Health Insurance Benefits : ವಿಮೆಯ ಆಯ್ಕೆಯ ವಿಚಾರ ಯಾವಾಗಲೂ ಸಮಸ್ಯಾತ್ಮಕವಾಗಿರುತ್ತದೆ. ಸರಿಯಾದ ಆರೋಗ್ಯ ವಿಮೆಯನ್ನು ಹೇಗೆ ಆಯ್ಕೆ ಮಾಡುವುದು ಎಂಬುದು ಒಂದೆಡೆಯಾದರೆ, ಅದಕ್ಕೆ ಸಂಬಂಧಿಸಿದ ಪೇಪರ್‌ವರ್ಕ್‌ಗಳು ಮತ್ತೊಂದು ಕಡೆ ಇರುತ್ತದೆ. ಮುಖ್ಯವಾಗಿ ಉತ್ತಮ ಆರೋಗ್ಯ ವಿಮೆ ಪ್ಲಾನ್ ಅನ್ನು ಆಯ್ಕೆ ಮಾಡುವುದಕ್ಕೆ ಆಳವಾದ ಸಂಶೋಧನೆಯ ಅಗತ್ಯ ಇರುತ್ತದೆ. ಕಾರ್ಪೊರೇಟ್ (ಎಂಪ್ಲಾಯರ್) ಆರೋಗ್ಯ ವಿಮೆ ಉದ್ಯೋಗಿಗಳಿಗೆ ಸಬ್ಸಿಡಿ ದರದಲ್ಲಿ ಲಭಿಸುವುದರಿಂದ ಉದ್ಯೋಗಿಗಳ ಒತ್ತಡವನ್ನು ನಿವಾರಿಸುತ್ತದೆ.
ಉದ್ಯೋಗಿಗಳ ಆರೋಗ್ಯ ವಿಮೆ (Employee health insurance) ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ತುರ್ತುಸಂದರ್ಭಗಳಲ್ಲಿ (medical emergency) ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸಹಕಾರಿಯಾಗುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಪೊರೇಟ್ ಆರೋಗ್ಯ ವಿಮೆ ಪಾಲಿಸಿಯ ಅಗತ್ಯ ಬೆಳಕಿಗೆ ಬಂದಿತು. ಗೃಹ ಸಚಿವಾಲಯವು ಎಲ್ಲ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳು, ಕಚೇರಿಗಳಲ್ಲಿ ಆಗ ಕಾರ್ಪೊರೇಟ್ ಆರೋಗ್ಯ ವಿಮೆ ಮಹತ್ವ ಪಡೆದುಕೊಂಡಿತು.
ಉದ್ಯೋಗಿಗಳ ಆರೋಗ್ಯ ವಿಮೆಯ ಲಾಭವೇನು? ಇದು ಏಕೆ ನಿರ್ಣಾಯಕ?
ಕವರೇಜ್: ಉದ್ಯೋಗಿಗಳ ಆರೋಗ್ಯ ವಿಮೆಯು ಉದ್ಯೋಗಿಗಳ ವೈದ್ಯಕೀಯ ವೆಚ್ಚ, ಅವರ ಸಂಗಾತಿ, ಮತ್ತವರ ಮಕ್ಕಳು, ಕೆಲವು ಪ್ರಕರಣಗಳಲ್ಲಿ ಪೋಷಕರ ವೈದ್ಯಕೀಯ ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ಪಾಲಿಸಿಯ ಕವರೇಜ್ ಅನ್ನು ಅರಿತುಕೊಳ್ಳುವುದು ಮುಖ್ಯ. ಪ್ರತಿಯೊಂದು ಕಂಪನಿಯಲ್ಲೂ ಆರೋಗ್ಯ ವಿಮೆ ಪಾಲಿಸಿಯ ವಿಧಗಳು ಭಿನ್ನವಾಗಿರುತ್ತದೆ. ಸಬ್-ಲಿಮಿಟ್‌ಗಳು ಬೇರೆಯಾಗಿರುತ್ತದೆ. ಆದ್ದರಿಂದ ಅವುಗಳ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯ. ಕೆಲ ಕಂಪನಿಗಳು ಬೇಸಿಕ್ ಕವರೇಜ್ ಆಗಿ 3 ಲಕ್ಷ ರೂ.ಗಳಿಂದ 5 ಲಕ್ಷ ರೂ. ತನಕ ನಿಗದಿಪಡಿಸಿರುತ್ತವೆ. ಆಗ ಹೆಚ್ಚುವರಿ ಕವರೇಜ್ ಪಡೆದುಕೊಳ್ಳಬೇಕಾಗಿ ಬರಬಹುದು.
