Site icon Vistara News

Gold price | ದೀಪಾವಳಿಗೆ ಚಿನ್ನ, ಬೆಳ್ಳಿಯ ದರದಲ್ಲಿ ಯಥಾಸ್ಥಿತಿ

Gold Bond Scheme

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸೋಮವಾರ ಯಥಾಸ್ಥಿತಿ ಇತ್ತು. ಬೆಂಗಳೂರಿನಲ್ಲಿ (Gold price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಬಂಗಾರದ ದರ 51,340 ರೂ.ಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 10 ಗ್ರಾಮ್‌ಗೆ 47,060 ರೂ.ಗೆ ಸ್ಥಿರವಾಗಿತ್ತು. (Gold price) ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 63,200 ರೂ.ನಲ್ಲಿತ್ತು. ಪ್ಲಾಟಿನಮ್‌ ದರ 10 ಗ್ರಾಮ್‌ಗೆ 24,700 ರೂ.ನಷ್ಟಿತ್ತು.

ಅಂತಾರಾಷ್ಟ್ರೀಯ ದರ ಮತ್ತು ಡಾಲರ್‌ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ. ಚಿನ್ನದ ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ದರ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

Exit mobile version