ನವ ದೆಹಲಿ: ಭಾರತದ ಸಗಟು ಹಣದುಬ್ಬರ (Wholesale price index based inflation) ಕಳೆದ ಅಕ್ಟೋಬರ್‌ನಲ್ಲಿ 8.39%ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಕಳೆದ 18 ತಿಂಗಳಿನಿಂದ ಸತತವಾಗಿ ಎರಡಂಕಿಯಲ್ಲಿದ್ದ ಹಣದುಬ್ಬರ ಕೊನೆಗೂ ಒಂದಂಕಿಗೆ ಇಳಿದಂತಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ 10.7% ಮತ್ತು 2021ರ ಅಕ್ಟೋಬರ್‌ನಲ್ಲಿ 13.83% ಹಣದುಬ್ಬರ ಇತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ತೈಲ ದರಗಳಲ್ಲಿ ಇಳಿಕೆ, ಲೋಹ, ಕಚ್ಚಾ ಸಾಮಗ್ರಿಗಳ ದರ ಇಳಿಕೆಯ ಪರಿಣಾಮ ಸಗಟು ಹಣದುಬ್ಬರ ಇಳಿಕೆಯ ಹಂತದಲ್ಲಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಹೀಗಿದ್ದರೂ, 2022 ತರಕಾರಿಗಳ ಹಣದುಬ್ಬರದಲ್ಲಿ 17.61% ಹೆಚ್ಚಳ ಆಗಿತ್ತು. ಆದರೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ದರದ ಹಣದುಬ್ಬರ 86.36%ರಿಂದ 43%ಕ್ಕೆ ಇಳಿಕೆಯಾಗಿತ್ತು.