ಪ್ರೀಮಿಯಂ: ಕಾರ್ಪೊರೇಟ್ ಹೆಲ್ತ್ ಪಾಲಿಸಿಯಲ್ಲಿ ವಿಮೆಯ ಪ್ರೀಮಿಯಂ ಅನ್ನು ಕಂಪನಿಗಳು ಭರಿಸುತ್ತವೆ. (employer) ಉದ್ಯೋಗಿಗಳು ಟಾಪ್ – ಅಪ್ ವೆಚ್ಚವನ್ನು ಭರಿಸಿಕೊಂಡು ಹೆಚ್ಚುವರಿ ಕವರೇಜ್ ಅನ್ನು ಪಡೆಯಬಹುದು.
ಮೊದಲೇ ಇರುವಂಥ ಕಾಯಿಲೆಗಳು: ಕಾರ್ಪೊರೇಟ್ ಹೆಲ್ತ್ ಪಾಲಿಸಿಯು ಮೊದಲೇ ಇರುವ ಕಾಯಿಲೆಗಳಿಗೂ ವಿಮೆ ಪರಿಹಾರ ನೀಡುತ್ತದೆ. ಉದ್ಯೋಗಿಯು ವೈಯಕ್ತಿಕ ಪಾಲಿಸಿಯನ್ನು ಖರೀದಿಸುವುದಿದ್ದರೆ, ಮೊದಲೇ ಇದ್ದ ಕಾಯಿಲೆಗಳಿಗೂ ವಿಮೆ ಕವರೇಜ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗಂಭೀರ ಸ್ವರೂಪದ ಕಾಯಿಲೆ ಆಗಿದ್ದರೆ, ವಿಮೆ ವ್ಯಾಪ್ತಿಗೆ ನಿಲುಕದೆಯೂ ಇರಬಹುದು. ಅದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ನೆಟ್‌ವರ್ಕ್ ಆಸ್ಪತ್ರೆಗಳು: ಬಹುತೇಕ ಉದ್ಯೋಗಿಗಳು ದೇಶಾದ್ಯಂತ ಆಸ್ಪತ್ರೆಗಳ ನೆಟ್‌ವರ್ಕ್ ಜತೆಗೆ ಒಪ್ಪಂದವನ್ನು ಮಾಡಿಕೊಳ್ಳುತ್ತವೆ. ಪಾಲಿಸಿದಾರರು ಈ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಬಳಕೆದಾರರು ಈ ವಿಮೆಯನ್ನು ಪಡೆಯುವಾಗ ಆಸ್ಪತ್ರೆಗಳ ನೆಟ್‌ವರ್ಕ್ ಪಟ್ಟಿಯನ್ನು ಪರಿಗಣಿಸಬೇಕು.
ಉದ್ಯೋಗಿಗಳ ಆರೋಗ್ಯದ ಒಳಿತಿಗೆ ಸೂಕ್ತ: ಉದ್ಯೋಗಿಗಳ ಆರೋಗ್ಯದ ಒಳಿತಿಗೆ ಕಾರ್ಪೊರೇಟ್ ಆರೋಗ್ಯ ವಿಮೆ ಪಾಲಿಸಿಗಳು ಸೂಕ್ತ. ಒಳ್ಳೆಯ ಕಂಪನಿ ತನ್ನ ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯ ಆರೋಗ್ಯ ಪಾಲಿಸಿಯನ್ನು ನೀಡುತ್ತದೆ.