Site icon Vistara News

ಮತ್ತೆ 3 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌: ಒಟ್ಟು 9 ಶಾಲೆಗಳಿಗೆ ಸಂದೇಶ

ಬೆಂಗಳೂರು: ಶಕ್ತಿಯುತ ಬಾಂಬ್‌ ಇರಿಸಿದ್ದು, ಎಚ್ಚೆತ್ತುಕೊಳ್ಳುವಂತೆ ಬೆಂಗಳೂರಿನ ಮತ್ತೆರಡು ಶಾಲೆಗಳಿಗೆ ಬೆದರಿಕೆ ಇಮೇಲ್‌ ಬಂದಿದೆ. ಕೊಪ್ಪ ಬೇಗೂರು ರಸ್ತೆಯ ಕ್ಯಾಂಡಾರ್‌ ಸ್ಕೂಲ್‌, ರೆಡ್‌ ಬ್ರಿಡ್ಜ್‌ ಸ್ಕೂಲ್‌ ಹಾಗೂ ಸರ್ಜಾಪುರದ ಕುನ್ಸ್‌ ಕ್ಯಾಪ್ಸ್‌ ಶಾಲೆಗಳಿಗೆ ಇಮೇಲ್‌ ಬಂದಿರುವುದನ್ನು ಸಿಬ್ಬಂದಿ ಖಚಿತಪಡಿಸಿದ್ದಾರೆ.

ಶಾಲೆಯಲ್ಲಿ ಶಕ್ತಿಯುತ ಬಾಂಬ್‌ ಇದ್ದು, ತಕ್ಷಣವೇ ಪೊಲೀಸರನ್ನು ಕರೆಯಿಸಿ ಎಂದು ಶುಕ್ರವಾರ ಬೆಳಗ್ಗೆ ಆರು ಶಾಲೆಗಳಿಗೆ ಇಮೇಲ್‌ ಸಂದೇಶ ರವಾನೆಯಾಗಿತ್ತು. ಈಗಾಗಲೆ ಶಾಲೆಗಳಿಗೆ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಯಲ್ಲಿದ್ದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳಿಸಿ ಮೂಲೆ ಮೂಲೆಯಲ್ಲೂ ಹುಡುಕಾಟ ನಡಸಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ.

ಇದೇ ವೇಳೆ ಮೂರು ಶಾಲೆಗಳ ಇಮೇಲ್‌ ವಿಳಾಸಕ್ಕೆ ಸಂದೇಶ ರವಾನೆ ಆಗಿರುವುದನ್ನು ಪೊಲೀಸರಿಗೆ ತಿಳಿಸಲಾಗಿದೆ. ಸರ್ಜಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ಒಟ್ಟಾರೆ ಬೆಂಗಳೂರು ನಗರದ ಆರು ಹಾಗೂ ಗ್ರಾಮಾಂತರದ ಮೂರು ಶಾಳೆ ಸೇರಿ 9 ಶಾಲೆಗಳಿಗೆ ಬೆದರಿಕೆ ಸಂದೇಶ ರವಾನೆಯಾಗಿರುವುದು ಪತ್ತೆಯಾಗಿದೆ.

Exit mobile version