ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ ಸಭೆ ಗುರುವಾರ ನಡೆಯಲಿದ್ದು, ಹಣದುಬ್ಬರ ನಿಯಂತ್ರಿಸಲು ವೈಫಲ್ಯವಾಗಿರುವುದರ ಬಗ್ಗೆ ಚರ್ಚೆ ನಡೆಯಲಿದೆ. ಸತತ ಮೂರು ತ್ರೈಮಾಸಿಕ ಕಳೆದರೂ ಹಣದುಬ್ಬರ ನಿಯಂತ್ರಿಸಲು ನೀತಿಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಆರ್‌ಬಿಐ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ. ಇದಕ್ಕೂ ಮುನ್ನ ವ್ಯಶಪಕ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.
ಈ ನಡುವೆ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬುಧವಾರ ತನ್ನ ಬಡ್ಡಿ ದರದಲ್ಲಿ 0.75% ಏರಿಕೆ ಮಾಡಿದೆ. ಆದರೆ ಭವಿಷ್ಯದಲ್ಲಿ ಬಡ್ಡಿ ದರ ಏರಿಕೆ ಸಾಧ್ಯತೆ ಇಲ್ಲ ಎಂದು ಸುಳಿವು ನೀಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಷೇರು ಸೂಚ್ಯಂಕಗಳು ಚೇತರಿಸಿತು.