Site icon Vistara News

Physical Abuse : ಯುವತಿಯನ್ನು ಪ್ರವಾಸಕ್ಕೆ ಕರೆದೊಯ್ದು ಗ್ಯಾಂಗ್ ರೇಪ್‌; ಇಬ್ಬರು ಕಿರಾತಕರಿಗೆ 20 ವರ್ಷ ಜೈಲು

Physical abuse

ಗಂಗಾವತಿ: ಕಚೇರಿಯಲ್ಲಿ ತಮ್ಮ ಜತೆಗೇ ಕೆಲಸ ಮಾಡುತ್ತಿದ್ದ ಯುವತಿಯನ್ನು (Colleague in Office) ಪ್ರವಾಸಕ್ಕೆಂದು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ (Physical Abuse) ಮಾಡಿದ ಇಬ್ಬರು‌ ಕಿರಾತಕರಿಗೆ ಗಂಗಾವತಿ ಕೋರ್ಟ್‌ (Gangavati Court) 20 ವರ್ಷಗಳ ಜೈಲು ಶಿಕ್ಷೆ (20 Years jail term) ವಿಧಿಸಿದೆ.

2015ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ, ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ತಲಾ ಮೂರು ಲಕ್ಷ ರೂಪಾಯಿ ದಂಡ ಮತ್ತು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಇಬ್ಬರು ಕಿರಾತಕರು ಸಹೋದ್ಯೋಗಿ ಯುವತಿಯನ್ನು ಜತೆಗೆ ಕರೆದೊಯ್ದು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ನಿದ್ರೆಯ ಮಂಪರಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿದ್ದು ಸಾಬೀತಾಗಿತ್ತು. ದಂಡ ಪಾವತಿಯಲ್ಲಿ ವಿಫಲವಾದರೆ ಹೆಚ್ಚುವರಿ ಐದು ವರ್ಷ ಸಜೆ ವಿಧಿಸಲಾಗಿದೆ.

ಆರೋಪಿಗಳನ್ನು ಉತ್ತರ ಪ್ರದೇಶದ ಫಾರೂಕಾಬಾದ್‌ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್ ರೋಹಿತ್ ಪ್ರಮೋದ್ ಮಂಗಲಿಕ್ ಮತ್ತು ರಾಜಸ್ತಾನದ ಸಿಕ್ಕರ್ ಜಿಲ್ಲೆಯ ರಾಜಕುಮಾರ ಮದನಾಲ್ ಸೈನಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಸಂತ್ರಸ್ತ ಯುವತಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಒಂಬತ್ತು ವರ್ಷದ ಹಿಂದೆ ನಡೆದಿದ್ದೇನು?

ಆರೋಪಿಗಳು ಮತ್ತು ಸಂತ್ರಸ್ತ ಯುವತಿ ಹೈದರಾಬಾದಿನ ಡಿ.ಇ ಮತ್ತು ಶಾ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2015ರಲ್ಲಿ ಅವರೆಲ್ಲರೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಹೋಬಳಿಯ ವಿರುಪಾಪುರ ಗಡ್ಡೆಗೆ ಪ್ರವಾಸಕ್ಕೆ ಬಂದಿದ್ದರು.

ಯುವತಿಯನ್ನು ಪ್ರವಾಸದ ನೆಪದಲ್ಲಿ ಧೈರ್ಯ ತುಂಬಿ ಕರೆತಂದಿದ್ದ ಯುವಕರು ಅಲ್ಲಿನ ಹೇಮಾ ಗೆಸ್ಟ್ ಹೌಸ್ ಎಂಬಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದರು.

ರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಯುವತಿ ಸೇವಿಸುತ್ತಿದ್ದ ತಂಪು ಪಾನೀಯದಲ್ಲಿ ಆಕೆಗೆ ಗೊತ್ತಾಗದಂತೆ ಮತ್ತು ಬರಿಸುವ ಮಾದಕ ದ್ರವ್ಯ ಸೇರಿಸಿ ಕುಡಿಸಿದ್ದಾರೆ. ಬಳಿಕ ಆಕೆ ನಿದ್ರೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ : Physical Abuse : ಮೇಕೆ ಮೇಯಿಸುತ್ತಿದ್ದವಳ ಕೈ-ಕಾಲು ಕಟ್ಟಿ ಅತ್ಯಾಚಾರವೆಸಗಿದ; 16ರ ಬಾಲೆ ಈಗ 7 ತಿಂಗಳ ಗರ್ಭಿಣಿ

ಆಕೆ ನಿದ್ದೆ ಮತ್ತು ಮತ್ತಿನಲ್ಲಿದ್ದಾಗ ಈ ಯುವಕರು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಆರೋಪಿಸಿ ದೂರು ದಾಖಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಗಂಗಾವತಿ ಗ್ರಾಮೀಣ ಠಾಣೆಯ ಅಂದಿನ ಸಿಪಿಐ ಪ್ರಭಾಕರ ಧರ್ಮಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ವಾದ ಮಂಡಿಸಿದ್ದರು.  

Exit mobile version