ನವ ದೆಹಲಿ: ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ & ಆಪ್ಷನ್ಸ್ ಟ್ರೇಡಿಂಗ್‌ಗೆ ಸೆಕ್ಯುರಿಟೀಸ್ ಟ್ರಾನ್ಸಕ್ಷನ್ ತೆರಿಗೆಯನ್ನು (Securities transaction tax -STT) ಏರಿಸಲಾಗಿದೆ. (F&O trading) ಆಪ್ಷನ್ ಸೇಲ್ ಮೇಲೆ ತೆರಿಗೆಯನ್ನು 0.05%ರಿಂದ 0.062%ಕ್ಕೆ ಹಾಗೂ ಫ್ಯೂಚರ್ ವಹಿವಾಟಿನ ಮೇಲೆ 0.017%ರಿಂದ 0.021%ಕ್ಕೆ ಏರಿಸಲಾಗಿದೆ.
ಹಣಕಾಸು ವಿಧೇಯಕ 2023ಕ್ಕೆ ತಿದ್ದುಪಡಿ ಮಾಡಿರುವ ಪ್ರಕಾರ, ಆಪ್ಷನ್ ಸೇಲ್ಸ್‌ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಮೇಲ್ತೆರಿಗೆಯನ್ನು 1,700 ರೂ.ಗಳಿಂದ 2,100 ರೂ.ಗೆ ಏರಿಸಲಾಗಿದೆ. ಫ್ಯೂಚರ್ ವಹಿವಾಟಿನಲ್ಲಿ ಎಸ್‌ಟಿಟಿಯನ್ನು 1,000 ರೂ.ಗಳಿಂದ 1,250 ರೂ.ಗೆ ಏರಿಸಲಾಗಿದೆ.
2023ರಲ್ಲಿ ಮಾರ್ಚ್ ವೇಳೆಗೆ ಎಸ್‌ಟಿಟಿ ಸಂಗ್ರಹದಿಂದ ಸರ್ಕಾರದ ಬೊಕ್ಕಸಕ್ಕೆ 20,000 ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ. ಇದು ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 60% ಹೆಚ್ಚಳವಾಗಿದೆ. 2020-21ರಲ್ಲಿ 16,927 ಕೋಟಿ ರೂ. ಎಸ್‌ಟಿಟಿ ಸಂಗ್ರಹವಾಗಿತ್ತು. 2004ರಲ್ಲಿ ಎಸ್‌ಟಿಟಿಯನ್ನು ಜಾರಿಗೊಳಿಸಲಾಗಿತ್ತು.