WhatsApp: ವಾಟ್ಸಾಪ್ ಏಕೆ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ? - Vistara News

ಗ್ಯಾಜೆಟ್ಸ್

WhatsApp: ವಾಟ್ಸಾಪ್ ಏಕೆ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ?

ಮೆಟಾ (Meta) ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp), ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ 74 ಲಕ್ಷಕ್ಕೂ ಅಧಿಕ ಭಾರತೀಯ ಬಳಕೆದಾರರ ಖಾತೆಗಳ ಮೇಲೆ ನಿಷೇಧ ಹೇರಿದೆ.

VISTARANEWS.COM


on

WhatsApp Accounts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ 74.52 ಲಕ್ಷ ಭಾರತೀಯ ಬಳಕೆದಾರರ (Indian accounts) ಖಾತೆಗಳನ್ನು ಡಿಲಿಟ್ ನಿಷೇಧ ಮಾಡಿರುವುದಾಗಿ ಮೆಟಾ (Meta) ಒಡೆತನದ ವಾಟ್ಸಾಪ್ (WhatsApp) ಹೇಳಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳು ಅನುಸಾರವಾಗಿ ಪ್ರತಿ ತಿಂಗಳ ಮೊದಲ ದಿನ ಸೋಷಿಯಲ್ ಮೀಡಿಯಾಗಳು ವರದಿಯನ್ನು ಪ್ರಕಟಿಸಬೇಕಾಗುತ್ತದೆ. ಅದರನ್ವಯ ಈಗ ವರದಿಯ ಪ್ರಕಟವಾಗಿದ್ದು, ಬಳಕೆದಾರರ ಮನವಿ ಹಾಗೂ ದೂರುಗಳ ಆಧಾರದ ಮೇಲೆ ವಾಟ್ಸಾಪ್, ಲಕ್ಷಾಂತರ ಖಾತೆಗಳನ್ನು ಡಿಲಿಟ್ ಮಾಡಿದೆ.

ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಅಪಾಯಕಾರಿ ನಡವಳಿಕೆಯನ್ನು ತಡೆಯಲು ಟೂಲ್ಸ್ ಮತ್ತು ಸಂಪನ್ಮೂಲಗಳನ್ನು ನಿಯೋಜಿಸುತ್ತದೆ. ಹಾನಿ ಸಂಭವಿಸಿದ ನಂತರ ಅದನ್ನು ಪತ್ತೆಹಚ್ಚುವುದಕ್ಕಿಂತಲೂ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸವುದೇ ಉತ್ತಮ ಎಂದು ಕಂಪನಿಯು ಹೇಳಿಕೊಂಡಿದೆ.

ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ಕೈಗೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಹಾಗೆಯೇ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ನಿಯಂತ್ರಸಲು ವಾಟ್ಸಾಪ್ ತನ್ನದೇ ಆದ ತಡೆಗಟ್ಟುವ ಕ್ರಮಗಳನ್ನು ಹೊಂದಿದೆ . ಇದರ ಭಾಗವಾಗಿಯೇ ವಾಟ್ಸಾಪ್ ಏಪ್ರಿಲ್ ತಿಂಗಳಲ್ಲಿ 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಮತ್ತು ಬಳಕೆದಾರರಿಂದ ಯಾವುದೇ ವರದಿಗಳ ಮೊದಲು ಈ ಖಾತೆಗಳಲ್ಲಿ 2.4 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ನಿಂದನೆ ಪತ್ತೆ ಕಾರ್ಯಾಚರಣೆಯು ಮರು ಹಂತದಲ್ಲಿ ನಡೆಯುತ್ತದೆ. ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ನೀಡುವಾಗ ಪತ್ತೆ ಹಚ್ಚಲಾಗುತ್ತದೆ. ನಾವು ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸುತ್ತೇವೆ. ಈ ಕೇಸ್‌ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಕಾಲಾನಂತರದಲ್ಲಿ ನಮ್ಮ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಹಾಯ ಮಾಡಲು ವಿಶ್ಲೇಷಕರ ತಂಡವು ಈ ವ್ಯವಸ್ಥೆಗಳನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್

ಜೂನ್ 1ರಂದು ವಾಟ್ಸಾಪ್, ತನ್ನ ಹೊಸ ಗ್ಲೋಬಲ್ ಸೆಕ್ಯುರಿಟಿ ಸೆಂಟರ್ ಅನಾವರಣ ಮಾಡಿದೆ. ಅನ್ ವಾಂಟೆಂಡ್ ಕಾಂಟಾಕ್ಟ್ಸ್ ಮತ್ತು ಸ್ಪ್ಯಾಮರ್‌ಗಳಿಂದ ಬಳಕೆದಾರರು ಹೇಗೆ ತಪ್ಪಿಸಿಕೊಳ್ಳುವುದನ್ನು ಈ ಸೆಂಟರ್‌ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ಹೊಸ ಪುಟವು ಇಂಗ್ಲಿಷ್ ಮಾತ್ರವಲ್ಲದೇ, ಕನ್ನಡವೂ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Mobile Data Saving: ಮೊಬೈಲ್ ಡೇಟಾ ಉಳಿಸಲು ಇಲ್ಲಿದೆ ಕೆಲವು ಸರಳ ಉಪಾಯಗಳು!

