Site icon Vistara News

World Bank : ಭಾರತದ ಜಿಡಿಪಿ ಮುನ್ನೋಟವನ್ನು 6.6%ರಿಂದ 6.3%ಕ್ಕೆ ಇಳಿಸಿದ ವಿಶ್ವಬ್ಯಾಂಕ್

world bank

world bank

ನವ ದೆಹಲಿ: ವಿಶ್ವ ಬ್ಯಾಂಕ್‌ (world Bank) 2023-24ರ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 6.6% ರಿಂದ 6.4%ಕ್ಕೆ ಇಳಿಸಿದೆ. ಹಣದುಬ್ಬರವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ಕಳೆದ ಮೇಯಿಂದ ಬಡ್ಡಿ ದರದಲ್ಲಿ 2.50% ಏರಿಸಿದೆ. ಇದರ ಪರಿಣಾಮ ಸಾಲದ ಬಡ್ಡಿ ದರಗಳು ಏರಿಕೆಯಾಗಿದೆ. ಇದು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿದೆ.

ಸಾಲದ ಬಡ್ಡಿ ದರ ಏರಿಕೆಯಾದಾಗ ಜನ ಖರ್ಚು ವೆಚ್ಚಗಳ ಮೇಲೆ ಹಿಡಿತ ಮಾಡುತ್ತಾರೆ. ಇದು ಬೇಡಿಕೆಯನ್ನು ತಗ್ಗಿಸಿ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಆದರೆ ಇದೇ ಸಂದರ್ಭ ಆರ್ಥಿಕ ಚಟುವಟಿಕೆಗಳೂ ಮಂದಗತಿಯಲ್ಲಿರುವಂತೆ ಮಾಡುತ್ತದೆ. ಖಾಸಗಿ ವೆಚ್ಚದ ಮೇಲೆ ಪ್ರತಿಕೂಲ ಪ್ರಭಾವ ಬೀರುವುದರಿಂದ ಆರ್ಥಿಕ ಬೆಳವಣಿಗೆ ಕೂಡ ನಿಧಾನಗತಿ ಪಡೆಯಬಹುದು ಎಂದು ಬ್ಯಾಂಕ್‌ ತಿಳಿಸಿದೆ.

2022-23ರಲ್ಲಿ 6.9% ಜಿಡಿಪಿ ಬೆಳವಣಿಗೆಯನ್ನು ವರ್ಲ್ಡ್‌ ಬ್ಯಾಂಕ್‌ ಅಂದಾಜಿಸಿತ್ತು. ಪ್ರಸಕ್ತ ಸಾಲಿನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 2.1%ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಸಂಭವಿಸಿರುವ ಬ್ಯಾಂಕಿಂಗ್‌ ಬಿಕ್ಕಟ್ಟು ಭಾರತದ ಮೇಲೆ ಸೀಮಿತ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಭಾರತದ ಬ್ಯಾಂಕಿಂಗ್‌ ವಲಯ ಸುಭದ್ರವಾಗಿದೆ ಎಂದು ವಿಶ್ವಬ್ಯಾಂಕ್‌ ವಿವರಿಸಿದೆ.

Exit mobile version