ಡೆಹ್ರಾಡೂನ್ : 24 ವರ್ಷದ ಮಹಿಳೆಯ ಮೇಲೆ 15 ವರ್ಷದ ಅಪ್ರಾಪ್ತ ಬಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿರುವ ಪ್ರಸಿದ್ಧ ಪಂಚತಾರಾ ಹೋಟೆಲ್ನಲ್ಲಿ ನಡೆದಿದೆ.
ಡೆಹ್ರಾಡೂನ್ನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆಯ ಮೇಲೆ ಅದೇ ಹೋಟೆಲ್ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಎರಡು ದಿನಗಳಿಂದ ಉಳಿದುಕೊಂಡಿದ್ದ 15 ವರ್ಷದ ಬಾಲಕ ಏಕಾಏಕಿ ಮಹಿಳೆಯರ ಶೌಚಾಚಲಯಕ್ಕೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮಹಿಳೆ ಮೂಲತಃ ಪಶ್ಚಿಮ ಬಂಗಾಳದವರು. ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಮಗಳು ಕೂಡ ಇದ್ದಾಳೆ. ಸದ್ಯ ಸಂತ್ರಸ್ತ ಮಹಿಳೆ ಚತ್ತೀಸ್ಗಢ ಮೂಲದ ಆರೋಪಿ ಮೇಲೆ ರಾಜ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನು ಓದಿ| ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಆಕಸ್ಮಿಕ ಅಲ್ಲ, ಪೂರ್ವ ನಿಯೋಜಿತ: ಸಾಕ್ಷ್ಯ ಹೇಳಿದ ಕಾಂಡೊಮ್!
ಪೊಲೀಸರ ಮಾಹಿತಿಯ ಪ್ರಕಾರ ಮಹಿಳೆ ಶೌಚಾಲಯದಲ್ಲಿ ತನ್ನ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುತ್ತಿದ್ದಾಗ ಬಾಲಕ ಏಕಾಏಕಿ ಶೌಚಾಲಯಕ್ಕೆ ನುಗ್ಗಿದ್ದ. ನಂತರ ಮಹಿಳೆಯ ಜೊತೆ ಮಾತನಾಡಲು ಮುಂದಾಗಿದ್ದ. ಆದರೆ, ಮಹಿಳೆ ಯಾವುದಕ್ಕೂ ಸ್ಪಂದಿಸದೇ ಇದು ಮಹಿಳೆಯರ ಶೌಚಾಲಯ, ಹೊರಗೆ ಹೋಗುವಂತೆ ಹೇಳಿದ್ದಳು. ಆದರೆ ಬಾಲಕ ಒಳಗಿನಿಂದ ಶೌಚಾಲಯದ ಬಾಗಿಲು ಚಿಲಕ ಹಾಕಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಹಿಳೆ ಸಹಾಯಕ್ಕಾಗಿ ಜೋರಾಗಿ ಕಿರುಚಿದರೂ ಸಹ ಯಾರೂ ನೆರವಿಗೆ ಬಂದಿರಲಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಬಂಧಿತ ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಳಿಕ ಹರಿದ್ವಾರದ ಬಾಲಾಪಾರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ| ಮಲತಂದೆಯಿಂದ ರೇಪ್, ತಾಯಿಯಿಂದ ಮಗಳ ಅಂಡ ಮಾರಾಟ: ತಮಿಳುನಾಡಿನಲ್ಲಿ ರಾಕ್ಷಸೀ ಕೃತ್ಯ