Site icon Vistara News

Twitter : ಸೂಪರ್‌‌ ಆ್ಯಪ್‌ ಆಗಲಿದೆಯೇ ಟ್ವಿಟರ್?‌ ಎಲಾನ್‌ ಮಸ್ಕ್‌ X ಟ್ವೀಟ್‌ನ ರಹಸ್ಯ ಏನು?

X CEO Elon Musk

Elon Musk Has An Offer For Journalists Who Want To Earn More, Here is the details

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ಹೊಸ ಕಾರ್ಪೊರೇಟ್ ಕಂಪನಿ X‌ ಕಾರ್ಪ್‌ ಜತೆಗೆ ವಿಲೀನವಾಗಿ ಸ್ವತಂತ್ರ ಕಂಪನಿಯಾಗಲಿದೆಯೇ? ಚೀನಾದ ವಿ ಚಾಟ್‌ ಮಾದರಿಯಲ್ಲಿ ಸೂಪರ್‌ ಆ್ಯಪ್‌ ಆಗಲಿದೆಯೇ ಎಂಬ ವದಂತಿಗಳು ಹರಡಿವೆ. ಇದಕ್ಕೆ ಕಾರಣ ಏನೆಂದರೆ ಟ್ವಿಟರ್‌ನ ಸಿಇಒ ಎಲಾನ್‌ ಮಸ್ಕ್‌ ಅವರು ಮಂಗಳವಾರ ಮಾಡಿರುವ X ಎಂಬ ನಿಗೂಢ ಟ್ವೀಟ್! ಇದರ ಹಿಂದಿನ ಸಂದೇಶ ಏನು? ಎಂಬ ಚರ್ಚೆ ಈಗ ಜೋರಾಗಿ ಜಾಲತಾಣದಲ್ಲಿ ನಡೆಯುತ್ತಿದೆ.

ಚೀನಾದ ಟೆನ್ಸೆಂಟ್‌ ಹೋಲ್ಡಿಂಗ್ಸ್‌ನ ವಿಚಾಟ್‌ (WeChat) ಸೂಪರ್‌ ಆ್ಯಪ್‌ನಲ್ಲಿ ಎಲ್ಲ ಬಗೆಯ ಟಿಕೆಟ್‌ ಬುಕಿಂಗ್‌, ಬಿಲ್‌ ಪಾವತಿ, ಪೇಮೆಂಟ್‌ಗಳನ್ನು ಮಾಡಬಹುದು. ಟ್ವಿಟರ್‌ ಕೂಡ ಅಂಥ ಸೂಪರ್‌ ಆ್ಯಪ್‌ ಆಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಮೊಕದ್ದಮೆಯೊಂದರಲ್ಲಿ ಕ್ಯಾಲಿಫೋರ್ನಿಯಾದ ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, X ಕಾರ್ಪ್‌ ಜತೆ ವಿಲೀನವಾದ ಬಳಿಕ ಟ್ವಿಟರ್‌ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ, ವಿಲೀನದ ಸ್ವರೂಪ ಇನ್ನೂ ಸ್ಪಷ್ಟತೆ ಪಡೆದಿಲ್ಲ. ಎಲಾನ್‌ ಮಸ್ಕ್‌ ಅವರು ಕಳೆದ ವರ್ಷ 44 ಶತಕೋಟಿ ಡಾಲರ್‌ಗಳ ಮೆಗಾ ಡೀಲ್‌ನಲ್ಲಿ ಟ್ವಿಟರ್‌ ಅನ್ನು ಖರೀದಿಸಿದ್ದರು. (ಅಂದಾಜು 3.36 ಲಕ್ಷ ಕೋಟಿ ರೂ.)

ಟ್ವಿಟರ್‌ ಅನ್ನು ಖರೀದಿಸಿದ ಬಳಿಕ X ಕಂಪನಿಯನ್ನು ಸೃಷ್ಟಿಸಲಾಗುವುದು. ಟ್ವಿಟರ್‌ ಖರೀದಿಯ ಉದ್ದೇಶವೂ ಅದುವೇ ಆಗಿದೆ ಎಂದು ಎಲಾನ್‌ ಮಸ್ಕ್‌ ಈ ಹಿಂದೆ ಹೇಳಿದ್ದರು. X ಎಂದರೆ everything app ಆಗಿರಬಹುದು ಎಂದು ವರದಿಯಾಗಿದೆ. ಎಲಾನ್‌ ಮಸ್ಕ್‌ ಅವರು ಎಲೆಕ್ಟ್ರಿಕ್‌ ಕಾರಿನಿಂದ ಬಾಹ್ಯಾಕಾಶ ಉದ್ದಿಮೆ ತನಕ ಹಲವು ವಲಯಗಳಲ್ಲಿ ಬಿಸಿನೆಸ್‌ ನಡೆಸುತ್ತಿದ್ದಾರೆ. ಹೀಗಾಗಿ ಸೂಪರ್‌ ಆ್ಯಪ್‌ ಅವರ ಉದ್ದಿಮೆ ಸಾಮ್ರಾಜ್ಯಕ್ಕೂ ಅನುಕೂಲಕಾರಿ ಎನ್ನಲಾಗುತ್ತಿದೆ.‌

