ಜೈಪುರ: ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಎಸಗಿದ ದುರುಳರು, ಅತ್ಯಾಚಾರದ ಬಳಿಕ ಆಕೆಯನ್ನು ಕಲ್ಲಿದ್ದಲಿನ ಕುಲುಮೆಗೆ ಎಸೆದು (Physical Abuse) ಕ್ರೌರ್ಯ ಮೆರೆದಿದ್ದಾರೆ. ಕೊಟ್ರಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಕಲ್ಲಿದ್ದಲಿನ ಕುಲುಮೆಯಲ್ಲಿ ಸುಟ್ಟ ಬಾಲಕಿಯ ದೇಹ ಪತ್ತೆಯಾಗಿದೆ.
ಗುರುವಾರ ಮೇಕೆ ಮೇಯಿಸಲು ಜಮೀನಿಗೆ ಹೋದ ಬಾಲಕಿ ನಾಪತ್ತೆಯಾಗಿದ್ದಾಳೆ. ಮನೆಗೆ ಮಗಳು ಬಾರದ ಕಾರಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ನೀಡಿದ ಬಳಿಕ ಭಾರಿ ಶೋಧ ನಡೆಸಿದ್ದಾರೆ. ಅನುಮಾನಗೊಂಡ ಪೊಲೀಸರು ಹಾಗೂ ಗ್ರಾಮಸ್ಥರು ತೀವ್ರ ಪರಿಶೀಲನೆ ನಡೆಸಿದ ಬಳಿಕ ಬಾಲಕಿಯ ಶವವು ಕಲ್ಲಿದ್ದಲಿನ ಕುಲುಮೆಯಲ್ಲಿ ಪತ್ತೆಯಾಗಿದೆ.
ಐದು ಕಲ್ಲಿದ್ದಲಿನ ಕುಲುಮೆಯ ಬಳಿ ಬಾಲಕಿಯ ಬಳೆ ಪತ್ತೆಯಾಗಿದೆ. ಇದಾದ ಬಳಿಕ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಕುಲುಮೆಯಲ್ಲಿ ಹಲವರ ಶವ ಇರುವ ಆರೋಪ
ಇದನ್ನೂ ಓದಿ: Kerala Horror: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಅಶ್ಫಾಕ್ ಅಸ್ಲಾಂ ಎಂಬ ನೀಚನ ಬಂಧನ
ಪಟ್ಟಣದ ಸುತ್ತಮುತ್ತಲಿನ ದುಷ್ಕರ್ಮಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ, ಕಲ್ಲಿದ್ದಲಿನ ಕುಲುಮೆಯಲ್ಲಿ ಇನ್ನಷ್ಟು ಶವಗಳು ಇರಬಹುದು ಎಂದು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಶ್ವಾನ ದಳವೂ ಕುಲುಮೆಗೆ ಬಂದಿದ್ದು, ಹೆಚ್ಚಿನ ಸಿಬ್ಬಂದಿಯು ತನಿಖೆ ನಡೆಸುತ್ತಿದ್ದಾರೆ. ಇನ್ನು ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವು ದೇಶಾದ್ಯಂತ ಸುದ್ದಿಯಾಗುತ್ತಿದ್ದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜನ ಆಗ್ರಹಿಸಿದ್ದಾರೆ.