Mobile data saving: ಡೇಟಾ ಮೊಬೈಲ್ ಗೆ ಜೀವ ತುಂಬುತ್ತದೆ. ನಮ್ಮ ಕೆಲವೊಂದು ಅಭ್ಯಾಸ, ನಿರ್ಲಕ್ಷ್ಯದಿಂದಾಗಿ ನಮಗೆ ಅರಿವಿಲ್ಲದಂತೆ ಹೆಚ್ಚಿನ ಡೇಟಾ ನಷ್ಟಕ್ಕೆ ಕಾರಣವಾಗಬಹುದು. ಡೇಟಾ ನಷ್ಟವನ್ನು ಕಡಿಮೆ ಮಾಡಲು, ಡೇಟಾ ಬಳಕೆಯನ್ನು ಗರಿಷ್ಠಗೊಳಿಸಲು ಸಹಾಯ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Mobile data
Koo

ಆಂಡ್ರಾಯ್ಡ್ (Android) ಸ್ಮಾರ್ಟ್ ಫೋನ್‌ಗಳು (smart phones) ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಂದು ಕ್ಷಣ ಕೈಕೊಟ್ಟರೂ, ಎಲ್ಲಾದರೂ ಕಳೆದು ಹೋದರೂ ಓಡುತ್ತಿದ್ದ ಬದುಕು ಒಂದು ಕ್ಷಣ ನಿಂತಂತಾಗುತ್ತದೆ. ಇಂತಹ ಮೊಬೈಲ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಅವುಗಳಲ್ಲಿ ಮೊಬೈಲ್ ಡೇಟಾ (mobile data saving) ಕೂಡ ಒಂದಾಗಿದೆ.

ಮೊಬೈಲ್ ನಲ್ಲಿ ಡೇಟಾ ಎನ್ನುವುದು ಅದರ ಉಸಿರಿದ್ದಂತೆ. ನಿರಂತರ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪ್ರವೇಶಿಸಲು ಮತ್ತು ಪ್ರಯಾಣದಲ್ಲಿರುವಾಗ ಮಲ್ಟಿಮೀಡಿಯಾ (Multimedia) ವಿಷಯವನ್ನು ಆನಂದಿಸಲು ಇದು ನಮಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಮೊಬೈಲ್ ಡೇಟಾದ ಮೇಲೆ ಹೆಚ್ಚಿನ ಅವಲಂಬನೆ ಸೀಮಿತ ಡೇಟಾ (Limited data) ಯೋಜನೆಗಳನ್ನು ಹೊಂದಿರುವವರಿಗೆ ದುಬಾರಿಯಾಗಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಹೇಗೆ ಉಳಿಸುವುದು ಎನ್ನುವುದನ್ನು ತಿಳಿದುಕೊಂಡಿರಬೇಕು.

ಮೊಬೈಲ್ ಡೇಟಾವನ್ನು ಕಡಿಮೆ ಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುವುದು ಬಹಳ ಮುಖ್ಯ. ಇದಕ್ಕಾಗಿ ಮೊಬೈಲ್ ಡೇಟಾ ಬಳಕೆಯ ಅಭ್ಯಾಸದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಅನಗತ್ಯವಾಗಿ ಡೇಟಾ ನಷ್ಟವಾಗುವುದನ್ನು ತಡೆಯಬಹುದು.

ಇದನ್ನು ಓದಿ: Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!


1. ಬಳಕೆಯ ಮೇಲ್ವಿಚಾರಣೆ ಮಾಡಿ

ಸಾಮಾನ್ಯವಾಗಿ ಡೇಟಾ ಬಳಕೆಯನ್ನು ಕಡಿಮೆ ಮಾಡುವ ಮೊದಲ ಹಂತವೆಂದರೆ ಬಳಕೆಯನ್ನು ಟ್ರ್ಯಾಕ್ ಮಾಡುವುದು. ಹೆಚ್ಚಿನ ಮೊಬೈಲ್ ಸಾಧನಗಳು ಡೇಟಾ ಬಳಕೆಯ ಮಾನಿಟರ್ ಮಾಡುತ್ತದೆ. ಅದು ನಿಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಎಚ್ಚರಿಕೆಗಳನ್ನು ನೀಡುತ್ತದೆ.


2. ವೈ-ಫೈ ಬಳಸಿ

ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಲು ವೈ-ಫೈ ಉತ್ತಮ ಮಾರ್ಗವಾಗಿದೆ. ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಮನೆ, ಕಚೇರಿ, ಕಾಫಿ ಶಾಪ್‌ಗಳಲ್ಲಿ ಇರುವ ವೈ ಫೈಗಳನ್ನು ಬಳಸಿ. ಇದು ಮೊಬೈಲ್ ಡೇಟಾವನ್ನು ಹೆಚ್ಚಾಗಿ ಬಳಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

3. ಅಪ್ಲಿಕೇಶನ್‌ ನಿಯಂತ್ರಿಸಿ

ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡಲು ಕೆಲವು ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಡೇಟಾವನ್ನು ಕುಗ್ಗಿಸಿದರೆ, ಇನ್ನು ಕೆಲವು ಅಪ್ಲಿಕೇಶನ್ ಗಳು ಬಳಸುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ರೋಮ್ ಡೇಟಾ ಸೇವರ್, ಒಪೇರಾ ಮ್ಯಾಕ್ಸ್ ಮತ್ತು ಒನಾವೊ ಎಕ್ಸ್‌ಟೆಂಡ್ ಕೂಡ ಸೇರಿವೆ.


