Site icon Vistara News

Shraddha Murder Case | ಬ್ಯಾಗ್‌ ಹಿಡಿದು ಅಫ್ತಾಬ್‌ ಓಡಾಡುತ್ತಿರುವ ವಿಡಿಯೊ ಲಭ್ಯ, ಬ್ಯಾಗಲ್ಲಿತ್ತಾ ಶ್ರದ್ಧಾ ಬಾಡಿ?

Shraddha Murder Case CCTV

ನವದೆಹಲಿ: ತಂದೆ-ತಾಯಿಯನ್ನು ತೊರೆದು, ಪ್ರೀತಿಯ ಅರಸಿ ಬಂದ ಪ್ರಿಯತಮೆ ಶ್ರದ್ಧಾ ವಾಳ್ಕರ್‌ಳನ್ನು ಹತ್ಯೆಗೈದ ಅಫ್ತಾಬ್‌ ಅಮೀನ್‌ ಪೂನಾವಾಲಾನು (Shraddha Murder Case) ದೆಹಲಿಯ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಕೈಯಲ್ಲಿ ಬ್ಯಾಗ್‌ ಹಿಡಿದು ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಬ್ಯಾಗ್‌ನಲ್ಲಿ ಶ್ರದ್ಧಾಳ ದೇಹದ ತುಂಡುಗಳು ಇದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್‌ 18ರಂದು ರಸ್ತೆ ಮೇಲೆ ವ್ಯಕ್ತಿಯೊಬ್ಬ ಓಡಾಡುತ್ತಿರುವ ದೃಶ್ಯದ ವಿಡಿಯೊ ಲಭ್ಯವಾಗಿದೆ. ಇದರ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ವರದಿ ಪ್ರಕಾರ, ತಿರುಗಾಡುತ್ತಿರುವುದು ಅಫ್ತಾಬ್‌ ಪೂನಾವಾಲಾನೇ ಆಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಪೊಲೀಸರೂ ದೃಢಪಡಿಸಿದ್ದಾರೆ. ಆದರೆ, ಬ್ಯಾಗಲ್ಲಿ ಏನಿತ್ತು ಎಂಬುದು ದೃಢಪಟ್ಟಿಲ್ಲ.

ಮೇ 18ರಂದು ಶ್ರದ್ಧಾ ವಾಳ್ಕರ್‌ಳನ್ನು ಹತ್ಯೆಗೈದ ಅಫ್ತಾಬ್‌, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ದೆಹಲಿಯ ಹಲವೆಡೆ ಎಸೆದಿದ್ದಾನೆ. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಆತನನ್ನು ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ. ಹಾಗೆಯೇ, ಮಂಪರು ಪರೀಕ್ಷೆ ನಡೆಸಲು ಕೂಡ ಕೋರ್ಟ್‌ ಅನುಮತಿ ನೀಡಿದೆ.

ಇದನ್ನೂ ಓದಿ | Shraddha Murder Case | 2 ವರ್ಷದಿಂದಲೂ ಶ್ರದ್ಧಾ ಮೇಲೆ ಅಫ್ತಾಬ್ ಸತತ ಹಲ್ಲೆ, ಆಕೆಯ ಗೆಳೆಯ ಹೇಳಿದ್ದೇನು?

Exit mobile version