Site icon Vistara News

Mutual funds : 20%ಕ್ಕೂ ಹೆಚ್ಚು ಆದಾಯ ನೀಡಿದ 14 ಈಕ್ವಿಟಿ ಫಂಡ್‌ಗಳು ಯಾವುವು?

MUTUAL FUND

ಈ ವರ್ಷ 2023ರಲ್ಲಿ ಸುಮಾರು 10 ಸ್ಮಾಲ್‌ ಕ್ಯಾಪ್‌ ಈಕ್ವಿಟಿ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು (small cap mutual fund scheme) 20%ಗೂ ಹೆಚ್ಚು ಆದಾಯವನ್ನು ನೀಡಿವೆ. (trailing returns) ಎರಡು ಮಿಡ್‌ ಕ್ಯಾಪ್‌, ಒಂದು ಮಲ್ಟಿ ಕ್ಯಾಪ್‌ ಮತ್ತು ‌ಒಂದು ವಾಲ್ಯೂ ಫಂಡ್ ಕೂಡ 20%ಕ್ಕೂ ಹೆಚ್ಚು ಆದಾಯ ನೀಡಿವೆ. ಈ ಕುರಿತ (Mutual funds) ಅಮೂಲ್ಯ ವಿವರ ಇಲ್ಲಿದೆ. ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಈ ಮಾಹಿತಿಯ ಪ್ರಯೋಜನವನ್ನು ಮನನ ಮಾಡಿಕೊಳ್ಳಬಹುದು.

ಮಹೀಂದ್ರಾ ಮನುಲೈಫ್‌ ಸ್ಮಾಲ್‌ ಕ್ಯಾಪ್‌ ಫಂಡ್‌ (Mahindra Manulife Small Cap Fund): ಮಹೀಂದ್ರಾ ಮನುಲೈಫ್‌ ಸ್ಮಾಲ್‌ ಕ್ಯಾಪ್‌ ಫಂಡ್‌ ಹೂಡಿಕೆದಾರರಿಗೆ ಗರಿಷ್ಠ, ಅಂದರೆ 24.99 % ಆದಾಯ (highest return) ನೀಡಿದೆ.

ಎಚ್‌ಡಿಎಫ್‌ಸಿ ಸ್ಮಾಲ್‌ ಕ್ಯಾಪ್‌ ಫಂಡ್‌ (HDFC Small Cap Fund): ಎಚ್‌ಡಿಎಫ್‌ಸಿ ಸ್ಮಾಲ್‌ ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 24.46% ಆದಾಯ ಕೊಟ್ಟಿದೆ. ಮಾರುಕಟ್ಟೆಯಲ್ಲಿ ಕಳೆದ 15 ವರ್ಷಗಳಲ್ಲಿ ಸರಾಸರಿ 17.11% ಆದಾಯ ನೀಡಿದೆ.

ನಿಪ್ಪೋನ್‌ ಇಂಡಿಯಾ ಸ್ಮಾಲ್‌ ಕ್ಯಾಪ್‌ ಫಂಡ್‌ (Nippon India Small Cap Fund): ನಿಪ್ಪೋನ್‌ ಇಂಡಿಯಾ ಸ್ಮಾಲ್‌ ಕ್ಯಾಪ್‌ ಸ್ಕೀಮ್‌ ಕಳೆದ ಒಂದು ವರ್ಷದಲ್ಲಿ 23.37% ಆದಾಯ ನೀಡಿದೆ. ಈ ಸ್ಲೀಮ್‌ 31,945 ಕೋಟಿ ರೂ. ಅಸೆಟ್‌ ಅನ್ನು ನಿರ್ವಹಿಸುತ್ತಿದೆ.

ಫ್ರಾಂಕ್ಲಿನ್‌ ಇಂಡಿಯಾ ಸ್ಮಾಲರ್‌ ಕಂಪನೀಸ್‌ ಫಂಡ್‌ (Franklin India Smaller Companies Fund): ಫ್ರಾಂಕ್ಲಿನ್‌ ಇಂಡಿಯಾ ಸ್ಮಾಲರ್‌ ಕಂಪನೀಸ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 22.98% ಆದಾಯವನ್ನು ಹೂಡಿಕೆದಾರರಿಗೆ ನೀಡಿದೆ. ಇದೇ ಅವಧಿಯಲ್ಲಿ ಸ್ಮಾಲ್‌ ಕ್ಯಾಪ್‌ ಕೆಟಗಿರಿ 18.77% ಆದಾಯ ಕೊಟ್ಟಿದೆ.

ಜೆಎಂ ಮಿಡ್‌ ಕ್ಯಾಪ್‌ ಫಂಡ್‌ JM Midcap Fund: ಜೆಎಂ ಮಿಡ್‌ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 22.61% ಆದಾಯವನ್ನು ನೀಡಿದೆ. ಇದು ಹೊಸ ಸ್ಕೀಮ್‌ ಆಗಿದ್ದು ಬಿಡುಗಡೆಯಾದ ಬಳಿಕ ಇಲ್ಲಿಯವರೆಗೆ ಉತ್ತಮ ರಿಟರ್ನ್‌ ಕೊಟ್ಟಿದೆ.

ಡಿಎಸ್‌ಪಿ ಸ್ಮಾಲ್‌ ಕ್ಯಾಪ್‌ ಫಂಡ್‌ DSP Small Cap Fund: ಡಿಎಸ್‌ಪಿ ಸ್ಮಾಲ್‌ ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 21.92% ಆದಾಯವನ್ನು ಕೊಟ್ಟಿದೆ.

ಆದಿತ್ಯ ಬಿರ್ಲಾ ಸನ್‌ ಲೈಫ್‌ ಸ್ಮಾಲ್‌ ಕ್ಯಾಪ್‌ ಫಂಡ್ Aditya Birla Sun Life Small Cap Fund :‌ ಆದಿತ್ಯ ಬಿರ್ಲಾ ಸನ್‌ ಲೈಫ್‌ ಸ್ಮಾಲ್‌ ಕ್ಯಾಪ್‌ ಫಂಡ್‌ 21.63% ಆದಾಯವನ್ನು ಕೊಟ್ಟಿದೆ.

ಎಚ್‌ಎಸ್‌ಬಿಸಿ ಸ್ಮಾಲ್‌ ಕ್ಯಾಪ್‌ ಫಂಡ್‌ (HSBC Cap Fund): ಎಚ್‌ಎಸ್‌ಬಿಸಿ ಸ್ಮಾಲ್‌ ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಿಂದ 21.36% ಆದಾಯ ಕೊಟ್ಟಿದೆ. ಎಂಟು ತಿಂಗಳಿನ ಹಿಂದೆ ಹೂಡಿದ 10,000 ರೂ. ಎಂಟು ತಿಂಗಳಿನಲ್ಲಿ 12,136 ರೂ.ಗೆ ಬೆಳೆದಿದೆ.

ಐಟಿಐ ಸ್ಮಾಲ್‌ ಕ್ಯಾಪ್‌ ಫಂಡ್‌ ITI Small Cap Fund : ಐಟಿಐ ಸ್ಮಾಲ್‌ ಕ್ಯಾಪ್‌ ಫಂಡ್‌ 20.66% ಆದಾಯವನ್ನು ನೀಡುತ್ತದೆ. ಸ್ಮಾಲ್‌ ಕ್ಯಾಪ್‌ ಕೆಟಗರಿ ಸರಾಸರಿ 18.77% ಬಡ್ಡಿ ಆದಾಯ ನೀಡಿದೆ.

ಯೂನಿಯನ್‌ ಸ್ಮಾಲ್‌ ಕ್ಯಾಪ್‌ ಫಂಡ್‌ Union Small Cap Fund: ಯೂನಿಯನ್‌ ಸ್ಮಾಲ್‌ ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 20.45% ಆದಾಯ ನೀಡಿದೆ. ಸ್ಮಾಲ್‌ ಕ್ಯಾಪ್‌ ಕೆಟಗರಿ 18.77% ಆದಾಯ ನೀಡಿದೆ.

ನಿಪ್ಪೋನ್‌ ಇಂಡಿಯಾ ಮಲ್ಟಿ ಕ್ಯಾಪ್‌ ಫಂಡ್‌ Nippon India Multi Cap Fund: ನಿಪ್ಪೋನ್‌ ಇಂಡಿಯಾ ಮಲ್ಟಿ ಕ್ಯಾಪ್‌ ಫಂಡ್‌ ವಾರ್ಷಿಕ ಆಧಾರದಲ್ಲಿ 20.29% ಆದಾಯ ಕೊಟ್ಟಿದೆ. ಇದು ಈ ಪಟ್ಟಿಯಲ್ಲಿನ ಏಕೈಕ ಮಲ್ಟಿ ಕ್ಯಾಪ್‌ ಸ್ಕೀಮ್‌ ಆಗಿಎ. ಈ ಸ್ಕೀಮ್‌ 17,440 ಕೋಟಿ ರೂ. ಅಸೆಟ್‌ ಅನ್ನು ಮ್ಯಾನೇಜ್‌ ಮಾಡುತ್ತಿದೆ.

ಇದನ್ನೂ ಓದಿ: Mutual Fund SIP : ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿಯೊಂದು ಸಿಪ್‌ ಕೂಡ ಅಷ್ಟೇ ಮುಖ್ಯ

ಸುಂದರಂ ಸ್ಮಾಲ್‌ ಕ್ಯಾಪ್‌ ಫಂಡ್‌ Sundaram Small Cap Fund: ಸುಂದರಂ ಸ್ಮಾಲ್‌ ಕ್ಯಾಪ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 20.17% ಆದಾಯ ನೀಡಿದೆ. ಸ್ಕೀಮ್‌ ಅನ್ನು ಈ ಹಿಂದೆ ಸುಂದರಮ್‌ ಎಸ್.‌ ಎಂ. ಐ. ಎಲ್.‌ ಇ ಫಂಡ್‌ ಎಂದು ಕರೆಯಲಾಗುತ್ತಿತ್ತು. ಅದನ್ನು 2018ರಲ್ಲಿ ಮರು ನಾಮಕರಣಗೊಳಿಸಲಾಗಿತ್ತು.

ಜೆಎಂ ವಾಲ್ಯೂ ಫಂಡ್‌ JM Value Fund: ಜೆಎಂ ವಾಲ್ಯೂ ಫಂಡ್‌ ವಾರ್ಷಿಕ ಆಧಾರದಲ್ಲಿ 20.17% ಆದಾಯ ನೀಡುತ್ತದೆ. ಇದು ಪಟ್ಟಿಯಲ್ಲಿರುವ ಏಕೈಕ ವಾಲ್ಯೂ ಫಂಡ್.‌

ಎಚ್‌ಡಿಎಫ್‌ಸಿ ಮಿಡ್‌-ಕ್ಯಾಪ್‌ ಅಪಾರ್ಚುನಿಟೀಸ್‌ ಫಂಡ್‌ HDFC Mid -Cap Opportunities Fund: ಎಚ್‌ಡಿಎಫ್‌ಸಿ ಮಿಡ್-ಕ್ಯಾಪ್‌ ಅಪಾರ್ಚುನಿಟೀಸ್‌ ಫಂಡ್‌ ಕಳೆದ ಒಂದು ವರ್ಷದಲ್ಲಿ 20.08% ಆದಾಯ ಕೊಟ್ಟಿದೆ. ಈ ಸ್ಕೀಮ್‌ 42,731 ಕೋಟಿ ರೂ. ಅಸೆಟ್‌ ಅನ್ನು ನಿರ್ವಹಿಸುತ್ತಿದೆ.

Exit mobile version