Site icon Vistara News

High court : ಪುತ್ರಿಯನ್ನು ಗಂಡನ ಸುಪರ್ದಿಗೆ ಒಪ್ಪಿಸದ ವೈದ್ಯೆ; ಆಕೆಗೆ ಕೋರ್ಟ್‌ ಕೊಟ್ಟ ಸ್ಪೆಷಲ್ ಶಿಕ್ಷೆ ಏನು?

high court and doctor

ಬೆಂಗಳೂರು: ಅವರು ಒಬ್ಬ ವೈದ್ಯೆ. ವಯಸ್ಸು 33. ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ (Doctor in a private Hospital) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೌಟುಂಬಿಕ ಸಮಸ್ಯೆ (family problem) ಹಿನ್ನೆಲೆಯಲ್ಲಿ ಗಂಡನಿಂದ ಬೇರ್ಪಟ್ಟು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಎಂಟು ವರ್ಷದ ಒಬ್ಬ ಮಗಳಿದ್ದಾಳೆ (8 year old daughter). ಡೈವೋರ್ಸ್‌ ಸಂದರ್ಭದಲ್ಲಿ ಡಾಕ್ಟರ್‌ ತನ್ನ ಮಗಳನ್ನು ತನ್ನ ಜತೆಗೇ ಉಳಿಸಿಕೊಂಡಿದ್ದರು. ಈ ನಡುವೆ ಮಗಳನ್ನು ತನ್ನ ಸುಪರ್ದಿಗೆ ಕೊಡಬೇಕು ಎಂದು ಕೋರಿ ಗಂಡ ಕೋರ್ಟ್‌ ಮೊರೆ ಹೊಕ್ಕಿದ್ದರು. ಹೈಕೋರ್ಟ್‌ ಈ ಮನವಿಯನ್ನು ಆಧರಿಸಿ ಮಗಳನ್ನು ತಾತ್ಕಾಲಿಕವಾಗಿ ತಂದೆಯ ಸುಪರ್ದಿಗೆ (daughter Should be given to the care of father too) ಒಪ್ಪಿಸುವಂತೆ ಕಳೆದ ಜುಲೈನಲ್ಲಿ ಆದೇಶ ನೀಡಿತ್ತು. ಆದರೆ, ಡಾಕ್ಟರ್‌ ತೀರ್ಪನ್ನು ಪಾಲಿಸಿರಲಿಲ್ಲ. ಇದಕ್ಕೆ ಹೈಕೋರ್ಟ್‌ ಗರಂ Karnataka High court) ಆಗಿತ್ತು. ಹೀಗೆ ಸಿಟ್ಟುಕೊಂಡ ಕೋರ್ಟ್‌ ಆಕೆಗೆ ಕೊಟ್ಟಿರುವ ಪ್ರಾಯಶ್ಚಿತ್ತದ ಶಿಕ್ಷೆ ಏನು ಗೊತ್ತೇ? ಈ ಸ್ಟೋರಿ ಓದಿ.

ಕೋರ್ಟ್‌ ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯ ಸುಪರ್ದಿಗೆ ಒಪ್ಪಿಸುವಂತೆ ಆದೇಶ ಕೊಟ್ಟಿದ್ದರೂ ವೈದ್ಯೆ ಅದನ್ನು ಪಾಲಿಸಿರಲಿಲ್ಲ. ಮಗಳನ್ನು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವುದೂ ಒಂದು ಕಾರಣವಾಗಿತ್ತು. ಆದರೆ, ಆಕೆಯ ಗಂಡ ಇದನ್ನು ಮತ್ತೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.. ಇದನ್ನು ಗಮನಿಸಿದ ಕೋರ್ಟ್‌ ಆಕೆಯ ಮೇಲೆ ಸ್ವಯಂಪ್ರೇರಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿಕೊಂಡಿತ್ತು.

ಈ ಪ್ರಕರಣ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ ಆಕೆಯನ್ನು ಪ್ರಶ್ನೆ ಮಾಡಿತು. ಈ ವೇಳೆ ಬೇಷರತ್‌ ಕ್ಷಮಾಪಣೆ ಕೇಳಿದ ಮಹಿಳಾ ವೈದ್ಯೆ, ಕೋರ್ಟ್‌ ನೀಡುವ ಯಾವುದೇ ಶಿಕ್ಷೆಗೂ ಸಿದ್ಧ ಎಂದು ಹೇಳಿದರು.

ಆಕೆಗೆ ಆಗಿರುವ ಪ್ರಾಯಶ್ಚಿತ್ತದ ಭಾವವನ್ನು ಅರ್ಥ ಮಾಡಿಕೊಂಡ ಕೋರ್ಟ್‌, ನ್ಯಾಯಾಲಯದ ಆದೇಶದಂತೆ ಮಗಳನ್ನು ತಂದೆಯ ಸುಪರ್ದಿಗೆ ಒಪ್ಪಿಸುವ ಜತೆಗೆ ಒಂದು ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿತು. ಅಷ್ಟೇ ಅಲ್ಲ . ಆರು ತಿಂಗಳ ಕಳೆದ ನಂತರ ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನಲರ್‌ ಅವರಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.

ಹಾಗಿದ್ದರೆ ಆ ಶಿಕ್ಷೆ ಯಾವುದು?

ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು ಎಂದು ವೈದ್ಯೆ ಹೇಳಿದ್ದರು. ಅದನ್ನು ಋಜುವಾತುಪಡಿಸುವುದಕ್ಕಾಗಿ ಈ ಪ್ರಾಯಶ್ಚಿತ್ತದ ಶಿಕ್ಷೆಯನ್ನು ನೀಡಲು ಕೋರ್ಟ್‌ ತೀರ್ಮಾನಿಸಿತು.

ಅದೇನೆಂದರೆ, ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಬೇಕು ಎನ್ನುವುದು. ಹಾಗಂತ ಸುಮ್ಮನೆ ಹೋಗಿ ಸೇವೆ ಮಾಡಿ ಬರುವುದಲ್ಲ. ಸರಕಾರಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಪೂರ್ವಾನುಮತಿಯನ್ನು ಪಡೆದು ಇಂಥ ದಿನ ಬರುವುದಾಗಿ ಹೇಳಿ ಸೇವೆ ನೀಡಬೇಕು ಎಂದು ಹೇಳಲಾಯಿತು.

ವೈದ್ಯೆ ಈ ಆ ಮುಚ್ಚಳಿಕೆ ಮತ್ತು ಬೇಷರತ್‌ ಕ್ಷಮಾಪಣೆ ಪ್ರಮಾಣ ಪತ್ರವನ್ನು ನೀಡಿದ ಬಳಿಕ ಅದಕ್ಕೆ ಒಪ್ಪಿಗೆ ಸೂಚಿಸಿದ ವಿಭಾಗೀಯ ಪೀಠ, ವೈದ್ಯೆ ಮೇಲಿನ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ರದ್ದುಪಡಿಸಿತು.

ಈ ನಡುವೆ, ವೈದ್ಯೆಯು ನಗರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೂಡಾ ಕೋರ್ಟ್‌ ಹೇಳಿದೆ.

Exit mobile version