ನವ ದೆಹಲಿ: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (BPLR) ಆಧಾರಿತ ಸಾಲದ ಬಡ್ಡಿ ದರವನ್ನು ಏರಿಕೆ ಮಾಡಿದೆ.
ಎಸ್‌ಬಿಐನ ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್‌ನಲ್ಲಿ 0.70% ಏರಿಕೆ ಮಾಡಲಾಗಿದ್ದು, ವಾರ್ಷಿಕ 13.45%ಕ್ಕೆ ಹೆಚ್ಚಳವಾಗಿದೆ ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಪರಿಷ್ಕೃತ ದರ ಸೆಪ್ಟೆಂಬರ್ 15ರಿಂದ ಜಾರಿಯಾಗಿದೆ. ಇದರ ಪರಿಣಾಮ ಬಿಪಿಎಲ್‌ಆರ್ ಆಧಾರಿತ ಸಾಲಗಳ ಬಡ್ಡಿ ದರ ಏರಿದಂತಾಗಿದೆ. ಹಳೆಯ ಬಿಪಿಎಲ್‌ಆರ್ ದರ 12.75% ಆಗಿದೆ.
ಎಸ್‌ಬಿಐ ತನ್ನ ಸಾಲಗಳ ಮೂಲ ದರವನ್ನು (ಬೇಸ್ ರೇಟ್) 8.7%ಕ್ಕೆ ಏರಿಸಿದೆ. ಹೀಗಾಗಿ ಬೇಸ್ ರೇಟ್ ಆಧರಿಸಿದ ಸಾಲಗಳ ಇಎಂಐ ಹೆಚ್ಚಳವಾಗಲಿದೆ. ಬ್ಯಾಂಕ್ ಮೂರು ತಿಂಗಳಿಗೊಮ್ಮೆ ಬಿಪಿಎಲ್‌ಆರ್ ಮತ್ತು ಮೂಲ ದರವನ್ನು ಪರಿಷ್ಕರಿಸುತ್ತದೆ.