ನವ ದೆಹಲಿ: ತಂತ್ರಜ್ಞಾನ ದಿಗ್ಗಜ ಟೆಕ್ ಮಹೀಂದ್ರಾ ಮುಂದಿನ 5 ವರ್ಷಗಳಲ್ಲಿ 20,000 ಮಂದಿಗೆ ಉದ್ಯೋಗ ನೀಡಲು ನಿರ್ಧರಿಸಿದೆ.
ಎಲ್ಲ ಕಡೆ ಉದ್ಯೋಗ ಕಡಿತದ ನಕಾರಾತ್ಮಕ ಬೆಳವಣಿಗೆಯ ನಡುವೆ ಟೆಕ್ ಮಹೀಂದ್ರಾ, ಹೆಚ್ಚುವರಿ ನೇಮಕಾತಿಗೆ ಮುಂದಾಗಿದೆ. ಟೆಕ್ ಮಹೀಂದ್ರಾ ಕಳೆದ ಸೆಪ್ಟೆಂಬರ್‌ನಲ್ಲಿ 5,877 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.
ಪ್ರಸ್ತುತ ಟೆಕ್ ಮಹೀಂದ್ರಾ 1,64,000 ಸಿಬ್ಬಂದಿಯನ್ನು ಒಳಗೊಂಡಿದೆ. ಕಂಪನಿ ತನ್ನ ವಹಿವಾಟು ವಿಸ್ತರಿಸುತ್ತಿದ್ದು, ಹೆಚ್ಚುವರಿ ನೇಮಕ ಮಾಡಿಕೊಳ್ಳಲಿದೆ ಎಂದು ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಸಿಪಿ ಗುರಾಣಿ ತಿಳಿಸಿದ್ದಾರೆ.