ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಅನ್ನು ಖರೀದಿಸಿರುವ (Twitter) ಎಲಾನ್ ಮಸ್ಕ್ ಸ್ವತಃ ಸಿಇಒ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಟ್ವಿಟರ್ ಅನ್ನು ಗುರುವಾತ ತಡರಾತ್ರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಕಂಪನಿಯ ಹಾಲಿ ಸಿಇಒ, ಭಾರತೀಯ ಮೂಲದ ಪರಾಗ್ ಅಗ್ರವಾಲ್ ಅವರನ್ನು ವಜಾಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ವತಃ ಎಲಾನ್ ಮಸ್ಕ್ ಅವರೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗುವ ನಿರೀಕ್ಷೆ ಇದೆ. ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಎಲಾನ್ ಮಸ್ಕ್, ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಗಿ ಟ್ವಿಟರ್ ಹೆಚ್ಚು ಮುಕ್ತವಾಗಿ ಇರಬೇಕು. ಸುಧಾರಣೆ ಆಗಬೇಕು ಎಂದು ಈ ಹಿಂದೆ ಹೇಳಿದ್ದರು. ತಮ್ಮ ಯೋಚನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಾರಥಿಯ ಸೀಟಿನಲ್ಲಿ ಅವರೇ ಕುಳಿತುಕೊಂಡು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:Twitter | ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್, ಸಿಇಒ ಪರಾಗ್ ಅಗ್ರವಾಲ್ ವಜಾ