ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ (Tata Motors) ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವದಂದು 7 ಲಕ್ಷ ಯುನಿಟ್ ಮಾರಾಟದ ಸಂಭ್ರಮಾಚರಣೆ ಮಾಡುತ್ತಿದೆ.
2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಅಂದಿನಿಂದ ಇಂದಿನವರೆಗೂ ಅದರ ಗೆಲುವಿನ ಓಟ ಮುಂದುವರಿದಿದೆ.
ಇದನ್ನೂ ಓದಿ: ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ
ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್‌ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ನೆಕ್ಸಾನ್.ಇವಿ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಇದೇ ತಿಂಗಳಲ್ಲಿ ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.
41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ನೆಕ್ಸಾನ್‌ನ ಅತ್ಯದ್ಭುತ ಕಾರ್ಯಕ್ಷಮತೆಯು ಗಮನ ಸೆಳೆಯುತ್ತದೆ ಮತ್ತು ಅದರಿಂದಲೇ ಮಾರಾಟ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) 3 ಲಕ್ಷಕ್ಕೂ ಹೆಚ್ಚು ನೆಕ್ಸಾನ್ ಯುನಿಟ್‌ಗಳು ಮಾರಾಟವಾಗಿವೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಎಂಬ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿರುವ ನೆಕ್ಸಾನ್, ಸಮಯದ ಜತೆಗೆ ದೃಢವಾಗಿ ಬೆಳವಣಿಗೆ ಹೊಂದಿದೆ. ಸೆಗ್ಮೆಂಟಿನಲ್ಲಿ ಅತಿ ಆಕರ್ಷಕವಾದ ಅದರ ವಿನ್ಯಾಸ, ವಿಭಾಗದಲ್ಲಿಯೇ ಅತ್ಯುತ್ತಮ ಅನ್ನಿಸುವ ಫೀಚರ್‌ಗಳು ಮತ್ತು ಟೆಕ್ ಫಾರ್ವರ್ಡ್ ಗುಣಗಳಿಂದಾಗಿ ನೆಕ್ಸಾನ್ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ.
ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಈ ಕುರಿತು ಮಾತನಾಡಿ, 2017 ರಲ್ಲಿ ಬಿಡುಗಡೆ ಆದಾಗಿನಿಂದಲೂ ನೆಕ್ಸಾನ್ ವಿನ್ಯಾಸ, ಸುರಕ್ಷತೆ, ಸೌಕರ್ಯ ಮತ್ತು ಚಾಲನಾ ಅನುಭವದ ವಿಚಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಕಳೆದ ಏಳು ವರ್ಷಗಳಲ್ಲಿ ದೊಡ್ಡದಾಗಿ ವಿಸ್ತಾರಗೊಂಡಿರುವ ನೆಕ್ಸಾನ್‌ನ ಗ್ರಾಹಕರ ಅಚಲವಾದ ಬೆಂಬಲ ಮತ್ತು ಪ್ರೀತಿಯಿಂದಾಗಿ ನೆಕ್ಸಾನ್ ಉದ್ಯಮದಲ್ಲಿ ಐಕಾನಿಕ್ ಬ್ರ್ಯಾಂಡ್ ಆಗಿ ರೂಪುಗೊಂಡಿದೆ.
