ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ (Twitter) ಅನ್ನು ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಖರೀದಿಸಿರುವುದರಿಂದ ನಿರಾಸೆಗೀಡಾದವರಿಗೆ ಇಲ್ಲಿದೆ ಗುಡ್ ನ್ಯೂಸ್. ಟ್ವಿಟರ್‌ನ ಸ್ಥಾಪಕ ಜಾಕ್ ಡೋರ್ಸೆ ಅವರು ಬ್ಲೂ ಸ್ಕೈ ಎಂಬ (Bluesky) ಹೊಸ ಸಾಮಾಜಿಕ ಜಾಲತಾಣವನ್ನು ಆರಂಭಿಸಲು ಈಗಾಗಲೇ ಸಿದ್ಧತೆ ಶುರು ಮಾಡಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಒಂದು ವಾರ ಮುನ್ನ ಡೋರ್ಸೆ ಅವರು, ತಮ್ಮ ವಿಕೇಂದ್ರೀಕೃತ ಸಾಮಾಜಿಕ ಜಾಲತಾಣ ಬ್ಲೂಸ್ಕೈ ಅನ್ನು ಪರೀಕ್ಷಾರ್ಥ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದ್ದರು. ಬ್ಲೂ ಸ್ಕೈ ಎಂದರೆ (ನೀಲಿಯಾಕಾಶ) ಅನಂತ ಸಾಧ್ಯತೆಗಳ ಆಗರ ಎಂಬ ಅರ್ಥವನ್ನು ಬಿಂಬಿಸುತ್ತದೆ ಎಂದು ಡೋರ್ಸೆ ಆಪ್ತರು ಹೇಳಿರುವುದಾಗಿ ವರದಿಯಾಗಿದೆ.
ನೂತನ ಸಾಮಾಜಿಕ ಜಾಲತಾಣದ ಪರೀಕ್ಷೆ ಈಗ ನಡೆಯುತ್ತಿದೆ. ನೆಟ್ ವರ್ಕ್ ಅಭಿವೃದ್ಧಿಯಾದ ಬಳಿಕ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.