Site icon Vistara News

WhatsApp : ‌ವಾಟ್ಸ್ಆ್ಯಪ್‌ನಲ್ಲಿ ಈಗ 60 ಸೆಕೆಂಡ್‌ಗಳ ವಿಡಿಯೊ ಮೆಸೇಜ್‌ ರೆಕಾರ್ಡ್‌ ಮಾಡಿ ಕಳಿಸಿ

whatsup

whatsup created new feature whic is enable to user to send vedio messages

ನವ ದೆಹಲಿ: ವಾಟ್ಸ್ಆ್ಯಪ್‌ ನ್ಯೂಸ್‌ ಟ್ರ್ಯಾಕರ್‌ ವಬೆಟಾಇನ್ಫೋ (WABetalnfo) ಪ್ರಕಾರ ವಾಟ್ಸ್ಆ್ಯಪ್‌ ಐಒಎಸ್‌ ಮತ್ತು ಆಂಡ್ರಾಯ್ಡ್‌ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್‌ ಅನ್ನು ಶೀಘ್ರ ಅಳವಡಿಸಲಿದೆ. ಬಳಕೆದಾರರಿಗೆ ಹೊಸ ಅನುಭವ ಮತ್ತು ಅನುಕೂಲ ಒದಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್‌ ಶಾರ್ಟ್‌ ವಿಡಿಯೊ ಸೌಲಭ್ಯವನ್ನು ಕಲ್ಪಿಸಿದೆ. ಇದರಲ್ಲಿ ಬಳಕೆದಾರರು ಕೇವಲ ಕ್ಯಾಮರಾ ಬಟನ್‌ ಒತ್ತಿ 60 ಸೆಕೆಂಡ್‌ಗಳ ಸಣ್ಣ ವಿಡಿಯೊ ಕ್ಲಿಪ್‌ ಅನ್ನು ರೆಕಾರ್ಡ್‌ ಮಾಡಿ ಶೇರ್‌ ಮಾಡಬಹುದು.

ಈ ಫೀಚರ್‌ ಹೇಗೆ ಕಾರ್ಯನಿರ್ವಹಿಸುತ್ತದೆ?: WABetalnfo ವಾಟ್ಸ್ಆ್ಯಪ್‌ನ ಈ ಫೀಚರ್‌ ಬಗ್ಗೆ ವಿವರಗಳನ್ನು ತನ್ನ ವೆಬ್‌ಸೈಟ್‌ ನಲ್ಲಿ ಸ್ಕ್ರೀನ್‌ ಶಾಟ್‌ ಮೂಲಕ ಅಪ್‌ಡೇಟ್‌ ಮಾಡಿದೆ. ಬಳಕೆದಾರರ ಪರ್ಸನಲ್‌ ಚಾಟ್‌ನಲ್ಲಿ ಈ ಫೀಚರ್‌ ಸಿಗುತ್ತದೆ. ಶಾರ್ಟ್‌ ವಿಡಿಯೊ ಕಳಿಸುವವರು ಫೋನ್‌ ಸ್ಕ್ರೀನ್‌ನ ಬಲ ತುದಿಯಲ್ಲಿ ಇರುವ microphone button ಅನ್ನು tap ಮಾಡಬೇಕು. ಮೈಕ್ರೊಫೋನ್‌ ವಿಡಿಯೊ ಕ್ಯಾಮೆರಾಗೆ ಟರ್ನ್‌ ಆಗಿದ್ದರೆ ಅದರ ಅರ್ಥ ಟೂಲ್‌ ನಿಮ್ಮ ವಾಟ್ಸ್ಆ್ಯಪ್‌ ಅಕೌಂಟ್‌ಗೆ ಲಭ್ಯವಿದೆ. ಈ ಸೌಲಭ್ಯ end-to-end-encrypted ಆಗಿರುತ್ತದೆ. ಅಂದರೆ ಈ ಶಾರ್ಟ್‌ ವಿಡಿಯೊ ಸಂದೇಶಗಳನ್ನು ಸ್ವತಃ ಮೆಟಾದ ಇನ್‌ಸ್ಟಂಟ್‌ ಮೆಸೇಜಿಂಗ್‌ ಸರ್ವೀಸ್‌ ಸೇರಿದಂತೆ ಯಾವುದಕ್ಕೂ ಬೇಧಿಸಲು ಸಾಧ್ಯವಿಲ್ಲ.