4. ಅಪ್ಡೇಟ್ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಮೊಬೈಲ್ ಸಾಧನಗಳಲ್ಲಿ ಇರುವ ಅಪ್ಲಿಕೇಶನ್‌ಗಳು ನಿರಂತರ ಅಪ್ಡೇಟ್ ಆಗುತ್ತಿರುತ್ತದೆ. ಇದನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ನಿಷ್ಕ್ರಿಯಗೊಳಿಸಿದರೆ ಬಹಳಷ್ಟು ಡೇಟಾವನ್ನು ಉಳಿಸಬಹುದು. ವೈಫೈ ಸಂಪರ್ಕವಿದ್ದಾಗ ಮಾತ್ರ ಅಪ್ಲಿಕೇಶನ್‌ ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.


5. ಸ್ವಯಂ-ಪ್ಲೇ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಸ್ವಯಂ-ಪ್ಲೇ (self play) ವಿಡಿಯೋ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅದು ಹೆಚ್ಚಿನ ಡೇಟಾವನ್ನು ತಿನ್ನುತ್ತದೆ. ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಸ್ವಯಂ-ಪ್ಲೇ ವಿಡಿಯೋ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿ.

6. ಆಫ್‌ಲೈನ್ ಆಯ್ಕೆ ಮಾಡಿ

ಆಫ್‌ಲೈನ್‌ನಲ್ಲಿ ವಿಡಿಯೊ ನೋಡುವುದು ಮತ್ತು ಡಾಟಾ ಸಂಗ್ರಹ ಇರುವಾಗ ಡೌನ್‌ಲೋಡ್ ಮಾಡುವುದು ಡೇಟಾ ಬಳಕೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ವೈ-ಫೈಗೆ ಸಂಪರ್ಕಗೊಂಡಿರುವಾಗ ನಿಮ್ಮ ಮೆಚ್ಚಿನ ಹಾಡು, ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮೊಬೈಲ್ ಡೇಟಾವನ್ನು ಬಳಸದೆಯೇ ಅವುಗಳನ್ನು ಅನಂತರ ವೀಕ್ಷಿಸಬಹುದು.

7. Lite ಆವೃತ್ತಿಗಳನ್ನು ಬಳಸಿ

ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳು ಕಡಿಮೆ ಡೇಟಾವನ್ನು ಬಳಸುತ್ತವೆ. ಅವುಗಳು ಕಡಿಮೆ ಡೇಟಾವನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ Facebook Lite, Messenger Lite ಮತ್ತು YouTube Go ಮೊದಲಾದವುಗಳು ಮೊಬೈಲ್ ಡೇಟಾವನ್ನು ಕಡಿಮೆ ಬಳಸುತ್ತದೆ.

8. ಹಿನ್ನೆಲೆ ಡೇಟಾ ಬಳಕೆ ನಿರ್ಬಂಧಿಸಿ

ಕೆಲವು ಅಪ್ಲಿಕೇಶನ್‌ಗಳು ಬಳಸದಿದ್ದರೂ ಹಿನ್ನೆಲೆಯಲ್ಲಿ ಡೇಟಾವನ್ನು ಬಳಸುತ್ತವೆ. ಇದನ್ನು ತಡೆಗಟ್ಟಲು ನಿರಂತರ ಸಂಪರ್ಕದ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಡೇಟಾ ಬಳಕೆಯನ್ನು ನಿರ್ಬಂಧಿಸಿ. ಇದು ಡೇಟಾವನ್ನು ಉಳಿಸಲು ಮತ್ತು ಮೊಬೈಲ್ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

Continue Reading

ತಂತ್ರಜ್ಞಾನ

Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!

Kishan Bagaria: ಮೆಸೇಜಿಂಗ್ ಅಪ್ಲಿಕೇಶನ್ ವೊಂದನ್ನು ಸಿದ್ದ ಪಡಿಸಿದ ಅಸ್ಸಾಂನ ಹಳ್ಳಿಯೊಂದರ 26 ವರ್ಷದ ಯುವಕನಿಗೆ ಅದು ಹೆಸರು ಮತ್ತು ಹಣ ಎರಡನ್ನು ತಂದುಕೊಡುತ್ತದೆ ಎಂಬ ಕನಸು ಕೂಡ ಇರರಲಿಲ್ಲ. ಆದರೆ ಅವನು ಸಿದ್ದಪಡಿಸಿದ ಒಂದು ಆಪ್ ಅವನನ್ನು ರಾತ್ರೋರಾತ್ರಿ ಕೋಟ್ಯಾಧೀಶ್ವರನ್ನಾಗಿ ಮಾಡಿದೆ.

