ಮುಂಬಯಿ: ಏರ್ ಇಂಡಿಯಾದಲ್ಲಿ ಟಾಟಾ ಸಮೂಹದ ವಿಸ್ತಾರ ಏರ್‌ಲೈನ್, (Air India ) ಏರ್ ಏಷ್ಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶೀಘ್ರದಲ್ಲಿಯೇ ವಿಲೀನವಾಗಲಿದೆ. ವಿಸ್ತಾರ ಏರ್‌ಲೈನ್ ಬ್ರಾಂಡ್ ಅನ್ನು ಟಾಟಾ ಸಮೂಹ ಕೈ ಬಿಡುವ ಸಾಧ್ಯತೆ ಇದೆ.
ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಟ್ರಸ್ಟ್ ಈ ಪ್ರಕ್ರಿಯೆಯನ್ನು ಆರಂಭಿಸಿದೆ. ವಿಸ್ತಾರ ಏರ್‌ಲೈನ್ ಅನ್ನು ಟಾಟಾ ಸಮೂಹವು ಸಿಂಗಾಪುರ ಏರ್‌ಲೈನ್ಸ್ ಜತೆ ಜಂಟಿ ಸಹಭಾಗಿತ್ವದಲ್ಲಿ ನಡೆಸುತ್ತಿದೆ. ಇದೀಗ ವಿಲೀನ ಕುರಿತು ಸರಣಿ ಮಾತುಕತೆ ಆರಂಭವಾಗಿದೆ. ಇನ್ನೊಂದು ವಾರದಲ್ಲಿ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.
ವಿಲೀನದ ಬಳಿಕ ಏರ್ ಇಂಡಿಯಾ ಮಾರುಕಟ್ಟೆ ಪಾಲು ಮತ್ತು ವಿಮಾನಗಳ ಗಾತ್ರದ ದೃಷ್ಟಿಯಿಂದ ದೇಶದ ಎರಡನೇ ಅತಿ ದೊಡ್ಡ ಏರ್‌ಲೈನ್ ಎನ್ನಿಸಲಿದೆ. ಏರ್ ಇಂಡಿಯಾ ಈ ವಿಲೀನದ ನಂತರ ಕಡಿಮೆ ದರದ ಸೇವೆ ಒದಗಿಸುವ ಏರ್‌ಲೈನ್ ಮತ್ತು ಪೂರ್ಣ ಪ್ರಮಾಣದ ಏರ್‌ಲೈನ್ ಅನ್ನು ಹೊಂದಲಿದೆ. ಏರ್ ಇಂಡಿಯಾ ಬತ್ತಳಿಕೆಯಲ್ಲಿ ವಿಮಾನಗಳ ಸಂಖ್ಯೆ 233ಕ್ಕೆ ಏರಿಕೆಯಾಗಲಿದೆ.
ವಿಸ್ತಾರ ಏರ್‌ಲೈನ್‌ನ ಮಾತೃಸಂಸ್ಥೆಯಾದ ಟಾಟಾ ಎಸ್‌ಐಎ ಏರ್‌ಲೈನ್ಸ್‌ನಲ್ಲಿ 49% ಷೇರುಗಳನ್ನು ಒಳಗೊಂಡಿದೆ.