ವಾಷಿಂಗ್ಟನ್: ಏಕಾಏಕಿ ಸಾಮಾಜಿಕ ಜಾಲತಾಣ ಟ್ವಿಟರ್‌ಅನ್ನು ಖರೀದಿಸುತ್ತೇನೆ ಎಂದು ಘೋಷಿಸಿ, ಖರೀದಿಯ ಕೊನೆಯ ಹಂತದಲ್ಲಿ ತಾತ್ಕಾಲಿಕ ಬ್ರೇಕ್ ಹಾಕಿ ಸುದ್ದಿಯಾಗಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರಿಗೆ ಟ್ವಿಟರ್ ಖರೀದಿ ಅನಿವಾರ್ಯವಾಗುವ ಸಾಧ್ಯತೆ ಇದೆ. ಎಲಾನ್ ಮಸ್ಕ್ ಅವರಿಗೆ ೪೪ ಶತಕೋಟಿ ಡಾಲರ್ (ಸುಮಾರು ೩.೫ ಲಕ್ಷ ಕೋಟಿ ರೂ.)ಗೆ ಮಾರಾಟ ಮಾಡಲು ಟ್ವಿಟರ್ ಷೇರುದಾರರು ಮಂಗಳವಾರ ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ, ಮಸ್ಕ್‌ಗೆ ಖರೀದಿ ಅನಿವಾರ್ಯವಾಗಲಿದೆ ಎಂದೇ ಹೇಳಲಾಗುತ್ತಿದೆ.
ಟ್ವಿಟರ್ ಖರೀದಿಸುತ್ತೇನೆ ಎಂದು ಘೋಷಿಸಿ, ಅಗ್ರಿಮೆಂಟ್ ಆಗಿ, ಕೊನೆಯ ಕ್ಷಣದಲ್ಲಿ ಉಲ್ಟಾ ಹೊಡೆದ ಮಸ್ಕ್ ವಿರುದ್ಧ ಟ್ವಿಟರ್ ಮೊಕದ್ದಮೆ ಹೂಡಿದೆ. ಅಕ್ಟೋಬರ್‌ನಲ್ಲಿ ಮೊಕದ್ದಮೆಯ ವಿಚಾರಣೆ ನಡೆಯಲಿದೆ. ಟ್ವಿಟರ್ ನಕಲಿ ಖಾತೆಗಳ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ ಎಂದೂ ಮಸ್ಕ್ ಪ್ರತಿ ದಾವೆ ಹೂಡಿದ್ದಾರೆ. ಇದಕ್ಕೂ ಮುನ್ನವೇ ಷೇರುದಾರರು ಟ್ವಿಟರ್ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ.
ಹಾಗೊಂದು ವೇಳೆ, ಅಕ್ಟೋಬರ್‌ನಲ್ಲಿ ವಿಚಾರಣೆ ನಡೆದು, ಮಸ್ಕ್ ವಿರುದ್ಧ ತೀರ್ಪು ಬಂದರೆ ಅವರು ಖರೀದಿಸುವುದು ಅನಿವಾರ್ಯವಾಗುತ್ತದೆ. ಈ ದಿಸೆಯಲ್ಲಿ ಷೇರುದಾರರು ಸಮ್ಮತಿ ಸೂಚಿಸಿರುವುದು ಮಾರಾಟದ ದೃಷ್ಟಿಯಿಂದ ಟ್ವಿಟರ್‌ಗೆ ಸಕಾರಾತ್ಮಕ ಬೆಳವಣಿಗೆ ಎನ್ನಲಾಗುತ್ತಿದೆ. ಒಂದು ಷೇರಿಗೆ ೫೪.೨೦ ಡಾಲರ್ ನೀಡುವುದಾಗಿ ಮಸ್ಕ್ ಘೋಷಿಸಿದ್ದಾರೆ.
ಇದನ್ನೂ ಓದಿ | Elon Musk | ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುವುದಾಗಿ ಎಲಾನ್ ಮಸ್ಕ್ ಘೋಷಣೆ