ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 26 ವರ್ಷದ ಶ್ರದ್ಧಾ ವಾಲ್ಕರ್ ಹತ್ಯೆಗೀಡಾದ ಪ್ರಕರಣದ ಕುರಿತು ಬಗೆದಷ್ಟೂ ಮಾಹಿತಿ ಹೊರಬರುತ್ತಿದೆ. ಆರು ತಿಂಗಳ ಹಿಂದೆಯೇ ಹತ್ಯೆಗೈದು, ದೇಹವನ್ನು 35 ತುಂಡು ಮಾಡಿ, ದೆಹಲಿಯ 18 ಕಡೆ ತುಂಡುಗಳನ್ನು ಎಸೆದ ಅಫ್ತಾಬ್ ಅಮೀನ್ ಪೂನಾವಾಲಾನ ಭೀಕರ ಕೃತ್ಯದ (Delhi Crime) ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಮೂಲಗಳ ಪ್ರಕಾರ ಇಂಗ್ಲಿಷ್ ಹಾಗೂ ಹಿಂದಿ ವೆಬ್ ಸಿರೀಸ್‌ನಿಂದ ಪ್ರೇರಣೆಗೊಂಡು ಪೂನಾವಾಲಾ ಇಂತಹ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಅಪರಾಧದ ಕುರಿತು ಅಮೆರಿಕದಲ್ಲಿ ನಿರ್ಮಿಸಿರುವ ಡೆಕ್ಸ್‌ಟರ್ (Dexter) ಟಿವಿ ಶೋನಿಂದ ಪೂನಾವಾಲಾ ಪ್ರೇರಣೆಗೊಂಡು ಪ್ರಿಯತಮೆ ಶ್ರದ್ಧಾಳ ದೇಹವನ್ನು ತುಂಡರಿಸಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಇದರ ಬೆನಲ್ಲೇ, ಆತನು ಹಿಂದಿಯ ‘ದಿ ಫ್ಯಾಮಿಲಿ ಮ್ಯಾನ್-2’ (The Family Man-2) ವೆಬ್‌ಸಿರೀಸ್‌ನಿಂದಲೂ ಆತ ಪ್ರೇರಣೆಗೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡೂ ಸಿರೀಸ್‌ನಲ್ಲಿ ಏನಿದೆ?
ಡೆಕ್ಸ್‌ಟರ್ ಟಿವಿ ಶೋನಲ್ಲಿಯೂ ಪಾತ್ರಧಾರಿಯು ತನ್ನ ತಾಯಿಯ ದೇಹವನ್ನೂ ಸೇರಿ ಹಲವರ ದೇಹ ತುಂಡರಿಸಿ ಸಮುದ್ರದ ಆಳಕ್ಕೆ ಎಸೆಯುತ್ತಾನೆ. ಹಾಗೆಯೇ, ಹಿಂದಿಯ ದಿ ಫ್ಯಾಮಿಲಿ ಮ್ಯಾನ್ ಸಿರೀಸ್‌ನ ಎರಡನೇ ಸೀಸನ್‌ನಲ್ಲಿಯೂ ರಾಜಿ (ಸಮಂತಾ) ಶವಗಳ ಭಾಗಗಳನ್ನು ತುಂಡರಿಸಿ, ಅರಣ್ಯದಲ್ಲಿ ಎಸೆಯುತ್ತಾರೆ. ಹಾಗಾಗಿ, ಇವೆರಡೂ ಸಿರೀಸ್‌ಗಳನ್ನು ನೋಡಿ ಅಮೀನ್ ಇಂತಹ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ | Delhi Crime | ಡೇಟಿಂಗ್ ಆ್ಯಪ್‌ನಿಂದ ಅಫ್ತಾಬ್‌ನ ಪರಿಚಯ ಆಯ್ತು, ಜಾಲತಾಣ ಆ್ಯಪ್ ಶ್ರದ್ಧಾ ಕೊಲೆ ಪತ್ತೆಗೆ ಕಾರಣವಾಯ್ತು!