ಮುಂಬಯಿ: ಕಳೆದ 12 ತಿಂಗಳಲ್ಲಿ 5ಜಿ (5G) ಮತ್ತು ಟೆಲಿಕಾಂ ಸಂಬಂಧಿತ ಉದ್ಯೋಗಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಜಾಬ್ ವೆಬ್‌ಸೈಟ್ ಇಂಡೀಡ್ ಪ್ರಕಾರ 2021 ಸೆಪ್ಟೆಂಬರ್ ಮತ್ತು 2022 ಸೆಪ್ಟೆಂಬರ್ ನಡುವೆ 5ಜಿ ಮತ್ತು ಟೆಲಿಕಾಂ ಸಂಬಂಧಿತ ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 5ಜಿ ತಂತ್ರಜ್ಞಾನ ಆಧರಿತ ಸೇವೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. “ಮುಂದಿನ ಕೆಲ ತ್ರೈಮಾಸಿಕಗಳಲ್ಲಿ ಈ ಟ್ರೆಂಡ್ ಮುಂದುವರಿಯಲಿದೆʼʼ ಎಂದು ಇಂಡೀಡ್ ಇಂಡಿಯಾದ ಕೆರಿಯರ್ ಎಕ್ಸ್‌ಪರ್ಟ್ ಸೌಮಿತ್ರಾ ಚಾಂದ್ ತಿಳಿಸಿದ್ದಾರೆ.
5ಜಿ ತಂತ್ರಜ್ಞಾನ ಭಾರತದಲ್ಲಿ ಬಹು ನಿರೀಕ್ಷೆಗಳನ್ನು ಸೃಷ್ಟಿಸಿದೆ. ಉದ್ಯಮಿಗಳು ಈಗಾಗಲೇ ನೇಮಕಾತಿಯನ್ನು ಆರಂಭಿಸಿದ್ದಾರೆ. ಡಿಸೈನ್ ಸೆಕ್ಯುರಿಟಿ ಸಿಸ್ಟಮ್ ಮತ್ತು ನೆಟ್ ವರ್ಕ್ ಸಂಬಂಧಿತ ಉದ್ಯೋಗಾವಕಾಶಗಳು ವೃದ್ಧಿಸಿವೆ ಎಂದು ತಿಳಿಸಿದ್ದಾರೆ.
ಟೆಕ್ನಿಕಲ್ ಸಪೋರ್ಟ್, ಬಿಪಿಒ ಎಕ್ಸಿಕ್ಯುಟಿವ್ ಮತ್ತು ಕಸ್ಟಮರ್ ಸರ್ವೀಸ್ ಪ್ರತಿನಿಧಿ ಉದ್ಯೋಗಗಳಿಗೆ ವಾರ್ಷಿಕ ಸರಾಸರಿ ವೇತನ ಅನುಕ್ರಮವಾಗಿ 3,53,298 ರೂ, 3,29,520 ರೂ. ಮತ್ತು 3,06,680 ರೂ. ಇರುತ್ತದೆ ಎಂದು ವರದಿಯಾಗಿದೆ.