ಮುಂಬಯಿ: ಉದ್ಯಮಿ ಎಲಾನ್ ಮಸ್ಕ್ 44 ಶತಕೋಟಿ ಡಾಲರ್ (ಅಂದಾಜು 3.56 ಲಕ್ಷ ಕೋಟಿ ರೂ.) ಮೊತ್ತದ ಟ್ವಿಟರ್ (Twitter) ಖರೀದಿ ಡೀಲ್ ಅನ್ನು ಶುಕ್ರವಾರ (ಅಕ್ಟೋಬರ್ 28) ಅಂತಿಮಪಡಿಸುವ ಸಾಧ್ಯತೆ ಇದೆ.
ಬ್ಯಾಂಕ್‌ಗಳು ಎಲಾನ್ ಮಸ್ಕ್ ಅವರಿಗೆ ಡೀಲ್‌ಗೆ ಸಂಬಂಧಿಸಿದಂತೆ, ಸಾಲ ವಿತರಣೆಯ ಒಪ್ಪಂದದ ಪ್ರಕ್ರಿಯೆಗಳನ್ನು ಅಂತಿಮಗೊಳಿಸುತ್ತಿವೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
ಎಲಾನ್ ಮಸ್ಕ್ ಅವರು 46.5 ಶತಕೋಟಿ ಡಾಲರ್ ಮೌಲ್ಯದ (3.76 ಲಕ್ಷ ಕೋಟಿ ರೂ.) ಷೇರುಗಳನ್ನು ಅಡಮಾನ ಇಟ್ಟು ಸಾಲ ಪಡೆಯುತ್ತಿದ್ದಾರೆ. ಮೋರ್ಗಾನ್ ಸ್ಟಾನ್ಲಿ, ಬ್ಯಾಂಕ್ ಆಫ್ ಅಮೆರಿಕ ಸೇರಿದಂತೆ ಬ್ಯಾಂಕ್‌ಗಳು ಈ ಮೆಗಾ ಡೀಲ್‌ಗೆ ಹಣಕಾಸು ನೆರವು ನೀಡುತ್ತಿವೆ.