Accident In Delhi | ಅಂಜಲಿ ವಿಲವಿಲ ಎನ್ನುತ್ತಿದ್ದರೆ ಪೊಲೀಸರು ನಿರ್ಲಕ್ಷಿಸಿದರು, 9 ವ್ಯಾನ್‌ನಿಂದಲೂ ಕಾರ್‌ ಚೇಸ್‌ ಮಾಡಲು ಆಗಲಿಲ್ಲ? - Vistara News

ಕ್ರೈಂ

Accident In Delhi | ಅಂಜಲಿ ವಿಲವಿಲ ಎನ್ನುತ್ತಿದ್ದರೆ ಪೊಲೀಸರು ನಿರ್ಲಕ್ಷಿಸಿದರು, 9 ವ್ಯಾನ್‌ನಿಂದಲೂ ಕಾರ್‌ ಚೇಸ್‌ ಮಾಡಲು ಆಗಲಿಲ್ಲ?

ಅಂಜಲಿ ಸಿಂಗ್‌ ಎಂಬ ಯುವತಿಯನ್ನು ಕಾರು ಎಳೆಯುತ್ತಿದ್ದ ಕುರಿತು (Accident In Delhi) ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿದರೂ, ಸಿಬ್ಬಂದಿಯು ಕೂಡಲೇ ಕಾರ್ಯಪ್ರವೃತ್ತರಾಗಲಿಲ್ಲ ಎಂದು ತಿಳಿದುಬಂದಿದೆ.

VISTARANEWS.COM


on

Accident In Delhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಾಷ್ಟ್ರ ರಾಜಧಾನಿಯ ಸುಲ್ತಾನ್‌ಪುರಿಯಲ್ಲಿ (Accident In Delhi) ಜನವರಿ 1ರ ರಾತ್ರಿ ಕಾರಿನ ಅಡಿಗೆ ಸಿಲುಕಿ ಅಂಜಲಿ ಸಿಂಗ್‌ (20) ಮೃತಪಟ್ಟ ಪ್ರಕರಣವು ಮತ್ತಷ್ಟು ಗಂಭೀರವಾಗುತ್ತಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಅಂಜಲಿಗೆ ಕಾರು ಡಿಕ್ಕಿಯಾಗಿ, ಆಕೆ ಕಾರಿನ ಅಡಿಗೆ ಸಿಲುಕಿ, ಚಾಲಕನು ಹಾಗೆಯೇ 12 ಕಿ.ಮೀ ಎಳೆದುಕೊಂಡು ಹೋದ ಭೀಕರ ಅಪಘಾತವು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಅಪಘಾತದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾರಿನ ಅಡಿಗೆ ಯುವತಿ ಸುಲಿಕಿದ್ದು, ಆಕೆಯನ್ನು ಎಳೆಯಲಾಗುತ್ತಿದೆ ಎಂಬ ಕುರಿತು ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ (PCR) ಕರೆ ಬಂದರೂ ಪೊಲೀಸರು ನಿರ್ಲಕ್ಷಿಸಿದರು. ಕರೆ ಮಾಡಿದ ಎರಡು ಗಂಟೆ ಬಳಿಕ ಕಾರಿನ ಹಿಂದೆ ಹಿಂಬಾಲಿಸಲಾಯಿತು. ಅಲ್ಲದೆ, ಒಂಬತ್ತು ಪಿಸಿಆರ್‌ ವಾಹನಗಳು ಕಾರನ್ನು ಚೇಸ್‌ ಮಾಡಿದರೂ ಅದನ್ನು ಹಿಂದಿಕ್ಕಲು ಆಗಲಿಲ್ಲ. ಕೂಡಲೇ ಆರೋಪಿಗಳನ್ನು ಹಿಡಿಯಲು ಆಗಲಿಲ್ಲ ಎಂದು ತಿಳಿದುಬಂದಿದೆ.

ಯುವತಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ಸ್ಥಳೀಯರು ಜನವರಿ 1ರ ಬೆಳಗಿನ ಜಾವ 2 ಗಂಟೆಯಿಂದ 4 ಗಂಟೆವರೆಗೆ ಪಿಸಿಆರ್‌ಗೆ ಪದೇಪದೆ ಕರೆ ಮಾಡಿದ್ದಾರೆ. ಹೀಗಿದ್ದರೂ ಪೊಲೀಸರು ನಿರ್ಲಕ್ಷಿಸಿದ ಕಾರಣ ಕಾರಿನ ಅಡಿಗೆ ಸಿಲುಕಿದ ಯುವತಿಯು ಹೆಣವಾಗಿ ರಸ್ತೆ ಮಧ್ಯೆ ಬೀಳಬೇಕಾಯಿತು. ಹಾಗೊಂದು ವೇಳೆ ಪೊಲೀಸರು ಕೂಡಲೇ ಕಾರನ್ನು ಚೇಸ್‌ ಮಾಡಿದ್ದರೆ ಯುವತಿಯನ್ನು ಉಳಿಸಬಹುದಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Accident In Delhi | ಕಾರಿನ ಅಡಿಗೆ ಸಿಲುಕಿ ಮೃತಪಟ್ಟ ಅಂಜಲಿ ಮದ್ಯಪಾನ ಮಾಡಿದ್ದಳು; ಸ್ನೇಹಿತೆ ಪೊಲೀಸರಿಗೆ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

Suraj Revanna Case: 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ.

VISTARANEWS.COM


on

Suraj Revanna Case
Koo

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ಸಿಐಡಿ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಇದರಿಂದ ಸೂರಜ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ

ಇನ್ನು ಸೂರಜ್ ರೇವಣ್ಣ ಪರ ವಕೀಲ ನಿಖಿಲ್ ಡಿ ಕಾಮತ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಧಿಶರು ಸೂಚಿಸಿದ್ದಾರೆ. ಹೀಗಾಗಿ ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿದ ರೇವಣ್ಣ

ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ನ ಮಾಜಿ ಸಚಿವ ಎಚ್.ಡಿ. ರೇವಣ್ಣ ಬುಧವಾರ ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೇವಣ್ಣ, ಭವಿಷ್ಯವನ್ನು ಹಾಳು ಮಾಡಿಕೊಂಡೆ. ನಮ್ಮ ಕುಟುಂಬಕ್ಕೂ ಕೆಟ್ಟ ಹೆಸರು ತಂದೆ. ಎಂತಹ ಮಕ್ಕಳು ಹುಟ್ಟಿದ್ದೀರಪ್ಪಾ ನನಗೆ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.

ನಮ್ಮ ಹಣೆಬರಹ ಏನೂ ಮಾಡೋದಿಕ್ಕೆ ಆಗೋದಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದಾಗ, ತಂದೆ ಮಾತಿಗೆ ಮರು ಉತ್ತರ ನೀಡಲಾಗದೆ ಪ್ರಜ್ವಲ್ ಸುಮ್ಮನಾಗಿದ್ದಾರೆ. ನಂತರ ಬಟ್ಟೆ ಮತ್ತು ಹಣ್ಣುಗಳನ್ನು ನೀಡಿ ರೇವಣ್ಣ ವಾಪಸ್ ತೆರಳಿದ್ದಾರೆ ಎಂದು ಜೈಲ್ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್‌ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್‌ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Actor Darshan: ದರ್ಶನ್‌ ಕೆಟ್ಟ ವ್ಯಕ್ತಿಯಲ್ಲ, ತಪ್ಪು ಮಾಡಿಲ್ಲ ಎಂದ ಕೆ. ಮಂಜು

ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

Latest

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Sexual Harassment: ಹೆಣ್ಣುಮಕ್ಕಳಿಗೆ ಅಪ್ಪನೆಂದರೆ ಆಕಾಶ ಎಂಬ ಭಾವ ಇರುತ್ತದೆ. ಆದರೆ ಈಗ ಸಮಾಜದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಅಪ್ಪನೆಂದರೆ ಅನುಮಾನ ಪಡುವ ಹಾಗೇ ಆಗಿದೆ. ತನ್ನ ಮಗಳನ್ನು ಜತನದಿಂದ ಕಾಪಾಡಬೇಕಾದ ತಂದೆಯೇ ಮಗಳಿಗೆ ಸುಳ್ಳು ಹೇಳಿ ನಂಬಿಸಿ ಅವಳೊಂದಿಗೆ ಕಾಮದಾಟವಾಡಿದ್ದಾನೆ. ಸತತ ಆರು ವರ್ಷಗಳ ಕಾಲ ಮಗಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು ಗರ್ಭಿಣಿ ಮಾಡಿದಂತಹ ನೀಚಕೃತ್ಯ ಬಯಲಿಗೆ ಬಂದಿತ್ತು. ಇದೀಗ ಆತನಿಗೆ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ.

VISTARANEWS.COM


on

Sexual Harassment
Koo

ತಂದೆ ತಮ್ಮ ಹೆಣ್ಣುಮಕ್ಕಳ ರಕ್ಷಕನಾಗಿರುತ್ತಾನೆ. ಆದರೆ ಈ ರಕ್ಷಕನೇ ಭಕ್ಷಕನಾದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವವರು ಯಾರು? ಕೆಲವು ತಂದೆಯರು ತಮ್ಮ ಹೆಣ್ಣು ಮಕ್ಕಳನ್ನು ನೀಚರಿಂದ ಕಾಪಾಡಲು ತಮ್ಮ ಪ್ರಾಣವನ್ನೇ ಕೊಡುತ್ತಾರೆ. ಆದರೆ ಕೆಲವರು ತಮ್ಮ ಹೆಣ್ಣು ಮಕ್ಕಳನ್ನೇ ಕಾಮದಾಟಕ್ಕೆ(Sexual Harassment) ಬಳಸಿಕೊಳ್ಳುತ್ತಾರೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಆಕೆಯ ತಂದೆಯೇ ಆರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದಲ್ಲಿ ನಡೆದಿದ್ದು, ಕೋರ್ಟ್ ಆತನಿಗೆ ತಕ್ಕ ಶಿಕ್ಷೆ ವಿಧಿಸಿದೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ, ಇದು ವೈರಲ್ ಆಗಿದ್ದು ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.  ನೀಚ ತಂದೆಯ ಕೃತ್ಯದ ವಿರುದ್ಧ ಜನರು ಕಿಡಿಕಾರಿದ್ದಾರೆ. ಇದೀಗ ಈ ಪಾಪಿ ತಂದೆಗೆ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ.

ಆರೋಪಿ ಮುಹಮ್ಮದ್ ಎಚ್ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ. ಈತ ತನ್ನ 10 ವರ್ಷದ ಮಗಳಿಗೆ ʼಎಲ್ಲಾ ತಂದೆಯರು ತಮ್ಮ ಹೆಣ್ಣು ಮಕ್ಕಳಿಗೆ ಈ ರೀತಿ ಮಾಡುತ್ತಾರೆʼ ಎಂದು ಹೇಳುವ ಮೂಲಕ ಆಕೆಯನ್ನು ಆರು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತಂದೆ ಮಗಳ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಇದರ ಪರಿಣಾಮವಾಗಿ ಬಾಲಕಿ 16ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು.

ಈ ಬಗ್ಗೆ ಮಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಮಕ್ಕಳ ರಕ್ಷಣೆ ಕಾಯ್ದೆ, 2012 (ಪೋಕ್ಸೊ ಕಾಯ್ದೆ), ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆ ಕಾಯ್ದೆ) ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಇದನ್ನೂ ಓದಿ: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಡಿಎನ್‍ಎ ಪರೀಕ್ಷೆಯಲ್ಲಿ ಸತ್ಯಾಂಶ ತಿಳಿದುಬಂದಿದೆ. ಹಾಗಾಗಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇರಳ ನ್ಯಾಯಾಲಯವು ಮುಹಮ್ಮದ್‍ಗೆ ಜೀವಾವಧಿ ಶಿಕ್ಷೆಯೊಂದಿಗೆ 101 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಂದರೆ ಹಲವು ಪ್ರತ್ಯೇಕ ಶಿಕ್ಷೆ ಸೇರಿ 101 ವರ್ಷ ಶಿಕ್ಷೆಯಾಗುತ್ತದೆ. ಈ ಶಿಕ್ಷೆಯನ್ನು ಜೀವಿತಾವಧಿಯಲ್ಲಿ ಒಟ್ಟಿಗೇ ಅನುಭವಿಸಬೇಕಾಗುತ್ತೆ.