ಟ್ವಿಟರ್‌ನ ( Twitter Logo) ಸಿಇಒ ಎಲಾನ್‌ ಮಸ್ಕ್‌ (Elon Musk) ಯಾವಾಗ ಏನು ಮಾಡುತ್ತಾರೆ, ಯೂ ಟರ್ನ್‌ ತೆಗೆದುಕೊಳ್ಳುತ್ತಾರೆ ಎಂದು ಊಹಿಸಲಾಗದು. ತಿಂಗಳಿನ ಹಿಂದೆ ಟ್ವಿಟರ್‌ನ ಲೋಗೊದಲ್ಲಿ ನೀಲಿ ಹಕ್ಕಿಯ ಚಿತ್ರವನ್ನೇ ತೆಗೆದು ಹಾಕಿದ್ದರು. ಅದರ ಬದಲಿಗೆ ಡಾಗ್‌ ಕಾಯಿನ್‌ (Dogcoin) ಎಂಬ ಕ್ರಿಪ್ಟೊ ಕರೆನ್ಸಿ ಮೇಲಿರುವ ನಾಯಿಯ ಮೀಮ್ಸ್‌ ಚಿತ್ರವನ್ನೇ ಟ್ವಿಟರ್‌ನ ಲೋಗೊವಾಗಿ ಬಳಸಿದ್ದರು. ಇದೀಗ ನಾಯಿ ಮುಖದ ಲೋಗೋ ನಾಪತ್ತೆಯಾಗಿದ್ದು, ಮತ್ತೆ ನೀಲಿ ಹಕ್ಕಿಯನ್ನೇ ಬಳಸಲಾಗಿದೆ.

#image_title

ಎಲಾನ್‌ ಮಸ್ಕ್‌ ಅವರು ಹಿಂದಿನಿಂದಲೂ ಡಾಗ್‌ ಕಾಯಿನ್‌ ಅನ್ನು ಬೆಂಬಲಿಸಿದ್ದರು. 2013ರಲ್ಲಿ ಜೋಕ್‌ನಂತೆ ಸೃಷ್ಟಿಯಾದ ಡಾಗ್‌ ಕಾಯಿನ್‌ ಬಳಿಕ ವ್ಯಾಪಕವಾಗಿ ಬಳಕೆಯಾಗಿ ಜನಪ್ರಿಯವಾಗಿತ್ತು. ಟೆಸ್ಲಾದಲ್ಲೂ ಡಾಗ್‌ ಕಾಯಿನ್‌ ಅನ್ನು ಬಳಸಲಾಗುತ್ತಿತ್ತು. ನಾಯಿ ಮುಖದ ಲೋಗೊ ನಾಪತ್ತೆಯಾದ ಬಳಿಕ ಡಾಗ್‌ ಕಾಯಿನ್‌ ಷೇರು ದರದಲ್ಲಿ 9% ಇಳಿಕೆಯಾಗಿದೆ.

ಬಿಟ್​ಕಾಯಿನ್ ಮತ್ತು ಇನ್ನಿತರ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಜೋಕ್ ಮಾಡಲು 2013ರಲ್ಲಿ ಬಿಲ್ಲಿ ಮಾರ್ಕಸ್, ಜಾಕ್ಸನ್ ಪಾಮರ್ ಎಂಬುವರು ಡಾಗ್​ಕಾಯಿನ್ ಕ್ರಿಪ್ಟೋಕರೆನ್ಸಿ ಹೊರತಂದರು. 2021ರಲ್ಲಿ ಎಲಾನ್​ ಮಸ್ಕ್​ ಅವರು ಈ ಡಾಗ್​ಕಾಯಿನ್​​ಗೆ ಉತ್ತೇಜನ ನೀಡಿದ್ದಲ್ಲದೆ, ಈ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ತಮ್ಮ ಟೆಸ್ಲಾ ಕಂಪನಿಯ ಉದ್ಯೋಗಿಗಳಿಗೂ ಶಿಫಾರಸು ಮಾಡಿದ್ದರು. ಅದೇ ಡಾಗ್​ಕಾಯಿನ್​ ಚಿತ್ರವನ್ನೇ ತಮ್ಮ ಟ್ವಿಟರ್​ ಲೋಗೋವನ್ನಾಗಿ ಬದಲಿಸಿಬಿಟ್ಟಿದ್ದರು.

ಎಲಾನ್​ ಮಸ್ಕ್​ ಅವರು ಕಳೆದ ವರ್ಷ ಟ್ವಿಟರ್ ಖರೀದಿ ಮಾಡಿದ ನಂತರದಿಂದಲೂ ಈ ಡಾಗ್​ಕಾಯಿನ್​ನ್ನು ಪ್ರಮೋಟ್​ ಮಾಡುತ್ತಿದ್ದರು. ಟ್ವಿಟರ್​​ನಲ್ಲಿ ನಾಯಿ ಮುಖದ ಮೀಮ್ಸ್ ಹಾಕುತ್ತಿದ್ದಂತೆ ಡಾಗ್​ಕಾಯಿನ್ ಕ್ರಿಪ್ಟೋಕರೆನ್ಸಿ ಮೌಲ್ಯ ಶೇ.20ರಷ್ಟು ಏರಿಕೆಯಾಗಿತ್ತು. ಎಲಾನ್​ ಮಸ್ಕ್​ ಫೆಬ್ರವರಿ 15ರಂದು ಒಂದು ವಿಲಕ್ಷಣ ಪೋಸ್ಟ್ ಹಾಕಿಕೊಂಡಿದ್ದರು. ನಾಯಿಯೊಂದು ಕಪ್ಪು ಬಟ್ಟೆ, ಕನ್ನಡಕ ಹಾಕಿ ಸೀಟ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡು ‘ಟ್ವಿಟರ್​ನ ನೂತನ ಸಿಇಒ ಅದ್ಭುತವಾಗಿದ್ದಾರೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.

Exit mobile version