ನವ ದೆಹಲಿ: ರಾಜ್ಯಗಳು ಪಡೆದುಕೊಳ್ಳುತ್ತಿರುವ ಸಾಲದ ಬಡ್ಡಿ ದರ 8%ಕ್ಕೆ ಏರಿಕೆಯಾಗಿದೆ. (Interest rate) ಕಳೆದ ಕೆಲ ವಾರಗಳಿಂದ ಸ್ಥಿರವಾಗಿದ್ದ ಬಡ್ಡಿಯಲ್ಲಿ ಮಂಗಳವಾರದಿಂದ 7.64%ಕ್ಕೆ ವೃದ್ಧಿಸಿದೆ.
ರಾಜ್ಯಗಳು ಪಡೆಯುತ್ತಿರುವ ಸಾಲದ ಪ್ರಮಾಣ ಕೂಡ ಕಳೆದ 13 ವಾರಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಐಸಿಆರ್‌ಎ ರೇಟಿಂಗ್ಸ್‌ನ ವರದಿ ತಿಳಿಸಿದೆ.
ಬಜೆಟ್ ದಾಖಲೆಗಳ ಪ್ರಕಾರ ಆಂಧ್ರಪ್ರದೇಶ, ಬಿಹಾರ, ಕೇರಳ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಹೆಚ್ಚಿನ ಸಾಲವನ್ನು ಹೊಂದಿವೆ. ಪಂಜಾಬ್ ತನ್ನ ಆದಾಯದ 21% ಪಾಲನ್ನು ಬಡ್ಡಿ ದರ ಪಾವತಿಸಲು ಬಳಸುತ್ತಿದೆ. ತಮಿಳುನಾಡು 21%, ಪಶ್ಚಿಮ ಬಂಗಾಳ 20.8%, ಹರಿಯಾಣ 20.9% ಆದಾಯವನ್ನು ಸಾಲದ ಬಡ್ಡಿಗೆ ಕಟ್ಟುತ್ತವೆ.