ಪವರ್‌ಟ್ರೇನ್‌ಗಳು ಮತ್ತು ವೇರಿಯಂಟ್‌ಗಳ ವಿವಿಧ ಆಯ್ಕೆಗಳ ಮೂಲಕ ಗ್ರಾಹಕರ ಅಗತ್ಯ ಮತ್ತು ಆಸಕ್ತಿಗೆ ತಕ್ಕಂತೆ ನೆಕ್ಸಾನ್ ಅನ್ನು ಒದಗಿಸಲಾಗುತ್ತಿದೆ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. 7 ವರ್ಷಗಳಲ್ಲಿ 7 ಲಕ್ಷ ವಾಹನ ಮಾರಾಟ ಮಾಡಿರುವ ಮಹತ್ವದ ಸಾಧನೆಯನ್ನು ಆಚರಿಸಲು ಮತ್ತು ಬೆಳೆಯುತ್ತಿರುವ ನೆಕ್ಸಾನ್ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಹಲವು ಉತ್ತಮ ಪ್ರಯೋಜನಗಳನ್ನು ಒದಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ
ದೇಶಾದ್ಯಂತ ಇರುವ ಎಲ್ಲಾ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಿತರಕರು ಮತ್ತು ಶೋರೂಮ್‌ಗಳು ನೆಕ್ಸಾನ್ ಗೆಲುವನ್ನು ಸಂಭ್ರಮಿಸಲು ಹಲವಾರು ವಿಶೇಷ ಕಾರ್ಯಕ್ರಮಗಳು ಮತ್ತು ಗ್ರಾಹಕರ ಸಭೆಗಳನ್ನು ಆಯೋಜಿಸುತ್ತಿವೆ. ಹೊಸ ನೆಕ್ಸಾನ್ ಅನ್ನು ಬುಕಿಂಗ್ ಮಾಡುವವರಿಗೆ, ಜತೆಗೆ ತಮ್ಮ ಹೊಸ ನೆಕ್ಸಾನ್ ಅನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಅಥವಾ ತಮ್ಮ ಅಸ್ತಿತ್ವದಲ್ಲಿರುವ ನೆಕ್ಸಾನ್ ಅನ್ನು ಅದರ ಹೊಸ ಅವತಾರಕ್ಕೆ ಅಪ್‌ಗ್ರೇಡ್ ಮಾಡಲು ಬಯಸುಸುವವರಿಗೆ 1 ಲಕ್ಷ ರೂ.ವರೆಗಿನ (ಮಾಡೆಲ್ ಮತ್ತು ವೇರಿಯಂಟ್ ಅನ್ನು ಆಧರಿಸಿ) ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಭಾರತದ ನಂ. 1 ಎಸ್‌ಯುವಿಯನ್ನು ತಮ್ಮದಾಗಿಸಿಕೊಳ್ಳಲು ಇದು ಸಕಾಲವಾಗಿದೆ.
ಅತ್ಯಾಧುನಿಕ ಕನೆಕ್ಟಿವಿಟಿ, ಅಪ್‌ಗ್ರೇಡ್ ಮಾಡಿದ ಸುರಕ್ಷತಾ ಫೀಚರ್‌ಗಳು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ನೆಕ್ಸಾನ್ ಅತ್ಯುತ್ತಮ ಕಾರ್ಯಕ್ಷಣತೆ ಪ್ರದರ್ಶಿಸಲು ಸನ್ನದ್ಧವಾಗಿದೆ ಮತ್ತು ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಜತೆಗೆ ಈ ಸೆಗ್ಮೆಂಟಿನಲ್ಲಿ ಇದು ಮುಂಚೂಣಿಯಲ್ಲಿ ನಿಂತಿದೆ. ಆಧುನಿಕ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಎಸ್‌ಯುವಿ ಯಾವಾಗಲೂ ರಸ್ತೆಯಲ್ಲಿ ಘನತೆಯಿಂದ ಕಾಣಿಸಿಕೊಳ್ಳುತ್ತದೆ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ನೀಡುತ್ತದೆ. ಗ್ರಾಹಕರು ಮತ್ತು ಅಭಿಮಾನಿಗಳ ಅತ್ಯುತ್ಸಾಹದ ಪ್ರತಿಕ್ರಿಯೆಯು ನೆಕ್ಸಾನ್ ಅನ್ನು ಭಾರತೀಯ ಆಟೋ ಉದ್ಯಮದ ಸ್ಪರ್ಧಾತ್ಮಕ ವಿಭಾಗದ ನಾಯಕನನ್ನಾಗಿ ಮಾಡಿದೆ.
ಇದನ್ನೂ ಓದಿ: Job Alert: ಗುಡ್‌ನ್ಯೂಸ್: ಬ್ಯಾಂಕ್ ಆಫ್ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಜೂನ್ 30 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಈ ಸೀಮಿತ ಅವಧಿಯ ಪ್ರಯೋಜನಗಳು ಲಭ್ಯವಿರುತ್ತವೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ತಿಳಿಸಿದೆ.