ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ಹವಾ ಜಗದಗಲ ಹರಡಿದೆ. ಎಲ್ಲೆಲ್ಲೂ ಕಿಚ್ಚ ಸುದೀಪ್ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕುತೂಹಲ ಹಾಗೂ ಸಂಭ್ರಮದಿಂದ ಕಾಯುತ್ತಿದ್ದಾರೆ. ಸಿನಿಮಾ ಹೇಗಿರಬಹುದು ಎಂಬ ನಿರೀಕ್ಷೆ ಕೋಟ್ಯಂತರ ಅಭಿಮಾನಿಗಳಲ್ಲಿದೆ. ಹೀಗೆ ನೈಲ್ ಬೈಟಿಂಗ್ ಕ್ಷಣದಲ್ಲೇ ಪ್ರಖ್ಯಾತ ಸಿನಿಮಾ ರಿವ್ಯೂವರ್ ಉಮೈರ್ ಸಾಂಧು ಈ ಸಿನಿಮಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.
ಹೇಗಿದೆ ವಿಕ್ರಾಂತ್ ರೋಣ?
ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾದ ಉಮೈರ್ ಸಾಂಧು ಈ ಸಿನಿಮಾ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವಿಕ್ರಾಂತ್ ರೋಣ ವೀಕ್ಷಿಸಿ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಉಮೈರ್ ಸಾಂಧು, ಈ ಸಿನಿಮಾ ಬೇರೆ ಲೆವೆಲ್ ಎಂದಿದ್ದಾರೆ. ಈ ಹಿಂದೆ ಕೆಜಿಎಫ್, ಚಾರ್ಲಿಯಂಥ ಅದ್ಭುತ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದು 2022 ಸ್ಯಾಂಡಲ್‌ವುಡ್ ಪಾಲಿಗೆ ಸ್ವರ್ಣಯುಗ ಎಂದಿದ್ದಾರೆ. ಈಗ ಕಿಚ್ಚ ಸುದೀಪ್ ಅಭಿನಯದ ಸಿನಿಮಾಗೆ ಉಮೈರ್ ಸಾಂಧು ಫುಲ್ ಮಾರ್ಕ್ಸ್ ಕೊಟ್ಟಿದ್ದು, ‘ವಿಕ್ರಾಂತ್ ರೋಣ’ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಹೇಳಿದ್ದಾರೆ. ಹೀಗಾಗಿ ಸಿನಿಮಾ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ.
ಪ್ರಮುಖವಾಗಿ ವಿಕ್ರಾಂತ್ ರೋಣ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಉಮೈರ್ ಸಾಂಧು ಹೇಳಿರುವ ಮಾತುಗಳು ಅಭಿಮಾನಿಗಳ ಪುಳಕ ಹೆಚ್ಚಿಸಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಸದಾ ನೆನಪಿನಲ್ಲಿ ಇರುವಂಥದ್ದು ಎಂದು ಹೆಳಿದ್ದಾರೆ. ಇವರು ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್-2’ ಸಿನಿಮಾ ಬಗ್ಗೆ ಮೊತ್ತಮೊದಲು ರಿವ್ಯೂ ಕೊಟ್ಟಿದ್ದರು. ಈಗ ವಿಕ್ರಾಂತ್ ರೋಣ ಬಗ್ಗೆಯೂ ಮೊತ್ತಮೊದಲು ರಿವ್ಯೂ ಬರೆದಿದ್ದು, ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ವಿಕ್ರಾಂತ್ ರೋಣ ಸ್ಯಾಂಡಲ್‌ವುಡ್ ಪಾಲಿಗೆ ಎಂದಿಗೂ ಮರೆಯಲಾಗದ ಸಿನಿಮಾ ಆಗಿ, ಹೊಸ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ ಎಂಬ ಅಭಿಪ್ರಾಯ ಸೃಷ್ಟಿಸಿದೆ.
ಇದನ್ನೂ ಓದಿ: Vikrant Rona | ವಿಕ್ರಾಂತ್ ರೋಣ ಅಂದರೆ ವಿಕ್ಟರಿ ರೋಣ : ಇದು ರೋಣನ ಪ್ರೀ ರಿಲೀಸ್ ಇವೆಂಟ್ ಹಬ್ಬ