Site icon Vistara News

Wholesale Inflation | 21 ತಿಂಗಳಿನ ಬಳಿಕ, ನವೆಂಬರ್‌ನಲ್ಲಿ ಕೊನೆಗೂ ಸಗಟು ಹಣದುಬ್ಬರ 5.85%ಕ್ಕೆ ಇಳಿಕೆ

Retail inflation

ನವ ದೆಹಲಿ: ಭಾರತದ ಸಗಟು ಹಣದುಬ್ಬರ (wholesale Inflation) ನವೆಂಬರ್‌ನಲ್ಲಿ 21 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿತಕ್ಕೀಡಾಗಿದೆ. ವಾರ್ಷಿಕ ಆಧಾರದಲ್ಲಿ ಅಕ್ಟೋಬರ್‌ನಲ್ಲಿ 8.39%ರಷ್ಟಿದ್ದ ಸಗಟು ಹಣದುಬ್ಬರ, ನವೆಂಬರ್‌ನಲ್ಲಿ 5.85%ಕ್ಕೆ ಇಳಿಕೆಯಾಗಿತ್ತು ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ಬುಧವಾರ ತಿಳಿಸಿವೆ.

ಆಹಾರ ಪದಾರ್ಥಗಳು, ಸಾಮಾನ್ಯ ಲೋಹಗಳು, ಜವಳಿ, ರಾಸಾಯನಿಕ ಉತ್ಪನ್ನಗಳ ದರಗಳು ನವೆಂಬರ್‌ನಲ್ಲಿ ಇಳಿಕೆಯಾಗಿತ್ತು. ಇದು ಸಗಟು ಹಣದುಬ್ಬರ ತಗ್ಗಲು ಪ್ರಮುಖ ಕಾರಣವಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಹೀಗಿದ್ದರೂ, ಆಹಾರ ವಸ್ತುಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ವಿದ್ಯುತ್‌ ವಲಯದ ಹಣದುಬ್ಬರ ಏರುಗತಿಯಲ್ಲಿತ್ತು. ಚಿಲ್ಲರೆ ಹಣದುಬ್ಬರ ಕಳೆದ ನವೆಂಬರ್‌ನಲ್ಲಿ ಕಳೆದ 11 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 5.8%ಕ್ಕೆ ತಗ್ಗಿತ್ತು. ಆರ್‌ಬಿಐ ಪ್ರಕಾರ 2-6% ಮಟ್ಟದಲ್ಲಿ ಹಣದುಬ್ಬರ ಇರಬಹುದು. ಅದನ್ನು ಮೀರಿದರೆ ಅಪಾಯದ ಮಟ್ಟದಲ್ಲಿದೆ ಎಂದರ್ಥ.

ಹಣದುಬ್ಬರವನ್ನು ಇಳಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರವನ್ನು ಹಂತಗಳಲ್ಲಿ ಏರಿಸಿತ್ತು.

Exit mobile version