ಕೊಲಂಬೊ: ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ( IOC), ಶ್ರೀಲಂಕಾದಲ್ಲಿ ೫೦ ಪೆಟ್ರೋಲ್ ಬಂಕ್‌ಗಳನ್ನು ತೆರೆಯಲಿದೆ. ಈ ಮೂಲಕ ಇಂಧನ ಕೊರತೆಯಿಂದ ತೀವ್ರ ಬಳಲುತ್ತಿರುವ ಶ್ರೀಲಂಕಾಗೆ ಭಾರತ ನೆರವಾಗುತ್ತಿದೆ.
ಕಳೆದ ೭೦ ವರ್ಷಗಳಲ್ಲಿಯೇ ಕಂಡರಿಯದ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಎದುರಿಸುತ್ತಿದೆ. ವಿದೇಶಿ ವಿನಿಮಯ ಸಂಗ್ರಹ ಬರಿದಾಗಿದೆ. ಆಹಾರ, ಔಷಧ, ಇಂಧನ ಇತ್ಯಾದಿ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲಿ ದ್ವೀಪ ರಾಷ್ಟ್ರಕ್ಕೆ ಸಾಧ್ಯವಾಗುತ್ತಿಲ್ಲ. ಭಾರತದ ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ (LIOC) ಲಂಕಾಗೆ ನೆರವಾಗಲು ಮುಂದಾಗಿದೆ.
ಈಗಾಗಲೇ ೨೧೬ ಪೆಟ್ರೋಲ್ ಬಂಕ್‌ಗಳನ್ನು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಒಳಗೊಂಡಿದೆ. ಹೊಸ ಪೆಟ್ರೋಲ್ ಬಂಕ್‌ಗಳ ಸ್ಥಾಪನೆಗಾಗಿ (ಅಂದಾಜು ೧೫,೬೦೦ ಕೋಟಿ ರೂ.ಗಳನ್ನು ಭಾರತ ಹೂಡಿಕೆ ಮಾಡಲಿದೆ. ಕೊಲಂಬೊ ಷೇರು ವಿನಿಮಯ ಕೇಂದ್ರದಲ್ಲಿ ಎಲ್‌ಐಒಸಿ ನೋಂದಣಿಯಾಗಿದೆ. ಲಂಕಾದ ಸಾರ್ವಜನಿಕ ವಲಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ೧,೧೯೦ ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ.