F&O trading : ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್‌ & ಆಪ್ಷನ್ಸ್‌ ಟ್ರೇಡಿಂಗ್‌ಗೆ ತೆರಿಗೆ ಹೆಚ್ಚಳ - Vistara News

ಪ್ರಮುಖ ಸುದ್ದಿ

F&O trading : ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್‌ & ಆಪ್ಷನ್ಸ್‌ ಟ್ರೇಡಿಂಗ್‌ಗೆ ತೆರಿಗೆ ಹೆಚ್ಚಳ

ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್‌ & ಆಪ್ಷನ್ಸ್‌ ಟ್ರೇಡಿಂಗ್‌ಗೆ (F&O trading) ಸೆಕ್ಯುರಿಟಿ ಟ್ರಾನ್ಸಕ್ಷನ್‌ ತೆರಿಗೆಯನ್ನು ಏರಿಸಲಾಗಿದೆ. ಹಣಕಾಸು ವಿಧೇಯಕಕ್ಕೆ ತಿದ್ದುಪಡಿ ಮೂಲಕ ಈ ಏರಿಕೆ ಮಾಡಲಾಗಿದೆ.

VISTARANEWS.COM


on

stock invest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್‌ & ಆಪ್ಷನ್ಸ್‌ ಟ್ರೇಡಿಂಗ್‌ಗೆ ಸೆಕ್ಯುರಿಟೀಸ್‌ ಟ್ರಾನ್ಸಕ್ಷನ್‌ ತೆರಿಗೆಯನ್ನು (Securities transaction tax -STT) ಏರಿಸಲಾಗಿದೆ. (F&O trading) ಆಪ್ಷನ್‌ ಸೇಲ್‌ ಮೇಲೆ ತೆರಿಗೆಯನ್ನು 0.05%ರಿಂದ 0.062%ಕ್ಕೆ ಹಾಗೂ ಫ್ಯೂಚರ್‌ ವಹಿವಾಟಿನ ಮೇಲೆ 0.017%ರಿಂದ 0.021%ಕ್ಕೆ ಏರಿಸಲಾಗಿದೆ.

ಹಣಕಾಸು ವಿಧೇಯಕ 2023ಕ್ಕೆ ತಿದ್ದುಪಡಿ ಮಾಡಿರುವ ಪ್ರಕಾರ, ಆಪ್ಷನ್‌ ಸೇಲ್ಸ್‌ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಮೇಲ್ತೆರಿಗೆಯನ್ನು 1,700 ರೂ.ಗಳಿಂದ 2,100 ರೂ.ಗೆ ಏರಿಸಲಾಗಿದೆ. ಫ್ಯೂಚರ್‌ ವಹಿವಾಟಿನಲ್ಲಿ ಎಸ್‌ಟಿಟಿಯನ್ನು 1,000 ರೂ.ಗಳಿಂದ 1,250 ರೂ.ಗೆ ಏರಿಸಲಾಗಿದೆ.

2023ರಲ್ಲಿ ಮಾರ್ಚ್‌ ವೇಳೆಗೆ ಎಸ್‌ಟಿಟಿ ಸಂಗ್ರಹದಿಂದ ಸರ್ಕಾರದ ಬೊಕ್ಕಸಕ್ಕೆ 20,000 ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ. ಇದು ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 60% ಹೆಚ್ಚಳವಾಗಿದೆ. 2020-21ರಲ್ಲಿ 16,927 ಕೋಟಿ ರೂ. ಎಸ್‌ಟಿಟಿ ಸಂಗ್ರಹವಾಗಿತ್ತು. 2004ರಲ್ಲಿ ಎಸ್‌ಟಿಟಿಯನ್ನು ಜಾರಿಗೊಳಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ

ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕೈ ಪಡೆ ಸೇರಿಸಲು ನಿರ್ಧಾರ ಮಾಡಿದ್ದು, ದೋಸ್ತಿಗಳ ವಿರುದ್ಧ ʼಸಂಚುʼ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಲೂ ಸಿದ್ಧತೆ ಮಾಡಿಕೊಂಡಿದೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆಗೆ (BJP-JDS Padayatra) ಟಕ್ಕರ್‌ ನೀಡಲು ಮೈಸೂರಿನಲ್ಲಿ ಇಂದು ಆಯೋಜಿಸಲಾಗಿರುವ ಬೃಹತ್‌ ಜನಾಂದೋಲನ ಸಮಾವೇಶಕ್ಕೆ (Mysore Janandolana Samavesha) ನಗರ ಸಜ್ಜಾಗಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕೈ ಪಡೆ ಸೇರಿಸಲು ನಿರ್ಧಾರ ಮಾಡಿದ್ದು, ದೋಸ್ತಿಗಳ ವಿರುದ್ಧ ʼಸಂಚುʼ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಲೂ ಸಿದ್ಧತೆ ಮಾಡಿಕೊಂಡಿದೆ.

ಜನಾಂದೋಲನ ಸಮಾವೇಶದ ವೇದಿಕೆ ಮೇಲೆ ಸುಮಾರು 200 ಜನ ಕೂರಲು ವ್ಯವಸ್ಥೆ ಮಾಡಲಾಗಿದೆ. ಎಡ ಮತ್ತು ಬಲ ಭಾಗದಲ್ಲಿ ಮಾಜಿ ಶಾಸಕರು ಹಾಗೂ ಪರಿಷತ್ ಸದಸ್ಯರು ಕೂರಲು ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೂ ಕಾರ್ಯಕ್ರಮ ಯಶಸ್ವಿಯಾಗಲು ಜರ್ಮನ್ ಪೆಂಡಾಲ್ ಅಳವಡಿಸಲಾಗಿದೆ. ʼಸಿದ್ದರಾಮೋತ್ಸವʼ ರೀತಿಯಲ್ಲಿಯೇ ಕಾರ್ಯಕ್ರಮ ಮಾಡಲಾಗುತ್ತಿದೆ.

ಜನಾಂದೋಲನ ಸಮಾವೇಶವನ್ನು ಸಿಎಂ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇಂದಿನ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನ ಸೇರಿಸಲಿದ್ದಾರೆ ಎಂದು ಭಾವಿಸಲಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದ ಹೆಚ್ಚು ಜನ ಬರುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ, ಡಿಸಿಎಂ, ಸಚಿವರು ಶಾಸಕರು, ಎಂಎಲ್ಸಿಗಳು ಭಾಗವಹಿಸಲಿದ್ದಾರೆ.

ಜನಾಂದೋಲನ ಸಮಾವೇಶದ ಅಜೆಂಡಾ

ವಿಪಕ್ಷಗಳ ವಿರುದ್ಧ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಮಾಜಿ ಸಿಎಂ ಎಚ್ ಡಿ ದೇವೇಗೌಡ (HD Deve gowda) ಫ್ಯಾಮಿಲಿ ಖರೀದಿಸಿದ ಆಸ್ತಿಗಳ ಬಗ್ಗೆ ಮಾಹಿತಿ ಕೊಡುವುದು, ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಕಾಲದಲ್ಲಿ ಆದ ನಿವೇಶನ ಹಂಚಿಕೆ, ಕುಮಾರಸ್ವಾಮಿ ವಿರುದ್ಧ ಇರೋ ಪ್ರಕರಣಗಳ ಬಗ್ಗೆ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅನ್ನೋದನ್ನ ಹೇಳುವುದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದು, ರಾಜ್ಯಪಾಲರು ಈ ಹಿಂದೆ ಯಾವೆಲ್ಲ ಪ್ರಕರಣಗಳಲ್ಲಿ ಮೌನ ವಹಿಸಿದ್ದಾರೆ ಅನ್ನೋದನ್ನ ಹೇಳುವುದು, ವಿರೋಧ ಪಕ್ಷಗಳ ನಾಯಕರ ಹಗರಣಗಳ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುವುದು ಜನಾಂದೋಲನ ಸಮಾವೇಶದ ಅಜೆಂಡಾ ಆಗಿದೆ.

ಇದೇ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತಿದೆ. ಎರಡೂ ಪಕ್ಷಗಳು ಕುಟಿಲ ರಾಜಕಾರಣ ನಡೆಸುತ್ತಿವೆ ಎಂದು ʼಸಂಚು’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದ್ದು, ಇದು ಮುಡಾ ಪ್ರಕರಣದ ಸಮಗ್ರ ವಿವರ ಮತ್ತು ದಾಖಲೆಗಳನ್ನೊಳಗೊಂಡಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರನ್ನೂ ಒಂದೇ ಕಲ್ಲಲ್ಲಿ ಹೊಡೆಯಲು ಬಿಜೆಪಿ ಕುಟಿಲ ಕಾರಸ್ಥಾನ ನಡೆಸಿದೆ ಎಂದು ʼಸಂಚುʼ ಕೃತಿ ರೂಪಿಸಿರುವ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ ಬರೆದಿದ್ದಾರೆ ಎನ್ನಲಾಗಿದೆ.

ಕಿರುಹೊತ್ತಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ, ಹಾಲಿ ಕೇಂದ್ರ ಸಚಿವ ಹೆಚ್‌ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಅಕ್ರಮದ ಆರೋಪಗಳ ಕುರಿತು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ದೇವೇಗೌಡರ ಕುಟುಂಬವೇ ಟಾರ್ಗೆಟ್‌

ಸಮಾವೇಶದ ಉದ್ದೇಶವೇ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಕುಟುಂಬ ಆಗಿದೆ. ದೇವೇಗೌಡರ ಕುಟುಂಬಸ್ಥರು ಮುಡಾ ಸೈಟ್ ಪಡೆದ ಬಗ್ಗೆ ಕಾಂಗ್ರೆಸಿಗರು ಫ್ಲೆಕ್ಸ್ ಹಾಕಿದ್ದಾರೆ. ನಗರದ ಹಲವು ಭಾಗದ ಸರ್ಕಲ್‌ಗಳಲ್ಲಿ ಫ್ಲೆಕ್ಸ್‌ಗಳ ಅಳವಡಿಕೆ ಮಾಡಲಾಗಿದೆ. 2023ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತನ್ನು ಕಾಂಗ್ರೆಸ್‌ ಬಳಸಿಕೊಂಡಿದೆ. ಕುಮಾರಸ್ವಾಮಿ ಅವರಿಗೆ ಮುಡಾದಿಂದ ಕೊಟ್ಟಿರುವ ಸೈಟ್ ಬಗ್ಗೆ, ಮಾಜಿ ಪ್ರಧಾನಿ ದೇವೇಗೌಡರ 20 ಹೆಸರು ಬರೆದು ಎಷ್ಟು ಅಳತೆಯ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ಫ್ಲೆಕ್ಸ್‌ನಲ್ಲಿದೆ. ಎಚ್‌ಡಿಕೆಯವರೇ ನೀವು ಬೇರೆಯವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಉಳಿಸಿಕೊಂಡಿದ್ದೀರಾ ಎಂದು ಫ್ಲೆಕ್ಸ್‌ನಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: CM Siddaramaiah: ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಬ್ಬರ; ʼಜನಾಂದೋಲನ ಸಮಾವೇಶʼ ಮೂಲಕ ದೋಸ್ತಿ ಪಾದಯಾತ್ರೆಗೆ ಟಕ್ಕರ್‌

Continue Reading

ಪ್ರಮುಖ ಸುದ್ದಿ

Vinesh Phogat: ಪ್ರಕಾಶ್‌ ರೈ ವಿರುದ್ಧ ಅಹಿಂಸಾ ಚೇತನ್‌ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ

Vinesh Phogat: ʼಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ. ಅವರ ಈ ಟ್ವೀಟ್‌ಗೆ ಕಾರಣವಾಗಿರುವುದು, ವಿನೇಶ್‌ ಫೋಗಟ್‌ ಅನರ್ಹತೆ ಕುರಿತು ಪ್ರಕಾಶ್‌ ರೈ ಮಾಡಿರುವ ಒಂದು ಪೋಸ್ಟ್.

VISTARANEWS.COM


on

vinesh phogat praksah raj ahimsa chetan
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಯಾವಾಗಲೂ ಕಿಡಿ ಕಾರುತ್ತಿದ್ದ ನಟ ಚೇತನ್‌ ಅಹಿಂಸಾ (Chetan Ahimsa), ಇದೀಗ ಮೋದಿಯವರ ಪರ ಸೋಶಿಯಲ್‌ ಮೀಡಿಯಾ (Social Media) ಪೋಸ್ಟ್‌ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಜೊತೆಗೆ, ವಿನೇಶ್‌ ಫೋಗಟ್‌ (Vinesh Phogat) ಪ್ರಕರಣದಲ್ಲಿ ಸಹನಟ ಪ್ರಕಾಶ್‌ ರೈ (Prakash raj) ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ.

50 ಕಿಲೋಗಿಂತ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆ ಪ್ಯಾರಿಸ್ ಒಲಿಂಪಿಕ್ಸ್‌-2024ರ ಫೈನಲ್‌ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್‌ ಫೋಗಟ್ ಪರ, ಮೋದಿ ವಿರುದ್ಧ ಪೋಸ್ಟ್‌ ಹಾಕಿದ್ದ ಪ್ರಕಾಶ್‌ ರೈ ನಡೆಯನ್ನು ಚೇತನ್‌ ಟೀಕಿಸಿದ್ದಾರೆ. ಅದರಲ್ಲೂ ಮೋದಿ ಪರ ನಿಂತ ಅಹಿಂಸಾ ಚೇತನ್​ ನಿಲುವು ನೋಡಿ ತುಂಬಾ ಮಂದಿ ಅಚ್ಚರಿಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪ್ರಕಾಶ್​ ರಾಜ್​ ಕಾರ್ಟೂನ್​ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಕುಸ್ತಿಪಟು ವಿನೇಶ್​ ಫೋಗಟ್ ಅವರು ನಿಂತಿರುವ ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿದೆ. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂದು ಅರ್ಥ ಬರುವಂತೆ ಈ ಟ್ವೀಟ್ ಶೇರ್ ಮಾಡಿದ್ದರು.

ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್​ ಕಿಡಿಕಾರಿದ್ದಾರೆ. ʼವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ.

ಇಬ್ಬರು ನಟರ ಈ ಟ್ವೀಟ್ಟ್‌ಗಳು ಇದೀಗ ವೈರಲ್ ಆಗುತ್ತಿವೆ. ನೆಟ್ಟಿಗರು ಚೇತನ್ ಕಮೆಂಟ್​ಗೂ ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್​ ಕೆಟ್ಟ ಹೋರಾಟಗಾರ ಎನ್ನುವುದು ಸರಿಯಲ್ಲ ಎಂದಿದ್ದಾರೆ. ವಿನೇಶ್ ಫೋಗಟ್ ಅನರ್ಹತೆಗೆ ಪ್ರಕಾಶ್ ರಾಜ್ ಎಲ್ಲಿಯೂ ಮೋದಿ ಹೆಸರನ್ನು ಮೆನ್ಷನ್ ಮಾಡಿಲ್ಲ. ಆದರೆ ನೀವೇ ಮೋದಿ ಎಳೆದು ತಂದಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕುಸ್ತಿ ಪಂದ್ಯಾಟದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ 100 ಗ್ರಾಮ್‌ಗಳ ಹೆಚ್ಚುವರಿ ತೂಕದಿಂದಾಗಿ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್‌ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ತಮ್ಮ ಅರ್ಧ ವರ್ಷದ ತರಬೇತಿಯನ್ನು ಕಳೆದುಕೊಂಡಿದ್ದ ವಿನೇಶ್, ತಮಗೆ ದೊರಕಿದ್ದ ಅತ್ಯಲ್ಪ ಸಮಯದಲ್ಲಿಯೇ ತರಬೇತಿ ಪಡೆದುಕೊಂಡು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಜೊತೆಗೆ ದೇಶಕ್ಕಾಗಿ ಪದಕ ಗೆಲ್ಲುವ ಮಹದಾಸೆ ಇರಿಸಿಕೊಂಡಿದ್ದರು.

ಇದನ್ನೂ ಓದಿ: Prakash Raj:‌ ವಿನೇಶ್‌ ಫೋಗಟ್‌ ಅನರ್ಹತೆಗೆ ಮೋದಿ ಕಾರಣ ಎಂಬಂತೆ ಪ್ರಕಾಶ್ ರಾಜ್‌ ಪೋಸ್ಟ್;‌ ಜನರಿಂದ ರೋಸ್ಟ್!

Continue Reading

ಕ್ರೀಡೆ

Neeraj Chopra: ಬೆಳ್ಳಿ ಗೆದ್ದ ಮಗ, ಹೃದಯ ಗೆದ್ದ ತಾಯಿ; ಪಾಕ್​ನ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದ ಚೋಪ್ರಾ ತಾಯಿ

Neeraj Chopra: ಫೈನಲ್​ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.

VISTARANEWS.COM


on

Neeraj Chopra
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ನಿರೀಕ್ಷೆಯಾಗಿದ್ದ ನೀರಜ್​ ಚೋಪ್ರಾ ಅವರು ಗುರುವಾರ ತಡರಾತ್ರಿ ನಡೆದ ಜಾವೆಲಿನ್ ಥ್ರೋ ಫೈನಲ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ನೀರಜ್​ ಚೋಪ್ರಾ ಅವರ ತಾಯಿ(neeraj chopra mother) ಮಗ ಬೆಳ್ಳಿ ಪದಕ ಗೆದ್ದ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ. ಜತೆಗೆ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದ್ದಾರೆ. ಸದ್ಯ ಈ ವಿಡಿಯೊ ವೈರಲ್​ ಆಗಿದೆ.

ನೀರಜ್​ ಬೆಳ್ಳಿ ಪದಕ ಗೆದ್ದ ಸಂತಸದಲ್ಲಿ ಎಎನ್‌ಐ ಜತೆ ಮಾತನಾಡಿದ ನೀರಜ್​ ಅವರ ತಾಯಿ ಸರೋಜ್ ದೇವಿ, “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದರು.

ಟೋಕಿಯೊನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಮೇಲೆ ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿಗೆ ತೃಪ್ತಿಪಟ್ಟರು. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90 ಮೀ ಮಾರ್ಕ್ ದಾಟಿದ್ದ ಅರ್ಷದ್ ನದೀಮ್ ಅತ್ಯುತ್ತಮ ಥ್ರೋ 86.59 ಮೀ ನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.

ಚೋಪ್ರಾಗೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಹೇಳಿದ್ದೇನು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

Continue Reading

Latest

Shravan 2024: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

Shravan 2024: ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ-ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ.ಶ್ರಾವಣ ಶನಿವಾರದ ಪೂಜಾ ವಿಧಾನಗಳು ಏನು? ಹೇಗೆ ಇದನ್ನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

VISTARANEWS.COM


on

Shravan 2024
Koo
  • ಪವಿತ್ರಾ ಶೆಟ್ಟಿ

ಶ್ರಾವಣ ಮಾಸ ಆಗಸ್ಟ್ 5ರಿಂದ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸ (Shravan 2024)ದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ. ಆ ವರ್ಷ ಶ್ರಾವಣ ಶನಿವಾರ ಆಗಸ್ಟ್ 10, 17, 24 ಹಾಗೂ 31ರಂದು ಬಂದಿದೆ. ಹಾಗಾಗಿ ಈ ಶ್ರಾವಣ ಶನಿವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.

Shravan 2024
Shravan 2024

ಲಕ್ಷ್ಮಿ-ವೆಂಕಟೇಶ್ವರ ಪೂಜೆ:

ಶ್ರಾವಣ ಶನಿವಾರದಂದು ವಿಶೇಷವಾಗಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಶನಿವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ತುಳಸಿಯ ಕಟ್ಟೆಯ ಮುಂದೆ ಶಂಖ, ಚಕ್ರದ ರಂಗೋಲಿಯನ್ನು ಹಾಕಿ. ಹಾಗೇ ಮನೆಯೊಳಗೆ ವೆಂಕಟೇಶ್ವರ ಸ್ಮಾವಿಯ ಪೋಟೊ ಇಟ್ಟು ಅದಕ್ಕೆ ತುಳಸಿ ಹಾರವನ್ನು ಹಾಕಿ ಹಾಗೂ ಹಳದಿ ಬಣ್ಣದ ಹೂ ಸ್ವಾಮಿಗೆ ಪ್ರಿಯವಾದ್ದರಿಂದ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಿ. ಹಾಗೇ ಸ್ವಾಮಿಯ ಮುಂದೆ ಅಕ್ಕಿಹಿಟ್ಟಿನಿಂದ ತಯಾರಿಸಿದ ದೀಪವನ್ನು ಬೆಳಗಿಸಿ. ಈ ದೀಪವನ್ನು ಅಕ್ಕಿಹಿಟ್ಟು, ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ತಯಾರಿಸುತ್ತಾರೆ. ಹಾಗೇ ಪೂಜೆಯ ವೇಳೆ ವೆಂಕಟೇಶ್ವರ ಸ್ವಾಮಿ ನಾಮಗಳನ್ನು ಪಠಿಸುತ್ತಾ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೇವರಿಗೆ ಸಿಹಿ ನೈವೇದ್ಯವನ್ನು ಅರ್ಪಿಸಿ.

ಅಲ್ಲದೇ ಶ್ರಾವಣ ಶನಿವಾರದಂದು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸುವವರು ಪಡಿ ಕೇಳುವ ಶಾಸ್ತ್ರವನ್ನು ಮಾಡಬೇಕು. ಅಂದರೆ ಶುಭ್ರವಾದ ಬಟ್ಟೆ ತೊಟ್ಟು ಹಣೆಗೆ ಗೋವಿಂದನ ನಾಮವನ್ನು ಹಚ್ಚಿ ತಾಮ್ರದ ಚೊಂಬನ್ನು ಹಿಡಿದುಕೊಂಡು ಕನಿಷ್ಠ ಐದು ಮನೆಗೆ ಹೋಗಿ ಭಿಕ್ಷೆ ಅಥವಾ ಪಡಿ ಕೇಳಬೇಕು. ಅದರಿಂದ ಬಂದ ಧಾನ್ಯದಿಂದ ಸ್ವಾಮಿಗೆ ನೈವೇದ್ಯ ಅರ್ಪಿಸಬೇಕು.

Shravan 2024
Shravan 2024

ಶನಿದೇವನ ಪೂಜೆ :

ನಿಮ್ಮ ಜಾತಕದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿ ಮುಂತಾದ ಶನಿ ದೋಷವಿದ್ದರೆ ಶ್ರಾವಣ ಶನಿವಾರ ಪೂಜೆ ಮಾಡುವುದು ಅವಶ್ಯಕ. ಶ್ರಾವಣ ಶನಿವಾರದಂದು ಶನಿ ಪೂಜೆ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ಶನಿಯ ಜೊತೆಗೆ ಶಿವ ಪೂಜೆ ಮಾಡುತ್ತಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಹಾಗೇ ಶನಿ ಬೀಜಮಂತ್ರವನ್ನು ಪಠಿಸಿ. ಹಾಗೇ ಈ ದಿನ ಶನಿದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಒಳ್ಳೆಯದು.

Shravan 2024
Shravan 2024

ಹನುಮಂತನ ಪೂಜೆ:

ಶ್ರಾವಣ ಶನಿವಾರದಂದು ಹನುಮಂತ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮತ್ತು ಶನಿದೋಷದಿಂದ ಮುಕ್ತಿ ಪಡೆಯಬಹುದು. ಹಾಗಾಗಿ ಹೆಚ್ಚಿನ ಜನರು ಶ್ರಾವಣ ಶನಿವಾರದಂದು ಉಪವಾಸ ವ್ರತಗಳನ್ನು ಆಚರಣೆ ಮಾಡುತ್ತಾರೆ. ಮತ್ತು ಈ ದಿನ ಹನುಮಂತನ ದೇವಸ್ಥಾನಕ್ಕೆ ತೆರಳಿ ಹನುಮಂತನ ಪೂಜೆ ಮಾಡುತ್ತಾರೆ.

