ಭಾನುವಾರ 62,000 ರೂ. ಇತ್ತು.ಬಂಗಾರದ ದರ (Gold price) 24 ಕ್ಯಾರಟ್‌ಗೆ 50,180 ರೂಗಳ ಯಥಾಸ್ಥಿತಿಯಲ್ಲಿತ್ತು.

ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರ 46,000 ರೂ.ನಲ್ಲಿತ್ತು. ಪ್ಲಾಟಿನಮ್‌ ದರ 10 ಗ್ರಾಮ್‌ಗೆ 80 ರೂ. ಹೆಚ್ಚಳವಾಗಿದ್ದು, 23,210 ರೂ.ಗೆ ಏರಿದೆ.

ಬೆಳ್ಳಿ ದರ ಇಳಿಕೆಗೆ ಕಾರಣವೇನು? ಕಳೆದ ವರ್ಷ 8 ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿಯ ದರ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಇಳಿಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳೆದುರು ಡಾಲರ್‌ ಅಬ್ಬರ, ಸೆಂಟ್ರಲ್‌ ಬ್ಯಾಂಕ್‌ಗಳಿಂದ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರಗಳ ಏರಿಕೆ, ಕೈಗಾರಿಕಾ ವಲಯದಲ್ಲಿ ಬೇಡಿಕೆಯ ಮಂದಗತಿಯ ಪರಿಣಾಮ ಬೆಳ್ಳಿಯ ದರ ಕುಸಿದಿದೆ. ಆದರೆ ಖರೀದಿಗೆ ಇದು ಸಕಾಲ ಎನ್ನುತ್ತಾರೆ ತಜ್ಞರು.

Exit mobile version