Site icon Vistara News

Chinese | 300 ಕಂಪನಿಗಳ ಮಂಡಳಿಯಲ್ಲಿರುವ ಚೀನಿ ಪ್ರಜೆಗಳಿಗೆ ಶೋಧ, ಬೆಂಗಳೂರಿನಲ್ಲೂ ಬಲೆ

chinese

ನವ ದೆಹಲಿ: ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು 300 ಕಂಪನಿಗಳ ಆಡಳಿತ ಮಂಡಳಿಯಲ್ಲಿರುವ ಚೀನಿ ಪ್ರಜೆಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಿದೆ. ಚೀನಿ ಪ್ರಜೆಗಳು (Chinese) ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ದಿಲ್ಲಿ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ನಕಲಿ ಕಂಪನಿಗಳನ್ನು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ (ಎಂಸಿಎ) ಪತ್ತೆ ಹಚ್ಚಿದೆ. ಈ ನಕಲಿ ಕಂಪನಿಗಳಲ್ಲಿ ಅನೇಕ ಕಂಪನಿಗಳು ಚೀನಿ ಪ್ರಜೆಗಳ ಹೆಸರಿನಲ್ಲೂ ಇವೆ. ಅವರು ಆ ಕಂಪನಿಗಳನ್ನು ನಿಯಂತ್ರಿಸುತ್ತಿದ್ದಾರೆ. ಇದೇ ಮೊದಲ ಭಾರಿಗೆ ಅಖಿಲ ಭಾರತ ಮಟ್ಟದಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಎಂಸಿಎ ದೇಶಾದ್ಯಂತ 700 ಪ್ರಕರಣಗಳಲ್ಲಿ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಚೀನಿ ಪ್ರಜೆಗಳು ಪ್ರವರ್ತಕರು ಮತ್ತು ನಿರ್ದೇಶಕರಾಗಿ ಇರುವುದದನ್ನು ಪತ್ತೆ ಹಚ್ಚಿದೆ. ಇವರಲ್ಲಿ ವಿವೊ, ಶಿವೋಮಿ, ಒಪ್ಪೊ ಮತ್ತು ಆಲಿಬಾಬಾ ಘಟಕದ ಆಡಳಿತ ಮಂಡಳಿಯಲ್ಲಿ ಇರುವ ಮತ್ತು ತನಿಖೆ ಎದುರಿಸುತ್ತಿರುವ ಚೀನಿ ಪ್ರಜೆಗಳಿದ್ದಾರೆ.

ಮೊದಲು ನಕಲಿ ದಾಖಲಾತಿಗಳ ಮೂಲಕ ನಕಲಿ ಕಂಪನಿಗಳನ್ನು ನೋಂದಣಿ ಮಾಡಲಾಗುತ್ತದೆ. ಬಳಿಕ ಅದರ ಪಾಲುದಾರರಾಗಿ ಚೀನಿ ಕಂಪನಿಗಳ ಸಹಭಾಗಿತ್ವ ನಡೆಯುತ್ತದೆ. ಈ ಮೂಲಕ ವ್ಯವಹಾರಗಳಲ್ಲಿ ವಂಚಿಸುವುದು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಸಾಲದ ವಹಿವಾಟು ನಡೆಸಿ ವಂಚಿಸಲೂ ಇಂಥ ಸಂಚು ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version