Continue Reading

ಕರ್ನಾಟಕ

BJP Protest: ಪ್ರತಿಭಟನೆ ವೇಳೆ ಶಾಸಕ ವೇದವ್ಯಾಸ್ ಕಾಮತ್ ಧಮ್ಕಿ; ಕೆರಳಿದ ಪೊಲೀಸ್‌!

BJP Protest: ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ಬಸ್‌ ಹತ್ತಿಸುವ ವೇಳೆ ಧಮ್ಕಿ ಹಾಕಿದ್ದರಿಂದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಜತೆ ಪೊಲೀಸ್‌ ಒಬ್ಬರು ವಾಗ್ದಾದ ನಡೆಸಿದ್ದಾರೆ.

VISTARANEWS.COM


on

BJP Protest
Koo

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಖಂಡಿಸಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ (BJP Protest) ಹಾಕಲು ಯತ್ನಿಸಿದ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ..ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಹಲವು ನಾಯಕರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ಬಸ್‌ ಹತ್ತಿಸುವ ವೇಳೆ ಧಮ್ಕಿ ಹಾಕಿದ್ದರಿಂದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಜತೆ ಪೊಲೀಸ್‌ ಒಬ್ಬರು ವಾಗ್ದಾದ ನಡೆಸಿರುವುದು ಕಂಡುಬಂದಿದೆ.

ಬಸ್‌ ಬಾಗಿಲಲ್ಲಿ ನಿಂತಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಕೆಳಗಿದ್ದ ಒಬ್ಬ ಪೊಲೀಸ್‌ಗೆ ಹೇಯ್ ಅಂದಿದ್ದಾರೆ. ಇದರಿಂದ ಕೆರಳಿದ ಪೊಲೀಸ್, ಶಾಸಕನ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು ಹೋಗಪ್ಪ ಬಾರಪ್ಪ ಎಂದರೆ ಕೇಳಿಸಿಕೊಂಡು ಸುಮ್ಮನಿರಬೇಕಾ? ಎಂದು ಶಾಸಕ ಕಾಮತ್ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ದಿನಕ್ಕೊಂದು ಹಗರಣ: ವಿಜಯೇಂದ್ರ ಅಕ್ರೋಶ

ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ರಾಜ್ಯದಲ್ಲಿ ದಿನಕ್ಕೊಂದು ಹಗರಣ ನಡೆಯುತ್ತಿದೆ. ಹಗಲು ದರೋಡೆ ಮಾಡುತ್ತಿದ್ದಾರೆ. ಸಿಎಂ ಮನೆ ಮುತ್ತಿಗೆಗೆ ಹೊರಟರೆ ಬಂಧನ ಮಾಡುವ ಕೆಲಸ ನಡೆಯುತ್ತಿದೆ. ನಾವು ಭ್ರಷ್ಟಾಚಾರ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೈಸೂರು ಮುಡಾ ಹಗರಣ ನಡೆದಿದೆ. ಸಿಎಂ ಮೈಸೂರಿನವರು, ಅವರ ಗಮನಕ್ಕೆ ಬಾರದೆ ಹಗರಣ ನಡೆದಿರುವುದಿಲ್ಲ. ಅವರೇ ಸ್ವತಃ ಹಣಕಾಸು ಸಚಿವರು. ಯಾವೆಲ್ಲಾ ಹಗರಣ ನಡೆದಿದೆ, ಎಲ್ಲವೂ ತನಿಖೆ ಮಾಡಬೇಕು. ಬಿಜೆಪಿಗೆ ತಿರುಗುಬಾಣ ಆದರೂ ಎದುರಿಸುತ್ತೇವೆ. ಬೈರತಿ ಸುರೇಶ್ ಅವರು ಸಿಎಂಗೆ ಪರಮಾಪ್ತರಿದ್ದಾರೆ. ಹಾಗಾಗಿ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಸಿಎಂ ತವರಿನ ಮುಡಾದಲ್ಲಿ 4 ಸಾವಿರ ಕೋಟಿ ಹಗರಣ ಆಗಿದೆ. ಬೈರತಿ ಸುರೇಶ್ ಅವರು ಮೈಸೂರಲ್ಲಿ ಅಧಿಕಾರಿಗಳ ಸಭೆ ಮಾಡಿದ್ದರು, ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಆದರೆ ಅವರನ್ನು ಸಸ್ಪೆಂಡ್ ಮಾಡಿಬೇಕಿತ್ತು. ಇವರ ಬುಡಕ್ಕೆ ಬರುತ್ತೆ ಅಂತ ಸಸ್ಪೆಂಡ್ ಮಾಡಿಲ್ಲ. ಕಡತಗಳನ್ನ ತಿದ್ದುಪಡಿ ಮಾಡಲು ಬೈರತಿ ಸುರೇಶ್ ತಂದಿದ್ದಾರೆ. ಯಾವುದೇ ತಿದ್ದುಪಡಿ ಮಾಡಿದ್ರೂ ಭ್ರಷ್ಟಾಚಾರ ಹೊರಗೆ ಬರಲಿದೆ. ಬಿಜೆಪಿ ಅವಧಿಯದ್ದೂ ಸೇರಿಸಿ, ಇವರ ಸರ್ಕಾರದ ಭ್ರಷ್ಟಾಚಾರ ತನಿಖೆ ಮಾಡಲಿ. ಅಲ್ಲಿಯವರೆಗೂ ಸಿಎಂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

Continue Reading

ಕರ್ನಾಟಕ

Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

Mangalore News: ಮಂಗಳೂರಿನ ಬಲ್ಮಠ ರೋಡ್ ಸಮೀಪದ ರೋಹನ್ ಕಾರ್ಪೋರೇಶನ್‌ಗೆ ಸೇರಿದ ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದೆ.

VISTARANEWS.COM


on

Mangalore News
Koo

ಮಂಗಳೂರು: ನಗರದಲ್ಲಿ (Mangalore News) ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದಿದ್ದು, ಮಣ್ಣಿನಡಿ‌ ಇಬ್ಬರು ಕಾರ್ಮಿಕರು ಸಿಲುಕಿದ್ದಾರೆ. ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದ ಮಣ್ಣಿನ‌ ದಿಬ್ಬ ಸಡಿಲಗೊಂಡಿದ್ದರಿಂದ ಮಣ್ಣು ಕುಸಿದಿದೆ.

ಮಂಗಳೂರಿನ ಬಲ್ಮಠ ರೋಡ್ ಸಮೀಪದ ರೋಹನ್ ಕಾರ್ಪೋರೇಶನ್‌ಗೆ ಸೇರಿದ ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದೆ. ಬಿಹಾರ ಮೂಲದ ಚಂದನ್ ಮತ್ತು ರಾಜಕುಮಾರ್ ಮಣ್ಣಿನಡಿ ಸಿಲುಕಿರುವ ಕಾರ್ಮಿಕರು.

ಮಣ್ಣಿನಡಿ ಸಿಲುಕಿರುವ ಇಬ್ಬರು ಕಾರ್ಮಿಕರು ಕಾಣುತ್ತಿದ್ದು, ಅವರ ಜತೆ ರಕ್ಷಣಾ ತಂಡದ ಸಿಬ್ಬಂದಿ ಸಂಪರ್ಕ ಸಾಧಿಸಿದ್ದಾರೆ. ಸ್ಟ್ರೆಚರ್ ಜೊತೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕಟ್ಟಡ ಕಾಮಗಾರಿ ವೇಳೆ ಒಂದು ಭಾಗದ ಮಣ್ಣು ಕುಸಿದಿದ್ದರಿಂದ ಅವಘಡ ಸಂಭವಿಸಿದೆ.

