Site icon Vistara News

Toyota motors : ಪಾಕಿಸ್ತಾನಕ್ಕೆ ಟೊಯೊಟಾ ಟಾಟಾ ಬೈ

Toyota

#image_title

ಇಸ್ಲಾಮಾಬಾದ್:‌ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿ ಆಗಿರುವ ಪಾಕಿಸ್ತಾನದಲ್ಲಿ ಇದೀಗ ವಿದೇಶಿ ಕಂಪನಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಿ ನಿರ್ಗಮಿಸುತ್ತಿವೆ. ಇತ್ತೀಚೆಗೆ ಬ್ರಿಟನ್‌ ಮೂಲದ ತೈಲ ಮತ್ತು ಅನಿಲ ಕಂಪನಿಯಾದ ಶೆಲ್‌, ಪಾಕಿಸ್ತಾನದಿಂದ ಹೊರಕ್ಕೆ ನಡೆದ ಬಳಿಕ ಇದೀಗ ಜಪಾನ್‌ ಮೂಲದ ಟೊಯೊಟಾ ಕೂಡ ( Toyota) ಟಾಟಾ ಬೈ ಹೇಳಿದೆ.

ಪಾಕಿಸ್ತಾನದಲ್ಲಿ ಟೊಯೊಟಾ ಮೋಟಾರ್‌ನ ವಾಹನಗಳನ್ನು ಮಾರಾಟ ಮಾಡುತ್ತಿರುವ ಇಂಡಸ್‌ ಮೋಟಾರ್‌ ಅಲ್ಲಿ ತನ್ನ ಕಚೇರಿಗಳನ್ನು ಕಾಯಂ ಆಗಿ ಮುಚ್ಚಲು ನಿರ್ಧರಿಸಿದೆ. ಹೀಗಿದ್ದರೂ ಟೊಯೊಟಾ ಮೋಟಾರ್‌ ಕಂಪನಿ ಅಧಿಕೃತವಾಗಿ ಈ ಬಗ್ಗೆ ಹೇಳಿಕೆಯನ್ನು ನೀಡಿಲ್ಲ. ಬಲೂಚಿಸ್ತಾನದಲ್ಲಿ ಪರ್ತಕರ್ತ ಸಫರ್‌ ಖಾನ್‌ ಎಂಬುವರು ಹೇಳಿರುವ ಪ್ರಕಾರ ಟೊಯೊಟಾ ಇಂಡಸ್‌ ಮೋಟಾರ್‌ ಕಾಯಂ ಆಗಿ ಪಾಕಿಸ್ತಾನದಿಂದ ನಿರ್ಗಮಿಸುತ್ತಿದೆ.

ಪಾಕಿಸ್ತಾನದಿಂದ ಟೊಯೊಟಾ ನಿರ್ಗಮನವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಚರ್ಚೆ ನಡೆದಿದೆ.

ಇತ್ತೀಚೆಗೆ ಇಂಡಸ್‌ ಮೋಟಾರ್‌, ತನ್ನ ವೆಂಡರ್‌ಗಳಿಗೆ ಕಚ್ಚಾ ಸಾಮಾಗ್ರಿಗಳನ್ನು ತರಲು ಕಷ್ಟವಾಗುತ್ತಿದೆ. ಸರಕುಗಳ ಆಮದಿಗೆ ಕ್ಲಿಯರೆನ್ಸ್‌ ಸಿಗುತ್ತಿಲ್ಲ. ಪೂರೈಕೆಯ ಸರಣಿ ಅಸ್ತವ್ಯಸ್ತವಾಗಿದೆ. ಈ ಹಿಂದೆ ಡಿಸೆಂಬರ್‌ನಲ್ಲಿಯೂ ಟೊಯೊಟಾ ಪಾಕಿಸ್ತಾನದಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ (SBP) ಆಮದಿಗೆ ಬೇಕಾದ ಕ್ಲಿಯರೆನ್ಸ್‌ ಅನ್ನು ನೀಡಿರಲಿಲ್ಲ,.

ಪಾಕಿಸ್ತಾನವು ತೀವ್ರವಾದ ಡಾಲರ್‌ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಆಮದಿಗೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಇದು ಕೈಗಾರಿಕೆಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಶೆಲ್‌ ಕಂಪನಿಯು ಪಾಕಿಸ್ತಾನದಲ್ಲಿ ಸ್ಥಳೀಯ ಬಿಸಿನೆಸ್‌ನಲ್ಲಿ ಹೂಡಿರುವ 77% ಷೇರುಗಳನ್ನು ಮಾರಿ ದೇಶದಿಂದ ನಿರ್ಗಮಿಸುತ್ತಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ಹಣದುಬ್ಬರ 38% ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶ್ರೀಲಂಕಾವನ್ನೂ ಹಿಂದಿಕ್ಕಿದೆ. ಶ್ರೀಲಂಕಾದಲ್ಲಿ ಹಣದುಬ್ಬರ 25.2%ಕ್ಕೆ ಇಳಿಕೆಯಾಗಿದೆ. (Pakistan inflation) ಈಗ ಏಷ್ಯಾದಲ್ಲಿಯೇ ಅತಿ ಹೆಚ್ಚು ಹಣದುಬ್ಬರ ಪಾಕಿಸ್ತಾನದಲ್ಲಿದೆ. ಭಾರತದಲ್ಲಿ ಹಣದುಬ್ಬರ 4.7% ಇದೆ. ಪಾಕಿಸ್ತಾನವು ಐಎಂಎಫ್‌ನ ಕಠಿಣ ಷರತ್ತುಗಳನ್ನು ಪೂರೈಸಲು ಹಿಂದೇಟು ಹಾಕುತ್ತಿದೆ. 1957ರಿಂದೀಚೆಗಿನ ಅವಧಿಯಲ್ಲಿಯೇ ಗರಿಷ್ಠ ಹಣದುಬ್ಬರವನ್ನು ಪಾಕಿಸ್ತಾನ ದಾಖಲಿಸಿದೆ.

2023ರ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಹಣದುಬ್ಬರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದೆ. ಪಾಕಿಸ್ತಾನಕ್ಕೆ ಈ ಹಿಂದೆ ಅಮೆರಿಕ, ಬಳಿಕ ಚೀನಾದಿಂದ ಹಣಕಾಸು ನೆರವು ಲಭಿಸುತ್ತಿತ್ತು. ಇದರೊಂದಿಗೆ ಪಾಕಿಸ್ತಾನ ತನ್ನನ್ನು ಭಾರತದ ಜತೆಗೆ ಹೋಲಿಸುತ್ತಿತ್ತು. ಆದರೆ ಈಗ ಪಾಕ್ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಭಾರತದಲ್ಲಿ ಹಣದುಬ್ಬರರ 4.7%ಕ್ಕೆ ಇಳಿದಿದೆ. ಆಹಾರ ಹಣದುಬ್ಬರ 3.8%ಕ್ಕೆ ತಗ್ಗಿದೆ. ಪಾಕಿಸ್ತಾನದಲ್ಲಿ ಆಹಾರ ಹಣದುಬ್ಬರ 48.7% ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ 50ವರ್ಷಗಳಲ್ಲಿ ಮೊದಲ ಬಾರಿಗೆ ಗಗನಕ್ಕೇರಿದ ಹಣದುಬ್ಬರ; ಪಾತಾಳಕ್ಕಿಳಿದ ಆರ್ಥಿಕ ಸ್ಥಿತಿ

Exit mobile version