VISTARANEWS.COM


on

By

Kishan Bagaria
Koo

ಮೆಸೇಜಿಂಗ್ ಅಪ್ಲಿಕೇಶನ್ (Messaging App) ಅಭಿವೃದ್ಧಿ ಮಾಡಿದ ಅಸ್ಸಾಂನ (assam) ಹಳ್ಳಿಯೊಂದರ 26 ವರ್ಷದ ಯುವಕ ಈಗ ವಿಶ್ವ ಖ್ಯಾತಿಗಳಿಸಿದ್ದಾನೆ. ಇವನು ತಯಾರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ (US) ಟೆಕ್ ದೈತ್ಯ ( tech giant) ಕಂಪೆನಿಯೊಂದು ಬರೋಬ್ಬರಿ 400 ಕೋಟಿ ರುಪಾಯಿಗಿಂತಲೂ ಹೆಚ್ಚು ಮೌಲ್ಯಕ್ಕೆ ಖರೀದಿ ಮಾಡಿದೆ. ಅಸ್ಸಾಂನ ದಿಬ್ರುಗಢದ (Dibrugarh) ಕಿಶನ್ ಬಗಾರಿಯಾ (Kishan Bagaria) ತಾನು ಸೃಷ್ಟಿ ಮಾಡಿದ ಅಪ್ಲಿಕೇಶನ್ ನಿಂದಾಗಿ ತನಗೆ ಜಾಗತಿಕ ಮನ್ನಣೆಯೊಂದಿಗೆ ಖ್ಯಾತಿ ಮತ್ತು ಹಣ ಎರಡು ಸಿಗುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ.

ಕಿಶನ್ ಬಗಾರಿಯಾ ಸಿದ್ದಪಡಿಸಿದ Texts.com ಎಂಬ ಹೆಸರಿನ ಸಿಂಗಲ್​ ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ ಟೆಕ್ ದೈತ್ಯ (US tech giant) ಆಟೋಮ್ಯಾಟಿಕ್ (Automattic) 50 ಮಿಲಿಯನ್‌ ಡಾಲರ್ ಗೆ ಖರೀದಿ ಮಾಡಿದೆ. ಈ ಕಂಪೆನಿಯು ಮ್ಯಾಟ್ ಮುಲ್ಲೆಂಗ್ ಅವರ ಒಡೆತನದಲ್ಲಿದೆ. ಇವರು WordPress.com ಮತ್ತು Tumblr ನ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

Kishan Bagaria


ಯಾರು ಈ ಕಿಶನ್ ?

ಉದ್ಯಮಿ ಮಹೇಂದ್ರ ಬಗಾರಿಯಾ ಮತ್ತು ನಮೀತಾ ದಂಪತಿಯ ಮಗನಾಗಿರುವ ಕಿಶನ್ ದಿಬ್ರುಗಢದ ಥಾನಾ ಚರಿಯಾಲಿ ನಿವಾಸಿ.ಕಂಪೆನಿಯು Texts.com ಖರೀದಿ ಮಾಡಿದ ಬಳಿಕ ಅವರು ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾರೆ. ಅವರ ಆಪ್ ಸುಮಾರು 416 ಕೋಟಿ ರೂಪಾಯಿ ಗೆ ಮಾರಾಟವಾಗಿದೆ. ಮಾತ್ರವಲ್ಲ ಕಿಶನ್ ನ ಆಪ್ ಅನ್ನು ಖರೀದಿ ಮಾಡಿರುವ ಆಟೋಮ್ಯಾಟಿಕ್ ಕಂಪೆನಿ Texts.com ನ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಹೇಗಿತ್ತು ಪಯಣ ?

ಕಿಶನ್ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ತಂತ್ರಜ್ಞಾನ ಅವರ ಬಳಿ ಇರಲಿಲ್ಲ. ವಿಂಡೋಸ್ ಅಪ್ಲಿಕೇಶನ್‌ ನಲ್ಲಿ ಅವರು ತಮ್ಮ ಪ್ರಯೋಗಗಳನ್ನು ಮಾಡುತ್ತಿದ್ದರು. ಇವರ ಸಾಧನೆಯ ಹಾದಿ ಉದಯೋನ್ಮುಖ ಅಪ್ಲಿಕೇಶನ್ ಡೆವಲಪರ್‌ಗಳಿಗೆ ದಾರಿದೀಪವಾಗಿದೆ.

ಇತರ ಆಪ್ ಗಳಿಗಿಂತ ಹೇಗೆ ಭಿನ್ನ ?

Texts.com ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಾದ Instagram, Twitter, Messenger, WhatsApp ಗಳಂತೆ ಕಾರ್ಯ ನಿರ್ವಹಿಸಲಿದ್ದು, ಇದನ್ನೂ ಅದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
Texts.com ಸಂದೇಶ ಕಳುಹಿಸುವುದರಲ್ಲಿ ಕ್ರಾಂತಿ ಎಂದೇ ಹೇಳಬಹದು.

ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಹಲವಾರು ಮೆಸೇಜಿಂಗ್ ಅಪ್ಲಿಕೇಶನ್‌ ಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಂದೇಶ ಕಳುಹಿಸುವ ಆಪ್ ಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಸಂದೇಶಗಳನ್ನು ಒಂದು ಅರ್ಥಗರ್ಭಿತ ಇಂಟರ್ಫೇಸ್‌ಗೆ ಮನಬಂದಂತೆ ಸಂಯೋಜಿಸುತ್ತದೆ. ಆದರೆ ಇದು ಕೇವಲ ಅಪ್ಲಿಕೇಶನ್ ಆಗಿಲ್ಲ. ವಿವೇಚನಾಯುಕ್ತ ಸಂದೇಶ ವೀಕ್ಷಣೆ ಮತ್ತು ಆರಂಭದಿಂದ ಅಂತ್ಯದ ವರೆಗೆ ಗೂಢಲಿಪೀಕರಣದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಗೌಪ್ಯತೆ ಮತ್ತು ಸರಳತೆಯನ್ನು ಖಾತ್ರಿಪಡಿಸುತ್ತದೆ. ಎಲ್ಲ ಸಂದೇಶಗಳು ಒಂದೇ ವೇದಿಕೆಯಡಿ ಲಭ್ಯವಾಗುವಂತೆ ಮಾಡುತ್ತದೆ.

Kishan Bagaria


ಭವಿಷ್ಯ ಹೇಗಿದೆ ?

ಆಟೋಮ್ಯಾಟಿಕ್‌ನ ಬೆಂಬಲದೊಂದಿಗೆ, ಕಿಶನ್ ಅವರ Texts.com ಜಾಗತಿಕ ಸಂವಹನ ಸೇವೆಗಳೊಂದಿಗೆ ಲಭ್ಯವಾಗುತ್ತಿದೆ. ಡಿಜಿಟಲ್ ಸಂವಹನವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿಸಲು ಅವರು ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ Texts.com ಮತ್ತಷ್ಟು ವಿಕಸನಗೊಳ್ಳುವುದು. ಇದರಲ್ಲಿ ಇನ್ನಷ್ಟು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸುವ ಭರವಸೆಯನ್ನು ಅವರು ನೀಡುತ್ತಾರೆ.

ಕಿಶನ್ ಬಗ್ಗೆ ಈಗ ಜಾಗತಿಕವಾಗಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಅವರು ಮುಂದೆ ಏನನ್ನು ಆವಿಷ್ಕರಿಸುತ್ತಾರೆ ಎಂದು ಎದುರು ನೋಡುತ್ತಿರುವುದಾಗಿ ಟೆಕ್ ದೈತ್ಯ ಕಂಪೆನಿಗಳು ಹೇಳಿವೆ. ಅವರ ಕಥೆ ಈಗ ಡಿಜಿಟಲ್ ವಿಕಾಸದ ಸಾಹಸಗಾಥೆಯಲ್ಲಿ ಸೇರಿಕೊಂಡಿದೆ.

Continue Reading

ತಂತ್ರಜ್ಞಾನ

WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

WhatsApp Update: ವಿಶ್ವದ ಅತೀ ಹೆಚ್ಚು ಮಂದಿ ಬಳಸಲ್ಪಡುತ್ತಿರುವ ವಾಟ್ಸ್ ಆಪ್ ನಲ್ಲಿ ಹಲವು ಪ್ರಯೋಗಗಳು ನಡೆಯುತ್ತಲೇ ಇದೆ. ಶೀಘ್ರದಲ್ಲಿ ಹೊಸ ಫೀಚರ್ ಒಂದು ಇದರಲ್ಲಿ ಸೇರಿಕೊಳ್ಳಲಿದ್ದು, ಗ್ರಾಹಕರಿಗೆ ಇದು ಖಂಡಿತಾ ಇಷ್ಟವಾಗುವುದು.

VISTARANEWS.COM


on

By

whatsapp update
Koo

ಪ್ರತಿಯೊಬ್ಬರ ಮೊಬೈಲ್ ನಲ್ಲೂ (mobile) ಈಗ ವಾಟ್ಸ್ ಆಪ್ (whatsapp) ಇದ್ದೇ ಇರುತ್ತೆ. ಬೆಳಗ್ಗೆ ಎದ್ದು ವಾಟ್ಸ್ ಆಪ್ ನೋಡದೇ ಇದ್ದರೆ ದಿನದ ಆರಂಭವೇ ಆಗೋದಿಲ್ಲ ಎನ್ನುವಷ್ಟು ಇದು ಈಗ ಎಲ್ಲರಿಗೂ ಅತ್ಯಾಪ್ತವಾಗಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿದ್ದರೂ ತನ್ನ ಗ್ರಾಹಕರನ್ನು ಹಿಡಿದಿಡಲು, ಹೊಸ ಗ್ರಾಹಕರನ್ನು (new customer) ತನ್ನತ್ತ ಸೆಳೆಯಲು ವಾಟ್ಸ್ ಆಪ್ ನಿರಂತರ ಅಪ್ಡೇಟ್ ಗಳನ್ನು (WhatsApp Update) ನಡೆಸುತ್ತಲೇ ಇದೆ.

ಭಾರತದ (india) ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ವಿಶ್ವದಾದ್ಯಂತ (world) ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಸಂದೇಶ (message), ಕಾಲ್ (call) ಮೂಲಕ ಪರಸ್ಪರ ಸಂಪರ್ಕ ಸಾಧಿಸಲು ನೆರವಾಗುವ ಈ ಆಪ್ ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಮನೋರಂಜನೆಯ ಜೊತೆಗೆ ಹಲವು ವಿಶೇಷತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ.

ಏನು ಹೊಸತು?

ಮೆಟಾ ಮಾಲೀಕತ್ವದ ಕಂಪನಿಯು ಕಳೆದ ಕೆಲವು ತಿಂಗಳುಗಳಲ್ಲಿ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಈಗ ಇದರಲ್ಲಿ ಮತ್ತೊಂದು ವೈಶಿಷ್ಟ್ಯ ಸೇರ್ಪಡೆಯಾಗಿದೆ. ಅದು ಬಳಕೆದಾರರಿಗೆ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Electoral Bonds: ಆರ್‌ಟಿಐ ಅನ್ವಯ ಚುನಾವಣಾ ಬಾಂಡ್‌ ಮಾಹಿತಿ ಕೊಡಲ್ಲ ಎಂದ ಎಸ್‌ಬಿಐ!‌

ಡಬ್ಲ್ಯೂ ಎ ಬೀಟಾ ಮಾಹಿತಿ ಪ್ರಕಾರ ವಾಟ್ಸ್ ಆಪ್ ಆಂಡ್ರಾಯ್ಡ್ ಫೋನ್ ಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್, ಡಾಕ್ಯುಮೆಂಟ್ ಪೂರ್ವವೀಕ್ಷಣೆಗಳನ್ನು ಸೇರಿಸುವ ಕಲ್ಪನೆಯ ಬಗ್ಗೆ ಯೋಚಿಸುತ್ತಿದೆ.

ಅಂದರೆ ಇದರಲ್ಲಿ ಡಾಕ್ಯುಮೆಂಟ್ ಅನ್ನು ಹಂಚಿಕೊಂಡಾಗ ಅದನ್ನು ತೆರೆಯುವ ಮೊದಲು ಅದರ ಸಣ್ಣ ಚಿತ್ರ ಕಾಣುತ್ತದೆ. ಇದು ಚಾಟ್‌ನಲ್ಲಿ ಸರಿಯಾದ ಡಾಕ್ಯುಮೆಂಟ್ ಅನ್ನು ಹುಡುಕಲು ಸುಲಭಗೊಳಿಸುತ್ತದೆ. ಅಂದರೆ ಬಂದ ಮೆಸೇಜ್ ಅನ್ನು ತೆರೆಯದೆಯೇ ಅದು ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯಬಹುದು.


ಯಾರಿಗೆ ಹೆಚ್ಚು ಉಪಯುಕ್ತ ?

ವಿಶೇಷವಾಗಿ ಫೋಟೋ, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಿರುವಾಗ ಇದು ಹೆಚ್ಚು ಉಪಯುಕ್ತ. ಇದರ ಪೂರ್ವವೀಕ್ಷಣೆಗಳು ಡಾಕ್ಯುಮೆಂಟ್ ಅನ್ನು ತೆರೆಯದೆಯೇ ಅದರ ವಿಷಯಗಳನ್ನು ನಿರ್ಣಯಿಸಲು ಅವಕಾಶ ಸಿಗುತ್ತದೆ.

ಪ್ರಸ್ತುತ ವಾಟ್ಸ್ ಆಪ್ ನಲ್ಲಿ ಫೋಟೋ ಅಥವಾ ವಿಡಿಯೋ ವನ್ನು ಡಾಕ್ಯುಮೆಂಟ್‌ನಂತೆ ಹಂಚಿಕೊಂಡರೆ ಸ್ವೀಕರಿಸುವವರು ಅದನ್ನು ಡೌನ್‌ಲೋಡ್ ಮಾಡದ ಹೊರತು ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ವೈಶಿಷ್ಟ್ಯವು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಚಾಟಿಂಗ್ ನಲ್ಲೂ ಹೊಸ ಸೇರ್ಪಡೆ

ಇದರೊಂದಿಗೆ ಸಂಪರ್ಕಗಳನ್ನು ಚಾಟ್ ಮಾಡಲು ಸೂಚಿಸುವ ವೈಶಿಷ್ಟ್ಯದಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬಳಕೆದಾರರು ದೀರ್ಘಕಾಲದಿಂದ ಸಂಭಾಷಣೆ ನಡೆಸದೇ ಇರುವವರನ್ನು ಗುರುತಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಈ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಇದು iOS ಬಳಕೆದಾರರಿಗೂ ಸಿಗಲಿದೆ.


ಡಬ್ಲ್ಯೂ ಎ ಬೀಟಾ ಮಾಹಿತಿ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ ಇದು ಸಂವಹನ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚಾಟ್‌ಗಳ ಪಟ್ಟಿಯ ಕೆಳಭಾಗದಲ್ಲಿ ಅನುಕೂಲಕರವಾಗಿ ಇರಿಸಲಾಗುತ್ತದೆ. ಈ ವೈಶಿಷ್ಟ್ಯವು ಸಂದೇಶ ಕಳುಹಿಸಲು ಅಡ್ಡಿಯಾಗದಂತೆ ಹೊಸ ಸಂಭಾಷಣೆಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ.

ಹೊಸ ಚಾಟ್‌ಗಳನ್ನು ಪ್ರಾರಂಭಿಸಲು ಸಲಹೆಗಳನ್ನು ಸ್ವೀಕರಿಸದಿರಲು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಬಳಕೆದಾರರು ಚಾಟ್‌ಗಳ ಪಟ್ಟಿಯ ಕೆಳಭಾಗದಲ್ಲಿರುವ ಮೀಸಲಾದ ವಿಭಾಗವನ್ನು ಮುಚ್ಚಬಹುದು.

ಡಬ್ಲ್ಯೂ ಎ ಬೀಟಾ ಮಾಹಿತಿ ಅಧಿಕೃತವಾಗಿದ್ದರೂ ಇದನ್ನು ಈವರೆಗೆ ವಾಟ್ಸ್ ಆಪ್ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.

Continue Reading

Latest

Canadian brand: ಭಾರತೀಯ ವ್ಯಕ್ತಿ ಹೆಸರಿಗೆ ಅಪಹಾಸ್ಯ; ಟೀಕೆ ಬಳಿಕ ಕ್ಷಮೆಕೋರಿದ ಕೆನಡಾ ಕಂಪನಿ!

Canadian brand: ಕೆನಡಾದ ಪ್ರಸಿದ್ಧ ಕಂಪನಿಯೊಂದು ಭಾರತೀಯ ಮೂಲದ ವ್ಯಕ್ತಿಯ ಉಪನಾಮದ ಬಗ್ಗೆ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಯನ್ನು ಎದುರಿಸಿದ ಬಳಿಕ ಇದೀಗ ಕ್ಷಮೆಯಾಚಿಸಿ 10 ಸಾವಿರ ಡಾಲರ್ ಪರಿಹಾರ ಘೋಷಿಸಿದೆ.

VISTARANEWS.COM


on

By

Canadian Brand
Koo

ಕೆನಡಾ: ಭಾರತೀಯ ಮೂಲದ (Indian Origin) ವ್ಯಕ್ತಿಯ ಉಪನಾಮದ (Surname) ಬಗ್ಗೆ ಅಪಹಾಸ್ಯ ಮಾಡಿದ ಐಫೋನ್ , ಮ್ಯಾಕ್‌ಬುಕ್ ಸ್ಕಿನ್‌ಗಳಿಗೆ ಹೆಸರುವಾಸಿಯಾಗಿರುವ ಕೆನಡಾದಲ್ಲಿ (Canadian brand) ಪ್ರಧಾನ ಕಛೇರಿ ಹೊಂದಿರುವ ಕಂಪನಿ ದಿಬ್ರ್ಯಾಂಡ್ (Dbrand) ಈಗ ಆ ವ್ಯಕ್ತಿಯ ಕ್ಷಮೆಯಾಚಿಸಿ 10,000 ಡಾಲರ್ ಪರಿಹಾರ ನೀಡುವುದಾಗಿ ಹೇಳಿದೆ.

ನೆದರ್‌ಲ್ಯಾಂಡ್ಸ್‌ ನಲ್ಲಿ( Netherlands) ಕೆಲಸ ಮಾಡುತ್ತಿರುವ ಪುಣೆ (pune) ಮೂಲದ ಭುವನ್ ಚಿತ್ರಾಂಶ್ (Bhuwan Chitransh) ಅವರು ದಿಬ್ರ್ಯಾಂಡ್ ನಿಂದ ಮ್ಯಾಕ್‌ಬುಕ್ ಸ್ಕಿನ್ ಖರೀದಿ ಮಾಡಿದ್ದರು. ಆದರೆ ಮ್ಯಾಕ್ ಬುಕ್ ಸ್ಕಿನ್ ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಅದರ ಮೇಲ್ಮೈ ಬಣ್ಣ ಬದಲಾಗಿದೆ. ಈ ಬಗ್ಗೆ ಆಕ್ಷೇಪಿಸಿ ಅವರು ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದರು.

ಇದನ್ನೂ ಓದಿ: Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

ಉಪನಾಮದ ಬಗ್ಗೆ ಅಪಹಾಸ್ಯ

ಇದಕ್ಕೆ ಪ್ರತಿಯಾಗಿ ಕಂಪನಿ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ ನಿಮ್ಮ ಹೆಸರಿನ ಕೊನೆಯಲ್ಲಿ ರಾಶ್ ಎಂದಿದೆ. ಹೀಗಾಗಿ ಎಚ್ಚರವಾಗಿರಿ ಎಂದು ಭಾರತೀಯ ಟೆಕ್ಕಿಗೆ ದಿಬ್ರ್ಯಾಂಡ್ ಪ್ರತಿಕ್ರಿಯಿಸಿದೆ.


ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮ್ಯಾಕ್ ಬುಕ್ ನ ಮೇಲ್ಮೈ ಅನ್ನು ಜನಾಂಗೀಯವಾಗಿ ನೋಡಲಾಗಿದೆ ಎಂದು ಹಲವಾರು ಮಂದಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅನೇಕ ಬಳಕೆದಾರರು ಕಂಪನಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ಷಮೆಗೆ ಆಗ್ರಹ

ಅನೇಕರು ಕಂಪೆನಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದು, 2,800 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದ ಬಳಿಕ ದಿಬ್ರ್ಯಾಂಡ್ ವಿವರವಾದ ಪ್ರತಿಕ್ರಿಯೆಯೊಂದಿಗೆ ಬುಧವಾರ ಪ್ರತಿಕ್ರಿಯೆ ನೀಡಿದೆ.


ತಮ್ಮ ತಪ್ಪನ್ನು ಒಪ್ಪಿಕೊಂಡ ಕಂಪನಿ, ಅದು ತಕ್ಷಣದ ಪ್ರತಿಕ್ರಿಯೆಯಾಗಿದೆ. ನಾವು ಒಬ್ಬ ವ್ಯಕ್ತಿಯ ಹೆಸರನ್ನು ಅಪಹಾಸ್ಯ ಮಾಡಿದ್ದೆವು. ಇದು ದೊಡ್ಡ ಎಡವಟ್ಟು ಆಗಿತ್ತು. ನಾವು ನೇರವಾಗಿ ಅವರಿಗೆ ಕ್ಷಮೆಯಾಚಿಸಿದ್ದೇವೆ ಮತ್ತು ಅವರಿಗೆ 10,000 ಡಾಲರ್ ಪರಿಹಾರವನ್ನೂ ನೀಡಿದ್ದೇವೆ. ಎಂದು ಕಂಪನಿ ಹೇಳಿದೆ.

ಹಾಸ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ

ಕಳೆದ ಒಂದು ದಶಕದಿಂದ ಸಾಮಾಜಿಕ ಮಾಧ್ಯಮದಲ್ಲಿ ನಾವು ಗ್ರಾಹಕರಿಗೆ ತಮಾಷೆ ಮಾಡುತ್ತಿದ್ದೇವೆ. ಇದನ್ನು ನಾವು ನಿಲ್ಲಿಸುವುದಿಲ್ಲ. ಇದರಲ್ಲಿ ಮುಂದಿನ ಬಾರಿ 10,000 ಡಾಲರ್ ಪಡೆಯುವವರು ನೀವಾಗಬಹುದು ಎಂದು ಕಂಪನಿ ತಿಳಿಸಿದೆ.

ಕಂಪನಿ ಮಾಡಿರುವ ಟ್ವಿಟ್ ಅನ್ನು ಭುವನ್ ಚಿತ್ರಾಂಶ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿದ್ದಾರೆ. ಕೆನಡಾದ ಬ್ರ್ಯಾಂಡ್‌ನಿಂದ ಅವರು ಹೇಗೆ ಟೀಕೆಗೆ ಗುರಿಯಾಗಿದ್ದಾರೆ ಎಂಬುದನ್ನು ಹೇಳಿದ್ದಾರೆ. ಈ ಕಾಮೆಂಟ್ ಭಾರತೀಯ ಗ್ರಾಹಕರ ಕಡೆಗೆ ಬ್ರ್ಯಾಂಡ್‌ನ ಅಮೂಲ್ಯವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

Continue Reading
Advertisement
India Economy
ಪ್ರಮುಖ ಸುದ್ದಿ56 seconds ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ4 mins ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು7 mins ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್21 mins ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್23 mins ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Manjummel Boys ott malayalam to premiere on may
ಮಾಲಿವುಡ್27 mins ago

Manjummel Boys: ಕನ್ನಡದಲ್ಲೂ ಬರಲಿದೆ ʻಮಂಜುಮ್ಮೆಲ್ ಬಾಯ್ಸ್ʼ? ಒಟಿಟಿಗೆ ಯಾವಾಗ?

China Missile
ವಿದೇಶ31 mins ago

China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

Rain news
ಮಳೆ31 mins ago

Rain News : ಶುರುವಾಯ್ತು ಮಳೆ ಅವಘಡ; ಮಲಗಿದ್ದಾಗ ಚಾವಣಿ ಕುಸಿದು ಮಹಿಳೆ ಸಾವು

50 out of syllabus question in CET 2024 exam Re examination or grace marks
ಶಿಕ್ಷಣ49 mins ago

CET 2024 exam: ಸಿಇಟಿಯಲ್ಲಿ 50 ಔಟ್ ಆಫ್ ಸಿಲೆಬಸ್ ಪ್ರಶ್ನೆ; ಮರು ಪರೀಕ್ಷೆ ಅಥವಾ ಗ್ರೇಸ್‌ ಮಾರ್ಕ್ಸ್‌? ಇಂದು ನಿರ್ಧಾರ

MS Dhoni
ಪ್ರಮುಖ ಸುದ್ದಿ54 mins ago

MS Dhoni : ಧೋನಿ ಮುಟ್ಟಿದ್ದೆಲ್ಲ ದಾಖಲೆ, ಲಕ್ನೊ ವಿರುದ್ಧವೂ ಮತ್ತೊಂದು ರೆಕಾರ್ಡ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ2 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ22 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

ಟ್ರೆಂಡಿಂಗ್‌