ನವ ದೆಹಲಿ: ಇಂಟರ್‌ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್‌ಗೆ ಮಾರುಕಟ್ಟೆಯ ಸ್ಪರ್ಧಾತ್ಮಕತೆ ಕುರಿತ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿಸಿಐ ವಿಧಿಸಿರುವ 1,337 ಕೋಟಿ ರೂ. ದಂಡದಲ್ಲಿ 10% ಅನ್ನು ವಾರದೊಳಗೆ (Google-CCI Case) ಪಾವತಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಎನ್‌ಸಿಎಲ್‌ಎಟಿಯ ಆದೇಶಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಕಾಂಪಿಟೇಶನ್ ಕಮೀಶನ್ ಆಫ್ ಇಂಡಿಯಾ (ಸಿಸಿಐ) ಗೂಗಲ್ ವಿರುದ್ಧ 1,337 ಕೋಟಿ ರೂ.ಗಳ ದಂಡವನ್ನು ವಿಧಿಸಿತ್ತು.
ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್‌ನಲ್ಲಿ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿದ್ದಕ್ಕಾಗಿ ಗೂಗಲ್‌ಗೆ ಸಿಸಿಐ ದಂಡ ವಿಧಿಸಿತ್ತು.