Site icon Vistara News

Gold Price | ಎರಡು ದಿನಗಳಿಂದ ಇಳಿಯುತ್ತಿದೆ ಬಂಗಾರದ ದರ! ಇಂದು 650 ರೂ. ಅಗ್ಗ

gold

ಬೆಂಗಳೂರು: ಚಿನ್ನ ಖರೀದಿಸುವವರಿಗೆ ಇದು ಸಿಹಿ ಸುದ್ದಿ. ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ (Gold Price) ಬುಧವಾರ ೬೫೦ ರೂ. ಇಳಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಬಂಗಾರ ೮೭೦ ರೂ. ಅಗ್ಗವಾಗಿದೆ.

ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ಚಿನ್ನದ ದರ ಸೋಮವಾರ ೫೧,೩೩೦ ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೬೦೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್‌ ದರ ೪೭,೦೫೦ ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ ೪೦೦ ರೂ. ಇಳಿಕೆಯಾಗಿದ್ದು, ೬೦,೭೦೦ ರೂ.ನಷ್ಟಿತ್ತು.

ಪ್ಲಾಟಿನಮ್‌ ದರ ೧೦ ಗ್ರಾಮ್‌ಗೆ ೨೨,೪೪೦ ರೂ.ಗಳಾಗಿದೆ. ಅಂದರೆ ೬೩೦ ರೂ. ಇಳಿಕೆಯಾಗಿದೆ. ಬಂಗಾರದ ದರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ದರವನ್ನು ಆಧರಿಸಿ ಸ್ಥಳೀಯವಾಗಿ ಚಿನ್ನದ ದರಗಳು ಬದಲಾಗುತ್ತವೆ.

ದರ ಇಳಿಕೆಗೆ ಕಾರಣವೇನು? ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದುರು ಡಾಲರ್‌ ಅಬ್ಬರ, ಅಮೆರಿಕದಲ್ಲಿ ಹಣುದಬ್ಬರ ಹತ್ತಿಕ್ಕಲು ಫೆಡರಲ್‌ ರಿಸರ್ವ್‌ ಮತ್ತೊಮ್ಮೆ ಬಡ್ಡಿ ದರ ಏರಿಸುವ ಸಾಧ್ಯತೆಯ ಪರಿಣಾಮ ಬಂಗಾರದ ಅಂತಾರಾಷ್ಟ್ರೀಯ ದರ ಇಳಿಯುತ್ತಿದೆ. ದೇಶಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.

Exit mobile version