Site icon Vistara News

Update KYC : ಬ್ಯಾಂಕ್‌ ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ

Update KYC No need to go to bank to update bank KYC

ಬ್ಯಾಂಕ್‌ ಖಾತೆದಾರರು ತಮ್ಮ ಖಾತೆಯ know your customer (KYC) ಪ್ರಕ್ರಿಯೆಯನ್ನು ಪರಿಷ್ಕರಿಸಲು ಇನ್ನು ಮುಂದೆ ಬ್ಯಾಂಕ್‌ ಕಚೇರಿಗೆ ಹೋಗಬೇಕಿಲ್ಲ. ಅಂದರೆ ನೀವು ಸಲ್ಲಿಸಿರುವ ದಾಖಲೆಗಳು ವ್ಯಾಲಿಡ್‌ ಆಗಿದ್ದರೆ ಹಾಗೂ ನಿಮ್ಮ ವಿಳಾಸದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಕೆವೈಸಿ ಪರಿಷ್ಕರಣೆ ಸಲುವಾಗಿ ಬ್ಯಾಂಕ್‌ ಕಚೇರಿಗೆ ತೆರಳಬೇಕಿಲ್ಲ. ಸ್ವತಃ ಆರ್‌ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು.

ಆರ್‌ಬಿಐ ಏನು ಹೇಳಿತ್ತು? ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇರದಿದ್ದರೆ, ಗ್ರಾಹಕರು ಸೆಲ್ಫ್‌ ಡಿಕ್ಲರೇಷನ್‌ ಮೂಲಕ ಕೆವೈಸಿ ಪರಿಷ್ಕರಣೆ ಮಾಡಬಹುದು. ಹಾಗೂ ಡಿಕ್ಲರೇಷನ್‌ ಅನ್ನು ಇಮೇಲ್‌ -ಐಡಿ, ನೋಂದಾಯಿತ ಮೊಬೈಲ್‌ ನಂಬರ್‌, ಎಟಿಎಂ, ಇತರ ಯಾವುದಾದರೂ ಡಿಜಿಟಲ್‌ ಚಾನೆಲ್‌ ಮೂಲಕ ಬದಲಿಸಬಹುದು.

ಕೆವೈಸಿ ಪರಿಷ್ಕರಣೆ ಹೇಗೆ? ಆರ್‌ಬಿಐ ರಿ-ಕೆವೈಸಿಗೆ (re-KYC) ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ ಇದು ಹೇಗೆ ನಡೆಯುತ್ತದೆ ಎಂಬುದನ್ನು ನೋಡೋಣ.

ಸ್ಟೆಪ್‌ 1 : ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೆಬ್‌ಸೈಟ್‌ ಪ್ರಕಾರ ನಿಮ್ಮ ಕೆವೈಸಿ ಅಪ್‌ಡೇಟ್‌ ಸಲುವಾಗಿ ಬ್ಯಾಂಕಿನಿಂದ ನೋಟಿಫಿಕೇಶನ್‌ ಪಡೆದಿರಬಹುದು. ಆಗ ನೀವು ರಿ-ಕೆವೈಸಿ ಫಾರ್ಮ್‌ ಭರ್ತಿಗೊಳಿಸಬೇಕು.

ಸ್ಟೆಪ್‌ 2: ಎರಡನೇ ಹಂತದಲ್ಲಿ ನೀವು ಐಡೆಂಟಿಟಿ ಮತ್ತು ರೆಸಿಡೆನ್ಸ್‌ ಪ್ರೂಫ್‌ ಕುರಿತ ಸೆಲ್ಫ್‌ ಅಟೆಸ್ಟ್‌ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕಿನ ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಐಡೆಂಟಿಟಿ ಮತ್ತು ವಿಳಾಸಕ್ಕೆ ಯಾವ ದಾಖಲೆ ಬೇಕು ಎಂಬುದನ್ನು ಪರಿಶೀಲಿಸಬಹುದು.

ಸ್ಟೆಪ್‌ 3 : ನೀವು ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 10 ದಿನ ಬೇಕಾಗುತ್ತದೆ. ಈ ಮೂರು ಸುಲಭ ಕೆವೈಸಿ ಸ್ಟೆಪ್ಟ್ಸ್‌ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ತಿಳಿಸಿದೆ. ಎಸ್‌ಬಿಐ ಪ್ರಕಾರ ಐಡೆಂಟಿಟಿ/ಅಡ್ರೆಸ್‌ ಪ್ರೂಫ್‌ಗೆ ನೀವು ಸಲ್ಲಿಸಬಹುದಾದ ದಾಖಲೆಗಳು: ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ವಾಹನ ವಾಲನಾ ತರಬೇತಿಯ ಲೈಸೆನ್ಸ್‌, ಆಧಾರ್‌ ಕಾರ್ಡ್‌, ನರೇಗಾ ಕಾರ್ಡ್ ಅನ್ನು ಒದಗಿಸಬಹುದು.

ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಿರುವ ಮಾರ್ಗದರ್ಶಿಯಲ್ಲಿ ಕೆವೈಸಿ ಪರಿಷ್ಕರಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ. ವಿಡಿಯೊ ಆಧರಿತ ಕಸ್ಟಮರ್‌ ಐಡೆಂಟಿಫೀಕೇಶನ್‌ ಪ್ರೊಸೆಸ್‌ (V-CIP) ಅನ್ನೂ ನಡೆಸಬಹುದು ಎಂದು ತಿಳಿಸಿದೆ. (Video based customer Identification process)

ಕೆವೈಸಿ ಯಾವಾಗ ಅಗತ್ಯವಾಗುತ್ತದೆ? ಬ್ಯಾಂಕ್‌ಗಳಿಗೆ ನೀವು ಸಲ್ಲಿಸಿರುವ ದಾಖಲೆಗಳು ಅಧಿಕೃತ ವ್ಯಾಲಿಡ್‌ ಡಾಕ್ಯುಮೆಂಟ್‌ಗಳ ಜತೆಗೆ ತಾಳೆ ಆಗದಿದ್ದರೆ ಕೆವೈಸಿ ಪರಿಷ್ಕರಣೆ ಅಗತ್ಯ. ಈ ಹಿಂದೆ ಸಲ್ಲಿಸಿದ್ದ ದಾಖಲೆಗಳ ಅವಧಿ ಎಕ್ಸ್‌ಪೈರ್‌ ಆಗಿದ್ದರೂ ಕೆವೈಸಿ ಪರಿಷ್ಕರಣೆ ಅಗತ್ಯ. ಗ್ರಾಹಕರು ವಿಳಾಸ ಬದಲಾದ ಸಂದರ್ಭದಲ್ಲಿ ಕೂಡ ಕೆವೈಸಿ ಮೂಲಕ ಬದಲಿಸಬಹುದು. ಬ್ಯಾಂಕ್‌ಗಳು ರೆಕಾರ್ಡ್‌ಗಳನ್ನು ಅಪ್‌ಡೇಟ್‌ ಮಾಡಿ ಇರುವುದು ಕಡ್ಡಾಯ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ.

Exit mobile version