ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ ಅಲ್ಪ ಏರಿಕೆಯಾಗಿದ್ದು, (10 ರೂ.) ಪ್ರತಿ 10 ಗ್ರಾಮ್‌ಗೆ 50,730 ರೂ. (Gold price) ಹೆಚ್ಚಳವಾಗಿದೆ.
ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 10 ರೂ. ಹೆಚ್ಚಳವಾಗಿದ್ದು, 46,510 ರೂ.ಗೆ ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 5200 ರೂ. ಏರಿಕೆಯಾಗಿದ್ದು, ಕೆ.ಜಿಗೆ 55,300 ರೂ.ಗಳಿಂದ 60,500 ರೂ.ಗೆ ವೃದ್ಧಿಸಿದೆ.
ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ ಇದೀಗ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳು ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ.