Wholesale Inflation | 21 ತಿಂಗಳಿನ ಬಳಿಕ, ನವೆಂಬರ್‌ನಲ್ಲಿ ಕೊನೆಗೂ ಸಗಟು ಹಣದುಬ್ಬರ 5.85%ಕ್ಕೆ ಇಳಿಕೆ - Vistara News

ಪ್ರಮುಖ ಸುದ್ದಿ

Wholesale Inflation | 21 ತಿಂಗಳಿನ ಬಳಿಕ, ನವೆಂಬರ್‌ನಲ್ಲಿ ಕೊನೆಗೂ ಸಗಟು ಹಣದುಬ್ಬರ 5.85%ಕ್ಕೆ ಇಳಿಕೆ

ಕೊನೆಗೂ ಹಣದುಬ್ಬರ (Wholesale Inflation) ನವೆಂಬರ್‌ನಲ್ಲಿ ಇಳಿಕೆಯತ್ತ ಮುಖ ಮಾಡಿದೆ. ಅಪಾಯದ ಮಟ್ಟದಲ್ಲಿದ್ದ ಬೆಲೆ ಏರಿಕೆ ಉಪಶಮನವಾಗುವುದು ದೈನಂದಿನ ಜನ ಜೀವನ ನಿರ್ವಹಣೆಗೆ ಅವಶ್ಯಕವಾಗಿತ್ತು ಎನ್ನುತ್ತಾರೆ ಹಣಕಾಸು ತಜ್ಞರು.

VISTARANEWS.COM


on

Retail inflation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದ ಸಗಟು ಹಣದುಬ್ಬರ (wholesale Inflation) ನವೆಂಬರ್‌ನಲ್ಲಿ 21 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿತಕ್ಕೀಡಾಗಿದೆ. ವಾರ್ಷಿಕ ಆಧಾರದಲ್ಲಿ ಅಕ್ಟೋಬರ್‌ನಲ್ಲಿ 8.39%ರಷ್ಟಿದ್ದ ಸಗಟು ಹಣದುಬ್ಬರ, ನವೆಂಬರ್‌ನಲ್ಲಿ 5.85%ಕ್ಕೆ ಇಳಿಕೆಯಾಗಿತ್ತು ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ಬುಧವಾರ ತಿಳಿಸಿವೆ.

ಆಹಾರ ಪದಾರ್ಥಗಳು, ಸಾಮಾನ್ಯ ಲೋಹಗಳು, ಜವಳಿ, ರಾಸಾಯನಿಕ ಉತ್ಪನ್ನಗಳ ದರಗಳು ನವೆಂಬರ್‌ನಲ್ಲಿ ಇಳಿಕೆಯಾಗಿತ್ತು. ಇದು ಸಗಟು ಹಣದುಬ್ಬರ ತಗ್ಗಲು ಪ್ರಮುಖ ಕಾರಣವಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಹೀಗಿದ್ದರೂ, ಆಹಾರ ವಸ್ತುಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ವಿದ್ಯುತ್‌ ವಲಯದ ಹಣದುಬ್ಬರ ಏರುಗತಿಯಲ್ಲಿತ್ತು. ಚಿಲ್ಲರೆ ಹಣದುಬ್ಬರ ಕಳೆದ ನವೆಂಬರ್‌ನಲ್ಲಿ ಕಳೆದ 11 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 5.8%ಕ್ಕೆ ತಗ್ಗಿತ್ತು. ಆರ್‌ಬಿಐ ಪ್ರಕಾರ 2-6% ಮಟ್ಟದಲ್ಲಿ ಹಣದುಬ್ಬರ ಇರಬಹುದು. ಅದನ್ನು ಮೀರಿದರೆ ಅಪಾಯದ ಮಟ್ಟದಲ್ಲಿದೆ ಎಂದರ್ಥ.

ಹಣದುಬ್ಬರವನ್ನು ಇಳಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರವನ್ನು ಹಂತಗಳಲ್ಲಿ ಏರಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Yuzvendra Chahal: ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

VISTARANEWS.COM


on

IPL 2024
Koo

ಬೆಂಗಳೂರು: ಮೇ 22 ರಂದು ಆರ್​ಸಿಬಿ ವಿರುದ್ಧ ನಡೆದ ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಯಜ್ವೇಂದ್ರ ಚಹಲ್ (Yuzvendra Chahal) ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಚಹಲ್ ರಾಯಲ್ಸ್ ಪರ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ ಚಹಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದು ಇದೇ ಮೊದಲು.

ಪವರ್ಪ್ಲೇ ಮುಗಿದ ನಂತರ ಚಹಲ್ ಬೌಲಿಂಗ್ ಮಾಡಲು ಬಂದರು. ಕೊಹ್ಲಿ ಆಕ್ರಮಣಕಾರಿಯಾಗಿ 24 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಅಂತೆಯೇ ಆರ್​ಸಿಬಿ ಸ್ಟಾರ್ ಚಹಲ್ ಅವರನ್ನು ಎದುರಿಸಲು ಮುಂದಾಗಿ ಸ್ಲಾಗ್ ಸ್ವೀಪ್​ ಮಾಡಿದರು. ಈ ಪ್ರಯತ್ನ ಅವರಿಗೆ ಹಾಲಿ ಋತುವಿನಲ್ಲಿ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿತು. ಆದಾಗ್ಯೂ, ಡೊನೊವನ್ ಫೆರೇರಾ ಅವರನ್ನು ಬೌಂಡರಿ ಕ್ಯಾಚ್ ಹಿಡಿದರು. ಇದರೊಂದಿಗೆ ಐಪಿಎಲ್​​ನಲ್ಲಿ ರಾಜಸ್ಥಾನ್​ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಿದ್ಧಾರ್ಥ್ ತ್ರಿವೇದಿ ಅವರನ್ನು ಚಹಲ್ ಹಿಂದಿಕ್ಕಿದರು.

ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

ಐಪಿಎಲ್​ನಲ್ಲಿ ಆರ್​ಆರ್​ ಪರ ಅತಿ ಹೆಚ್ಚು ವಿಕೆಟ್ ಪಡೆದವರು


  • 66 – ಯಜುವೇಂದ್ರ ಚಹಲ್
  • 65 – ಸಿದ್ಧಾರ್ಥ್ ತ್ರಿವೇದಿ
  • 61 – ಶೇನ್ ವ್ಯಾಟ್ಸನ್
  • 57 – ಶೇನ್ ವಾರ್ನ್
  • 47 – ಜೇಮ್ಸ್ ಫಾಲ್ಕನರ್

ಕಾಕತಾಳೀಯವೆಂಬಂತೆ, ಚಹಲ್ ಅವರು ಆರ್​ಸಿಬಿ ಪರ ಆಡಿದ ಸಮಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದರು. 2014ರಿಂದ 2021ರವರೆಗೆ ಬೆಂಗಳೂರು ಪರ ಆಡಿರುವ ಚಹಲ್ 113 ಪಂದ್ಯಗಳಲ್ಲಿ 139 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಚಹಲ್ ಪ್ರದರ್ಶನ ಹೇಗಿದೆ?

ಚಹಲ್ ಈ ಋತುವಿನಲ್ಲಿ ಆರ್​ಅರ್​​ ಪರ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಸ್ಪಿನ್ನರ್ ಪ್ರಸ್ತುತ ಈ ಋತುವಿನಲ್ಲಿ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ 14 ಪಂದ್ಯಗಳಿಂದ 26.88ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚಾಹಲ್ ಐಪಿಎಲ್​​ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ನಲ್ಲಿ ಅವರ ಪ್ರದರ್ಶನವು ಅವರನ್ನು 2024 ರ ಟಿ 20 ವಿಶ್ವಕಪ್ಗಾಗಿ ಭಾರತೀಯ ತಂಡಕ್ಕೆ ಮರಳಿ ಪಡೆಯುತ್ತದೆ.

Continue Reading

ದೇಶ

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Pune porsche car crash : ಪರಾಧದ ಗಂಭೀರತೆಯನ್ನು ಆಧರಿಸಿ ವಿಚಾರಣೆ ಸಮಯದಲ್ಲಿ ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ಪರಿಗಣಿಸಬೇಕೆಂದು ಪುಣೆ ಪೊಲೀಸರು ಒತ್ತಾಯಿಸಿದ್ದರು. ಅದರ ಹಿನ್ನೆಲೆಯಲ್ಲಿ ಬೇಲ್ ರದ್ದು ಮಾಡಲಾಗಿದೆ. ಹೆಚ್ಚಿನ ತನಿಖೆಯ ಪ್ರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯ ಮಂಡಳಿ ಹೇಳಿದೆ.

VISTARANEWS.COM


on

Pune porsche car crash
Koo

ಬೆಂಗಳೂರು : ಪುಣೆಯ ಬಾರ್​ ಒಂದರಲ್ಲಿ ಪಾರ್ಟಿ ಮಾಡಿ ಮದ್ಯ ಸೇವಿಸಿದ ನಂತರ ತನ್ನ ಅಪ್ಪನ ಐಷಾರಾಮಿ ಪೋರ್ಷೆ ಕಾರನ್ನು (Pune porsche car crash) ಚಲಾಯಿಸಿಕೊಂಡು ಹೋಗಿ ಅಫಘಾತ ಎಸಗಿದ್ದ 17 ಬಾಲಕನಿಗೆ ನೀಡಲಾಗಿದ್ದ ಜಾಮೀನನ್ನು ಬಾಲ ನ್ಯಾಯ ಮಂಡಳಿ ವಜಾ ಮಾಡಿದೆ. ಬಾಲಕ ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಮದ್ಯದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದವನಿಗೆ ಬೇಲ್​ ಕೊಟ್ಟ ಬಗ್ಗೆಯೂ ಚರ್ಚೆಗಳು ನಡೆದಿದ್ದವು.

ಅಪಘಾತ ಎಸಗಿ ಇಬ್ಬರನ್ನು ಬಲಿ ಪಡೆದ ಅಪ್ರಾಪ್ತ ವಯಸ್ಕನನ್ನು ಮಕ್ಕಳ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ ಎಂದು ಮಂಡಳಿ ಹೇಳಿದೆ. ಅಪರಾಧದ ಗಂಭೀರತೆಯನ್ನು ಆಧರಿಸಿ ವಿಚಾರಣೆ ಸಮಯದಲ್ಲಿ ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ಪರಿಗಣಿಸಬೇಕೆಂದು ಪುಣೆ ಪೊಲೀಸರು ಒತ್ತಾಯಿಸಿದ್ದರು. ಅದರ ಹಿನ್ನೆಲೆಯಲ್ಲಿ ಬೇಲ್ ರದ್ದು ಮಾಡಲಾಗಿದೆ. ಹೆಚ್ಚಿನ ತನಿಖೆಯ ಪ್ರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯ ಮಂಡಳಿ ಹೇಳಿದೆ.

ಪುಣೆಯಲ್ಲಿ ಪೋರ್ಷೆ ಕಾರಿನಲ್ಲಿ ಅತಿ ವೇಗವಾಗಿ ಸಾಗಿದ ಬಾಲಕ ಇಬ್ಬರು ಐಟಿ ವೃತ್ತಿಪರರಿಬ್ಬರ ಸಾವಿಗೆ ಕಾರಣನಾಗಿದ್ದ. 17 ವರ್ಷದ ಬಾಲಕನಿಗೆ 25 ವರ್ಷ ತುಂಬುವವರೆಗೆ ಚಾಲನಾ ಪರವಾನಗಿ ನೀಡುವುದನ್ನು ನಿಷೇಧಿಸಲಾಗುವುದುಎಂದು ಮಹಾರಾಷ್ಟ್ರ ಸಾರಿಗೆ ಆಯುಕ್ತ ವಿವೇಕ್ ಭೀಮನ್ವರ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ:

ಕಾರಿನ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್​ ಅಗರ್ವಾಲ್​ 1,758 ರೂ.ಗಳ ಶುಲ್ಕವನ್ನು ಪಾವತಿಸದ ಕಾರಣ ಪೋರ್ಷೆ ಟೇಕಾನ್ ನ ಶಾಶ್ವತ ನೋಂದಣಿ ಆಗಿರಲಿಲ್ಲ. ಆ ಪ್ರಕ್ರಿಯೆ ಮಾರ್ಚ್ ನಿಂದ ಬಾಕಿ ಉಳಿದಿದೆ ಎಂದು ರಾಜ್ಯ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಸೆಕ್ಷನ್ 158 ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಾದ ನಂತರ ಬಾಲಕನನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಶಾಲ್ ಅಗರ್ವಾಲ್ ಅವರನ್ನು ಬುಧವಾರ ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಮೇ 24 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಚಾಣಾಕ್ಷತನ ಮೆರೆದ ಪೊಲೀಸರು
ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Kalki 2898 AD: ನಟ ಪ್ರಭಾಸ್‌ ಅಭಿನಯದ ‘ಕಲ್ಕಿ 2898 AD’ ಚಿತ್ರದ ಐದನೇ ಸೂಪರ್‌ ಸ್ಟಾರ್ ಬುಜ್ಜಿಯನ್ನು ಅನಾವರಣ ಮಾಡಲು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಬುಧವಾರ ರಾತ್ರಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದಾರೆ.

VISTARANEWS.COM


on

Kalki 2898 AD
Koo

ಹೈದರಾಬಾದ್: ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ‘ಕಲ್ಕಿ 2898 AD’ (Kalki 2898 AD) ಚಿತ್ರವು ಜೂನ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ಹೀಗಾಗಿ ಸಿನಿಮಾದಲ್ಲಿನ ಪ್ರಮುಖ ನಟರ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ ಇಂದು ರಾತ್ರಿ (ಮೇ 22) ಚಿತ್ರದ ಐದನೇ ಸೂಪರ್‌ ಸ್ಟಾರ್ ಬುಜ್ಜಿಯನ್ನು ಅನಾವರಣಗೊಳಿಸುವುದಾಗಿ ಹೇಳಿತ್ತು, ಇದಕ್ಕಾಗಿ ನಗರದ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಲ್ಕಿ ಚಿತ್ರದಲ್ಲಿನ ಐದನೇ ಸೂಪರ್‌ ಸ್ಟಾರ್ ಬುಜ್ಜಿಯನ್ನು ರಿವೀಲ್‌ ಮಾಡಲು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಜೆ 7.30ಕ್ಕೆ ಕಾರ್ಯಕ್ರಮ ಆರಂಭವಾಗಿದ್ದು, ಭೈರವನ (ಪ್ರಭಾಸ್)‌ ಜತೆ ಬುಜ್ಜಿಯನ್ನು ನೋಡಲು ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ʼಬುಜ್ಜಿʼ ಎಂಬ ಸೂಪರ್‌ ಕಾರನ್ನು ಅನಾವರಣ ಮಾಡಲಾಗುತ್ತದೆ.

ಚಿತ್ರದಲ್ಲಿ ಐದನೇ ಸೂಪರ್‌ ಸ್ಟಾರ್‌ ಯಾರು? ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆತನ ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ ಎಂಬುವುದಾಗಿ ಮಾತ್ರ ಚಿತ್ರತಂಡ ಮಾಹಿತಿ ನೀಡಿತ್ತು. ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘From Skratch: Building A Superstar’ ಹೆಸರಿನ ಈ ವಿಡಿಯೊದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿತ್ತು. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿತ್ತು. ಇದೀಗ ಬುಜ್ಜಿಯ ಪಾತ್ರ ಅನಾವರಣ ಮಾಡಲು ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇದನ್ನೂ ಓದಿ | Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

Continue Reading

ಬೆಂಗಳೂರು

CM City Rounds: ಫ್ಲೈ ಓವರ್‌ ನಿಧಾನಗತಿಗೆ ಸಿಎಂ ಕೆಂಡಾಮಂಡಲ; ಟೆಂಡರ್‌ ರದ್ದು ಮಾಡಿ ಬೇರೆಯವರಿಗೆ ಗುತ್ತಿಗೆ ಕೊಡಲು ಸೂಚನೆ

CM City Rounds: ಶಾಂತಿನಗರ ವಿಧಾನಸಭಾ ಕ್ಷೇತ್ರದ ಈಜಿಪುರ ಫ್ಲೈ ಓವರ್‌ ಕಾಮಗಾರಿಯನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡರು. ಕಳೆದ ಆರು ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ ವಿಳಂಬಕ್ಕೆ ಏನು ಕಾರಣ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

VISTARANEWS.COM


on

CM City Rounds CM Siddaramaiah lashes out at flyover slowdown and Notice to cancel the tender
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಪ್ರತಿ ವರ್ಷ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಬುಧವಾರ (ಮೇ 22) ಬಿಬಿಎಂಪಿ, ಬಿಡಿಎ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ( BBMP, BDA and BWSSB) ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್‌ (CM City Rounds) ಮಾಡಿದ್ದು, ಮಳೆ ಹಾನಿ ಪ್ರದೇಶಗಳನ್ನು ಪರಿವೀಕ್ಷಿಸಿದರು. ಈ ವೇಳೆ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈಜಿಪುರ ಫ್ಲೈ ಓವರ್‌ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸಿಎಂ ಸಿದ್ದರಾಮಯ್ಯ, ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಈಜಿಪುರ ಫ್ಲೈ ಓವರ್‌ ಕಾಮಗಾರಿಯನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡರು. ಕಳೆದ ಆರು ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ ವಿಳಂಬಕ್ಕೆ ಏನು ಕಾರಣ ಎಂದು ಪ್ರಶ್ನೆ ಮಾಡಿದರು.

CM City Rounds CM Siddaramaiah lashes out at flyover slowdown and Notice to cancel the tender

ಆಗದಿದ್ದರೆ ಬೇರೆಯವರಿಗೆ ಗುತ್ತಿಗೆ ನೀಡಿ

ಆಗ ವಿವರಣೆ ನೀಡಿದ ಅಧಿಕಾರಿಗಳು, ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನಾಂಕ 20-11-2023 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್‌ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4ರಿಂದ 6 ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲಾ, ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡವೇ? ನಿಮ್ಮ ಕೈಯಲ್ಲಿ ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಎಚ್ಚರಿಕೆ ನೀಡಿದರು.

ಸಿಲ್ಕ್‌ ಬೋರ್ಡ್‌ ಸಮಸ್ಯೆ ಪರಿಹಾರಕ್ಕೆ ಪರಿಶೀಲನೆ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯ ರಸ್ತೆ ಬಳಿಯ ಸಿಲ್ಕ್‌ ಬೋರ್ಡ್‌ ಬಳಿ ಬಂದ ಸಿಎಂ ಸಿದ್ದರಾಮಯ್ಯ ಅವರು ಸ್ಥಳ ಪರಿಶೀಲನೆ ನಡೆಸಿದರು. ಮೆಟ್ರೋ ಕಾಮಗಾರಿಯಿಂದಾಗಿ ಚರಂಡಿ ವಿಸ್ತೀರ್ಣ ಕಡಿಮೆಯಾಗಿದೆ. ಹೀಗಾಗಿ ಮಳೆ ಹೆಚ್ಚಾಗಿ ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದನ್ನು ಗಮನಕ್ಕೆ ತರಲಾಯಿತು.

ಕ್ರಿಯಾ ಯೋಜನೆ ರೂಪಿಸಿ

ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಈ ವಿಷಯವನ್ನು ಮಂಡಿಸಲು ಸೂಚಿಸಿದರು. ಜತೆಗೆ ಈ ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: CM City Rounds: ವಿಜಯನಗರ ರಾಜಕಾಲುವೆ; ಈ ವರ್ಷದೊಳಗೆ ಪರಿಹರಿಸದಿದ್ದರೆ ಮುಖ್ಯ ಎಂಜಿನಿಯರ್‌ ಸಸ್ಪೆಂಡ್‌: ಸಿಎಂ ವಾರ್ನಿಂಗ್

ಮಡಿವಾಳ ಕೆರೆ ರಾಜಕಾಲುವೆ ನೀರನ್ನು ಪಂಪ್‌ ಮಾಡಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೋಡಿ ಚಿಕ್ಕನಹಳ್ಳಿ ಬಳಿ ಇರುವ ರಾಜಕಾಲುವೆಯಿಂದ ನೀರು ಹೊರಗೆ ಹರಿದು, ಮನೆಗಳಿಗೆ ನುಗ್ಗುವ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಯಿತು. ಆಗ ಮಾತನಾಡಿದ ಸಿಎಂ, ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್‌ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್‌ ಮಾಡಿ ಮಡಿವಾಳ ಕೆರೆಗೆ ಹರಿಸಲು ಸೂಚನೆ ನೀಡಿದರು. 4.3 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಲು ಸೂಚಿಸಿದರು.

Continue Reading
Advertisement
young womans lover was stabbed in the neck by an ex lover
ಉತ್ತರ ಕನ್ನಡ12 mins ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ21 mins ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ51 mins ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ55 mins ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Congress leader actress Vidya murder case Accused husband arrested
ಕರ್ನಾಟಕ1 hour ago

Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

CM City Rounds CM Siddaramaiah lashes out at flyover slowdown and Notice to cancel the tender
ಬೆಂಗಳೂರು1 hour ago

CM City Rounds: ಫ್ಲೈ ಓವರ್‌ ನಿಧಾನಗತಿಗೆ ಸಿಎಂ ಕೆಂಡಾಮಂಡಲ; ಟೆಂಡರ್‌ ರದ್ದು ಮಾಡಿ ಬೇರೆಯವರಿಗೆ ಗುತ್ತಿಗೆ ಕೊಡಲು ಸೂಚನೆ

lok sabha election
ದೇಶ1 hour ago

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Prajwal Revanna Case SIT summons Bhavani Revanna car driver in KR Nagar victim kidnapped case
ಕರ್ನಾಟಕ2 hours ago

Prajwal Revanna Case: ಕೆ ಆರ್‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌; ಭವಾನಿ ರೇವಣ್ಣ ಕಾರು ಚಾಲಕನಿಗೆ‌ SIT ಸಮನ್ಸ್

Rain News
ಕರ್ನಾಟಕ2 hours ago

Rain News: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಹಾರಿದ 10ಕ್ಕೂ ಹೆಚ್ಚು ಮನೆಗಳ ಮೇಲಿನ ಶೀಟ್, ಇಬ್ಬರಿಗೆ ಗಾಯ

Virat kohli
ಕ್ರೀಡೆ2 hours ago

Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