Site icon Vistara News

Twitter | ಟ್ವಿಟರ್‌ನಲ್ಲಿ ಒಬ್ಬರು ಮಾಡಬಹುದಾದ ಕೆಲಸಕ್ಕೆ 10 ಜನರಿದ್ದಾರೆ ಎಂದ ಮಸ್ಕ್! 25% ಉದ್ಯೋಗ ಕಡಿತ ಶೀಘ್ರ?

musk

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ನಲ್ಲಿ ( Twitter) ಭಾರಿ ಉದ್ಯೋಗ ಕಡಿತದ ಸುಳಿವನ್ನು ಹೊಸ ಮಾಲೀಕ ಎಲಾನ್‌ ಮಸ್ಕ್‌ ನೀಡಿದ್ದಾರೆ. ಕಂಪನಿಯಲ್ಲಿ ಒಬ್ಬರು ಮಾಡಬಹುದಾದ ಕೋಡಿಂಗ್ ಕೆಲಸಕ್ಕೆ 10 ಮಂದಿ ಇದ್ದಾರೆ. ಇದು ಗೊಂದಲ ಸೃಷ್ಟಿಸಿದೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ. ಇದರೊಂದಿಗೆ ಟ್ವಿಟರ್‌ನಲ್ಲಿ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿದೆ.

ಟ್ವಿಟರ್‌ 2021ರ ಅಂತ್ಯದ ವೇಳೆಗೆ 7,000 ಉದ್ಯೋಗಿಗಳನ್ನು ಹೊಂದಿತ್ತು. ಇದರಲ್ಲಿ 2,000 ಉದ್ಯೋಗಿಗಳು ಮೊದಲ ಹಂತದಲ್ಲಿ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಉದ್ಯೋಗಿಗಳ ದಕ್ಷತೆಯನ್ನು ಅವಲೋಕಿಸಲು ಹಾಗೂ ಅದಕ್ಷ ಉದ್ಯೋಗಿಗಳನ್ನು ಗುರುತಿಸಲು ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ವಾರ್‌ ರೂಮ್‌ ಅನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ವಾರ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಕಂಪನಿಯನ್ನು ಖರೀದಿಸಿದ್ದರು. ಇದರೊಂದಿಗೆ ಕಳೆದ ಆರು ತಿಂಗಳಿನಿಂದ ಉಂಟಾಗಿದ್ದ ಊಹಾಪೋಹಗಳಿಗೆ ತೆರೆಬಿದ್ದಿತ್ತು.

Exit mobile version