ನವದೆಹಲಿ: ರಾಷ್ಟ್ರ ರಾಜಧಾನಿಯ ಸುಲ್ತಾನ್‌ಪುರಿಯಲ್ಲಿ (Accident In Delhi) ಜನವರಿ 1ರ ರಾತ್ರಿ ಕಾರಿನ ಅಡಿಗೆ ಸಿಲುಕಿ ಅಂಜಲಿ ಸಿಂಗ್ (20) ಮೃತಪಟ್ಟ ಪ್ರಕರಣವು ಮತ್ತಷ್ಟು ಗಂಭೀರವಾಗುತ್ತಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಅಂಜಲಿಗೆ ಕಾರು ಡಿಕ್ಕಿಯಾಗಿ, ಆಕೆ ಕಾರಿನ ಅಡಿಗೆ ಸಿಲುಕಿ, ಚಾಲಕನು ಹಾಗೆಯೇ 12 ಕಿ.ಮೀ ಎಳೆದುಕೊಂಡು ಹೋದ ಭೀಕರ ಅಪಘಾತವು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಅಪಘಾತದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಕಾರಿನ ಅಡಿಗೆ ಯುವತಿ ಸುಲಿಕಿದ್ದು, ಆಕೆಯನ್ನು ಎಳೆಯಲಾಗುತ್ತಿದೆ ಎಂಬ ಕುರಿತು ಪೊಲೀಸ್ ಕಂಟ್ರೋಲ್ ರೂಮ್‌ಗೆ (PCR) ಕರೆ ಬಂದರೂ ಪೊಲೀಸರು ನಿರ್ಲಕ್ಷಿಸಿದರು. ಕರೆ ಮಾಡಿದ ಎರಡು ಗಂಟೆ ಬಳಿಕ ಕಾರಿನ ಹಿಂದೆ ಹಿಂಬಾಲಿಸಲಾಯಿತು. ಅಲ್ಲದೆ, ಒಂಬತ್ತು ಪಿಸಿಆರ್ ವಾಹನಗಳು ಕಾರನ್ನು ಚೇಸ್ ಮಾಡಿದರೂ ಅದನ್ನು ಹಿಂದಿಕ್ಕಲು ಆಗಲಿಲ್ಲ. ಕೂಡಲೇ ಆರೋಪಿಗಳನ್ನು ಹಿಡಿಯಲು ಆಗಲಿಲ್ಲ ಎಂದು ತಿಳಿದುಬಂದಿದೆ.
ಯುವತಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ಸ್ಥಳೀಯರು ಜನವರಿ 1ರ ಬೆಳಗಿನ ಜಾವ 2 ಗಂಟೆಯಿಂದ 4 ಗಂಟೆವರೆಗೆ ಪಿಸಿಆರ್‌ಗೆ ಪದೇಪದೆ ಕರೆ ಮಾಡಿದ್ದಾರೆ. ಹೀಗಿದ್ದರೂ ಪೊಲೀಸರು ನಿರ್ಲಕ್ಷಿಸಿದ ಕಾರಣ ಕಾರಿನ ಅಡಿಗೆ ಸಿಲುಕಿದ ಯುವತಿಯು ಹೆಣವಾಗಿ ರಸ್ತೆ ಮಧ್ಯೆ ಬೀಳಬೇಕಾಯಿತು. ಹಾಗೊಂದು ವೇಳೆ ಪೊಲೀಸರು ಕೂಡಲೇ ಕಾರನ್ನು ಚೇಸ್ ಮಾಡಿದ್ದರೆ ಯುವತಿಯನ್ನು ಉಳಿಸಬಹುದಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Accident In Delhi | ಕಾರಿನ ಅಡಿಗೆ ಸಿಲುಕಿ ಮೃತಪಟ್ಟ ಅಂಜಲಿ ಮದ್ಯಪಾನ ಮಾಡಿದ್ದಳು; ಸ್ನೇಹಿತೆ ಪೊಲೀಸರಿಗೆ ಹೇಳಿದ್ದೇನು?