Site icon Vistara News

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

naturals ic cream raghunandan kamath

ಮುಂಬಯಿ: ಜನಪ್ರಿಯ ನ್ಯಾಚುರಲ್ಸ್ ಬ್ರಾಂಡ್‌ ಐಸ್‌ಕ್ರೀಂ (Naturals Ice cream) ಔಟ್‌ಲೆಟ್‌ಗಳನ್ನು ದೇಶಾದ್ಯಂತ ಸ್ಥಾಪಿಸಿ ಖ್ಯಾತಿ ಗಳಿಸಿ ʼದೇಶದ ಐಸ್‌ಕ್ರೀಂ ಮ್ಯಾನ್ʼ (India’s Ice cream man) ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕದ ಮಂಗಳೂರು ಮೂಲದ ರಘುನಂದನ್ ಕಾಮತ್ (75) (Raghunandan Kamath) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಪತ್ನಿ, ಪುತ್ರರನ್ನು ಅಗಲಿದ್ದಾರೆ.

ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ವಿವಿಧ ಹಣ್ಣುಗಳ ವಿಶಿಷ್ಟತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದನ್ನು ವಿಶಿಷ್ಟ ರೀತಿಯಲ್ಲಿ ಐಸ್‌ಕ್ರೀಂನಲ್ಲಿ ಪ್ರಯೋಗಿಸಿದರು. ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯೊಂದಿಗೆ ಆರಂಭಿಸಿದರು.

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪಾವ್ ಭಾಜಿ ಜೊತೆ ಐಸ್‌ಕ್ರೀಂ ಕೊಡಲು ಆರಂಭಿಸಿದರು. ಇದಾದ ಕೆಲವೇ ದಿನಗಳಲ್ಲಿ ಇವರ ಐಸ್‌ಕ್ರೀಂ ಜನಪ್ರಿಯತೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ನ್ಯಾಚುರಲ್‌ ಐಸ್ಕ್ರೀಂ ರಾರಾಜಿಸಲು ಆರಂಭಿಸಿತು. ಇದಾದ ಮೊದಲ ವಾರದಲ್ಲಿಯೇ ಮುಂಬಯಿಯ ಜುಹೂದಲ್ಲಿದ್ದ ಅಂಗಡಿ ಒಂದೇ ವರ್ಷದಲ್ಲಿ 5 ಲಕ್ಷ ರೂ. ವಹಿವಾಟು ದಾಖಲಿಸಿತು. ಪ್ರಸ್ತುತ ರಘುನಂದನ್ ಅವರ ನ್ಯಾಚುರಲ್ ಐಸ್ಕ್ರೀಂ 135ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Exit mobile version