Site icon Vistara News

Student Death: 9ನೇ ತರಗತಿ ವಿದ್ಯಾರ್ಥಿ ಆಟ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು

student death tumkur

ತುಮಕೂರು: 9ನೇ ತರಗತಿ ವಿದ್ಯಾರ್ಥಿಯೊಬ್ಬ ಆಟ ಆಡುತ್ತಿರುವಾಗ‌ಲೇ ದಿಢೀರ್ ಕುಸಿದುಬಿದ್ದು ಸಾವಿಗೀಡಾದ ಆತಂಕಕಾರಿ ದುರ್ಘಟನೆ (Student Death) ನಡೆದಿದೆ. ತುಮಕೂರು‌ (Tumkur news) ತಾಲೂಕು‌ ಸಿರಿವಾರ‌ದಲ್ಲಿ ಘಟನೆ ನಡೆದಿದ್ದು, ಧನು (14) ಎಂಬ ವಿದ್ಯಾರ್ಥಿ ಮೃತ ದುರ್ದೈವಿ.

ಸಿರಿವಾರದ ಸರ್ಕಾರಿ ಪ್ರೌಢಾಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಬಾಲಕ ಕುಸಿದು ಬಿದ್ದಿದ್ದ. ಗೆಳೆಯರ ಜೊತೆಗೆ ವಾಲಿಬಾಲ್ ಆಡುವ ವೇಳೆ ಈತ ಕುಸಿದು ಬಿದ್ದಿದ್ದು, ಗೆಳೆಯರು ಬಳಿ ಬಂದು ನೋಡಿದಾಗ ಉಸಿರಾಟ ನಿಂತಿತ್ತು. ನಂತರ ಅಧ್ಯಾಪಕರು ಈತನ ಪೋಷಕರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಜೀವ ಹೋಗಿತ್ತು.

ಸಾವಿಗೆ ನಿಖರ ಕಾರ‌ಣ ತಿಳಿದು ಬಂದಿಲ್ಲ. ಹದಿನಾಲ್ಕು ವರ್ಷದ ಹುಡುಗನ ದಿಡೀರ್‌ ಸಾವು ಆತಂಕ ಮೂಡಿಸಿದ್ದು, ಇಷ್ಟು ಸಣ್ಣ ಮಕ್ಕಳಲ್ಲೂ ಹೃದಯಾಘಾತದಂಥ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದಿದೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ

ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕನ ಕತ್ತು ಸೀಳಿ ಸ್ವಂತ ಚಿಕ್ಕಪ್ಪನೇ ಕೊಲೆ (Murder Case) ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿಯಲ್ಲಿ ನಡೆದಿದೆ. ಗೌತಮ್ (3) ಕೊಲೆಯಾದ ಬಾಲಕ. ರಂಜಿತ್ (30) ಬಾಲಕನ ಕತ್ತು ಸೀಳಿದ ಆರೋಪಿ. ಗೌತಮ್ (3) ಕೊಲೆಯಾದ ಬಾಲಕ. ರಂಜಿತ್ (30) ಬಾಲಕನ ಕತ್ತು ಸೀಳಿದ ಆರೋಪಿ. ಶಿರಿಷ-ಮಂಜುನಾಥ್ ದಂಪತಿ ಪುತ್ರ ಗೌತಮ್‌ನನ್ನು ಪಾಳುಬಿದ್ದ ಮನೆಗೆ ಕರೆದೊಯ್ದ ಚಿಕ್ಕಪ್ಪ, ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆ

ವಿಜಯನಗರ: ಹರಪನಹಳ್ಳಿ ತಾಲೂಕಿನ ನಂದಾಲ್ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವುದು ಬುಧವಾರ ನಡೆದಿದೆ. ಕೌಶಿಕ್(15) ಮತ್ತು ಸಮೀರ್ (14) ನಾಪತ್ತೆಯಾದ ಬಾಲಕರು. ಹರಪನಹಳ್ಳಿ ಪಟ್ಟಣದ ಸಿಲಾರ್ ಗೇರಿಯ ಗ್ರಾಮದ ಬಾಲಕರು ನದಿಗೆ ಈಜಲು ಹೋಗಿದ್ದಾಗ ನಾಪತ್ತೆಯಾಗಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಭದ್ರಾ ಹಿನ್ನೀರಿಯಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರ ಸಾವು

ಚಿಕ್ಕಮಗಳೂರು: ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರು ದುರ್ಮರಣ ಹೊಂದಿರುವ ಘಟನೆ (Raft sinking) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೂವರ ಶವಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಮೂವರ ಶವಕ್ಕಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ | Actor Darshan: ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮೀ; ದರ್ಶನ್‌ ಕುಟುಂಬದ ವಿರುದ್ಧ ಸುದ್ದಿ ಪ್ರಸಾರಕ್ಕೆ ನಿರ್ಬಂಧ!

Exit mobile version