ಇದನ್ನೂ ಓದಿ | Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ಆಲದ ಮರ; ಮನೆಯಲ್ಲಿದ್ದವರು ಪಾರು

ಉಡುಪಿ: ಬಿರುಗಾಳಿ ಸಹಿತ ಭಾರಿ ಮಳೆಗೆ ನಗರದ ವಸಂತಿ ಶೆಟ್ಟಿ ಎಂಬುವವರ ಮನೆ ಮೇಲೆ ಆಲದ ಮರ ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಘಟನೆ ನಡೆದ ವೇಳೆ ವಸಂತಿ ಶೆಟ್ಟಿ, ಮಗಳು, ಮೊಮ್ಮಕ್ಕಳು ಮನೆಯಲ್ಲಿದ್ದರು.

ಮರ ಬಿದ್ದಿದ್ದರಿಂದ ಮನೆಯ ಎರಡು ಕೊಠಡಿಗಳ ಮೇಲ್ಚಾವಣಿ ಕುಸಿದು ಬಿದ್ದಿದೆ. ಮನೆಯ ಸದಸ್ಯರು ಬೇರೆ ಕೋಣೆಯಲ್ಲಿ ಮಲಗಿದ್ದರು, ಇದರಿಂದ ಅಪಾಯ ತಪ್ಪಿದೆ. ಅವಘಡದಿಂದ ಸೈಕಲ್ ಶಾಪ್, ಜನಪ್ರಿಯ ಸೌಂಡ್ಸ್, ಸಲೂನ್‌ಗೆ ಹಾನಿಯಾಗಿದೆ.

Physical Abuse: ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್‌ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್‌ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading
Advertisement
Viral Video
Latest34 seconds ago

Viral Video: ರಜೆಯಲ್ಲೂ ಮಗುವಿನ ಹೋಮ್‌ ವರ್ಕ್ ನೋಡಿ ಸಿಟ್ಟಾದ ತಾಯಿ ಮಾಡಿದ್ದೇನು? ವಿಡಿಯೊ ನೋಡಿ!

Ram charan the Indian House on set
ಟಾಲಿವುಡ್7 mins ago

Ram Charan: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಸಿನಿಮಾ!

Family drama Kannada movie song
ಕರ್ನಾಟಕ9 mins ago

Kannada New Movie: ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಸಿನಿಮಾದ ಸಾಂಗ್!

Suraj Revanna Case
ಕರ್ನಾಟಕ11 mins ago

Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

Sexual Harassment
Latest12 mins ago

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Koo Shut Down
ಕರ್ನಾಟಕ22 mins ago

Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Ananth Ambani
Latest31 mins ago

Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

kanaganahalli mid day meal
ಕಲಬುರಗಿ33 mins ago

Mid Day Meal: ಕಲಬುರಗಿಯಲ್ಲಿ ಬಿಸಿಯೂಟ ಉಂಡ 33 ವಿದ್ಯಾರ್ಥಿಗಳು ಅಸ್ವಸ್ಥ; 3 ದಿನಗಳಲ್ಲಿ ಎರಡನೇ ಘಟನೆ

Yakshagana artist Tulsi Hegade added to the world record list
ಕರ್ನಾಟಕ34 mins ago

Sirsi News: ವಿಶ್ವಶಾಂತಿಗೆ ಯಕ್ಷ ನೃತ್ಯ ಕೊಡುಗೆ; ವಿಶ್ವದಾಖಲೆ ಪಟ್ಟಿಗೆ ತುಳಸಿ ಹೆಗಡೆ ಸೇರ್ಪಡೆ

Hardik Pandya
ಕ್ರೀಡೆ34 mins ago

Hardik Pandya: ಆಲ್​ರೌಂಡರ್​ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಹಾರ್ದಿಕ್​ ಪಾಂಡ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