ಲಭ್ಯತೆ: ಈ ಫೀಚರ್‌ ಆಯ್ದ ಬೆಟಾ ಟೆಸ್ಟರ್‌ಗಳಲ್ಲಿ (beta tester) ಲಭ್ಯವಿದ್ದು, ಮುಂದುನ ವಾರಗಳಲ್ಲಿ ಮತ್ತಷ್ಟು ಬಳಕೆದಾರರಿಗೆ ಲಭಿಸಲಿದೆ.

ವಾಟ್ಸ್‌ ಆ್ಯಪ್‌ನಲ್ಲಿ ಲಿಂಕ್‌ ಅನ್ನು ಶೇರ್‌ ಮಾಡುವ ಮೂಲಕ ಗ್ರೂಪ್ ವಿಡಿಯೊ ಕಾಲ್‌ ಏರ್ಪಡಿಸಲು ಕಾಲ್‌ ಲಿಂಕ್ಸ್‌ ( Call Links) ಎಂಬ ಹೊಸ ಫೀಚರ್ ಅನ್ನು ಕಲ್ಪಿಸಲಾಗುವುದು ಎಂದು ಮೆಟಾ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಕೆಲ ತಿಂಗಳಿನ ಹಿಂದೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.‌

ಕಾಲ್‌ ಲಿಂಕ್ಸ್‌ ಫೀಚರ್‌ನಲ್ಲಿ ಬಳಕೆದಾರರು ಒಂದು ಲಿಂಕ್‌ ಅನ್ನು ಇತರರಿಗೆ ಕಳಿಸಿ ಆಡಿಯೊ ಅಥವಾ ವಿಡಿಯೊ ಕರೆಯಲ್ಲಿ ಭಾಗವಹಿಸಲು ತಿಳಿಸಬಹುದು. ‌ಮುಂಬರುವ ದಿನಗಳಲ್ಲಿ ವಾಟ್ಸ್‌ ಆ್ಯಪ್‌ನಲ್ಲಿ 32 ಮಂದಿಯನ್ನು ಒಳಗೊಂಡ ಗ್ರೂಪ್‌ ವಿಡಿಯೊ ಕರೆಗಳನ್ನು ಇದರ ಮೂಲಕ ಸುಲಭವಾಗಿ ಮಾಡಬಹುದು. ಈ ಹಿಂದೆ ವಾಟ್ಸ್‌ ಆ್ಯಪ್‌ನಲ್ಲಿ ಗ್ರೂಪ್‌ ವಿಡಿಯೊ ಕರೆಗಳು 8 ಬಳಕೆದಾರರಿಗೆ ಸೀಮಿತವಾಗಿತ್ತು.

ಝೂಮ್‌, ಫೇಸ್‌ ಟೈಮ್‌, ಗೂಗಲ್‌ ಮೀಟ್‌ನಲ್ಲಿ ಕೆಲ ಕಾಲದಿಂದಲೇ ಕಾಲ್‌ ಲಿಂಕ್ಸ್‌ ಸೌಲಭ್ಯ ಇದೆ. ಭಾರತದಲ್ಲಿ ವಾಟ್ಸ್‌ ಆ್ಯಪ್‌ ಜನಪ್ರಿಯವಾಗಿರುವುದರಿಂದ ಕಾಲ್‌ ಲಿಂಕ್ಸ್‌ ಫೀಚರ್‌ ಅಳವಡಿಸುವುದರಿಂದ ಅನೇಕ ಮಂದಿ ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: WhatsApp: ವಾಟ್ಸಾಪ್ ಏಕೆ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ?

Exit mobile version