ಶ್ರಾವಣ ಶನಿವಾರದಂದು ಈ ಕೆಲಸ ಮಾಡಿ:
ಶ್ರಾವಣ ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಬಟ್ಟೆ, ಕಪ್ಪು ಎಳ್ಳು, ಬೀಗಗಳು, ಛತ್ರಿಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ದಾನ ಮಾಡಿ. ಈ ದಿನ ಶಿವ ದೇವಾಲಯದಲ್ಲಿ ಮರೆಯದೆ ಬಾರ್ಲಿಯನ್ನು ದಾನ ಮಾಡಿ. ಹಾಗೇ ಶ್ರಾವಣ ಶನಿವಾರದಂದು ಶಿವನಿಗೆ ಶನಿಗೆ ಪ್ರಿಯವಾದ ಶಮಿ ಹೂವುಗಳನ್ನು ಅರ್ಪಿಸಿ. ಇದರಿಂದ ಶನಿಗ್ರಹದ ಸಾಡೇಸಾತಿ, ಶನಿ ದೋಷ, ಶನಿ ಮಹಾದಶ, ಶನಿ ಧೈಯ್ಯಾ ಸೇರಿದಂತೆ ಇನ್ನಿತರ ಶನಿಗೆ ಸಂಬಂಧಿಸಿದ ದೋಷಗಳ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಒಟ್ಟಾರೆ ಶ್ರಾವಣ ಶನಿವಾರದಂದು ದೇವರ ಪೂಜೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಿ. ಪ್ರತಿ ಶ್ರಾವಣ ಶನಿವಾರದಂದು ನಿಯಮಗಳ ಪ್ರಕಾರ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ.

Continue Reading
Advertisement
Duniya Vijay Bheema Movie Release today
ಸ್ಯಾಂಡಲ್ ವುಡ್6 mins ago

Duniya Vijay: ರಾಜ್ಯಾದ್ಯಂತ `ಭೀಮ’ ಸಿನಿಮಾ ರಿಲೀಸ್; ಬ್ಲಾಕ್‌ ಕೋಬ್ರಾಗೆ ಭರ್ಜರಿ ವೆಲ್‌ಕಮ್‌ ಮಾಡಿದ ಫ್ಯಾನ್ಸ್‌!

gold rate today
ವಾಣಿಜ್ಯ10 mins ago

Gold Rate Today: ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ

UGCET 2024
ಬೆಂಗಳೂರು16 mins ago

UGCET 2024: ಯುಜಿಸಿಇಟಿ ಮೊದಲ ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಸಂಜೆ 6 ಗಂಟೆಗೆ ಪ್ರಕಟ

dengue fever death bangalore
ಬೆಂಗಳೂರು16 mins ago

Dengue Fever: ಡೆಂಗ್ಯುವಿಗೆ ಬೆಂಗಳೂರಿನಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಬಲಿ, 11ಕ್ಕೇರಿದ ಸಾವಿನ ಸಂಖ್ಯೆ

Paris Olympics
ಕ್ರೀಡೆ40 mins ago

Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

CM Siddaramaiah
ಪ್ರಮುಖ ಸುದ್ದಿ57 mins ago

CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ

Kannada Serials TRP Demand increased for Ramachari serial Amritdhare is not even in the top 5
ಕಿರುತೆರೆ1 hour ago

Kannada Serials TRP: ʻರಾಮಾಚಾರಿʼ ಧಾರಾವಾಹಿಗೆ ಹೆಚ್ಚಾಯ್ತು ಡಿಮ್ಯಾಂಡ್‌; ಟಾಪ್‌ 5ನಲ್ಲೂ ಇಲ್ಲ ʻಅಮೃತಧಾರೆʼ!

Bangladesh Unrest
ವಿದೇಶ1 hour ago

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Rahul Gandhi
ದೇಶ1 hour ago

Rahul Gandhi: ಸಂಸತ್‌‌ನಲ್ಲಿ ವಕ್ಫ್ ಚರ್ಚೆ ವೇಳೆ ನಿದ್ದೆ ಮಾಡುತ್ತಿದ್ದ ರಾಹುಲ್ ಗಾಂಧಿ! ವಿಡಿಯೊ ವೈರಲ್

Vinesh Phogat
ಕ್ರೀಡೆ1 hour ago

Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ17 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ19 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ20 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